ಮಹಾಲಿಂಗಪುರ: ‘ಇಂಗ್ಲಿಷ್ನಲ್ಲಿ ಓದಿದ ನಮ್ಮ ಮಕ್ಕಳು ಬ್ರಿಟಿಷ್, ಅಮೆರಿಕನ್ ಸಂಸ್ಕೃತಿ ಹೊಗಳುತ್ತಾರೆಯೇ ಹೊರತು ಭಾರತೀಯ ಸಂಸ್ಕೃತಿಯನ್ನಲ್ಲ. ಹೊರ ದೇಶಕ್ಕೆ ಮಕ್ಕಳನ್ನು ಕಳಿಸುವ ಮೂಲಕ ಅವರನ್ನು ಮಾರಿಕೊಳ್ಳುತ್ತಿದ್ದೇವೆ’ ಎಂದು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಪ್ರೊ.ಬಸವರಾಜ ಡೋಣೂರ ಹೇಳಿದರು.

ಪಟ್ಟಣದ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪದವಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಸಾಮಾಜಿಕ ವಿಜ್ಞಾನ ಗಳು ಮತ್ತು ಭಾಷೆಗಳ ಸಮಕಾಲೀನ ಚರ್ಚೆಗಳು’ ವಿಷಯ ಕುರಿತ ರಾಷ್ಟ್ರಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ‘ನಾವು ನಮ್ಮ ಭಾಷಾ ಸಾಮರ್ಥ್ಯ, ತಿಳಿವಳಿಕೆ ಮತ್ತು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಮೊದಲು ನಮ್ಮ ಮನೆ ಕಟ್ಟಬೇಕು, ನಂತರ ಸಮಾಜ, ನಾಡು ಮತ್ತು ದೇಶವನ್ನು ಕಟ್ಟಬೇಕು. ಇದನ್ನೆಲ್ಲ ಮಾಡಿದ ಮೇಲೆ ಬೇರೆಯ ವರನ್ನು ಪ್ರೀತಿಸಬೇಕು. ನಮ್ಮ ಮಕ್ಕಳಿಗೆ ಕನ್ನಡ ಪದಗಳೇ ಗೊತ್ತಿಲ್ಲ. ಕನ್ನಡದಲ್ಲಿ ಹತ್ತು ನಿಮಿಷ ಯಾರಾದರೂ ಮಾತನಾಡಿ ದರೆ, ಅದರಲ್ಲಿ ಎಂಟು ನಿಮಿಷ ಇಂಗ್ಲೀಷ್ ಪದಗಳೇ ಇರುತ್ತವೆ’ ಎಂದರು.

ಗೋವಾ ವಿಶ್ವವಿದ್ಯಾಲಯದ ಡಿ.ಡಿ.ಕೋಸಂಬಿ ಮಾತನಾಡಿದರು. ಪ್ರಾಚಾರ್ಯ ಬಿ.ಎನ್.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಹೇಶ ಗಜಪ್ಪನವರ, ಎಂ.ಎಸ್.ಮಿರ್ಜೇಕರ, ಎಂ.ಎನ್.ಬೆಣ್ಣೂರ, ಎಸ್.ಪಿ.ತಳವಾರ ಮಾತನಾಡಿದರು. ಎಸ್.ಡಿ.ಸೋರಗಾಂವಿ, ಎ.ಎಂ.ಉಗಾರೆ, ಸಿ.ಎಂ.ಐಗಳಿ, ಟಿ.ಡಿ.ಡಂಗಿ, ಎಸ್.ಎಸ್.ಕೋಳಿ, ಕೆ.ಎಸ್.ಪಾಟೀಲ ಇದ್ದರು.

ರಾಷ್ಟ್ರದ ವಿವಿಧ ಭಾಗಗಳ ಪದವಿ ಪ್ರಾಧ್ಯಾಪಕರು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಆನ್ಲೈನ್ ಹಾಗೂ ಆಫ್ಲೈನ್ ವಿಧಾನದಲ್ಲಿ ವಿಷಯ ಮಂಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-19-955712211

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.