ಮಹಾಲಿಂಗಪುರ: ಪಟ್ಟಣದ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪದವಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಪ್ರಾಧ್ಯಾಪಕರು ಮತ್ತು ಸಹಪಾಠಿಗಳಿಂದ ದೇಣಿಗೆ ಸಂಗ್ರಹಿಸಿ ಅನಾಥ ಮತ್ತು ವೃದ್ಧಾಶ್ರಮಕ್ಕೆ ವಿವಿಧ ಸಾಮಗ್ರಿ ನೀಡಿ ಸಾಮಾಜಿಕ ಕಳಕಳಿ ಮೆರೆದರು.

ತಮ್ಮ ಕಲಿಕೆಯ ಕೊನೆಯ ವರ್ಷದ ಮೋಜಿಗಾಗಿ ಮಾಡಿದ ರೀಲ್ಸ್ನಿಂದ ₹7 ಸಾವಿರ ಸಂಗ್ರಹಿಸಿ ಜಮಖಂಡಿಯ ಜೈನ ಅನಾಥಾಶ್ರಮ ಮತ್ತು ವೃದ್ಧಾಶ್ರಮಕ್ಕೆ ಕರೆ ಮಾಡಿ ಅಗತ್ಯ ಸಾಮಗ್ರಿಗಳ ಪಟ್ಟಿ ಮಾಡಿ, ಸಾವಯವ ಬೆಲ್ಲ, ಸಕ್ಕರೆ, ಚಹಾಪುಡಿ, ಸಾಬೂನು, ಎಣ್ಣೆ, ಬೇಳೆ, ಶೇಂಗಾ, ಚುರುಮುರಿ, ಐಸ್ಕ್ರೀಮ್, ಬಿಸ್ಕಿಟ್, ಟವಲ್ ಸೇರಿದಂತೆ ವಿವಿಧ ಪದಾರ್ಥಗಳ ಜೊತೆ, ಕ್ರೀಡಾ ಸಾಮಗ್ರಿ, ಕಲಿಕಾ ಸಾಮಗ್ರಿಗಳನ್ನೂ ಖರೀದಿಸಿ ವಿತರಿಸಿದರು.

ಅನಾಥಾಶ್ರಮದಲ್ಲಿ ಅಲ್ಲಿನ ಮಕ್ಕಳೊಂದಿಗೆ ಆಟವಾಡಿ, ರಂಜಿಸಿ, ಅವರಿಗೆ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಿದರು. ವೃದ್ಧರೊಂದಿಗೆ ಬೆರೆತು ಅವರ ಅನುಭವ ಕೇಳಿ ಕಣ್ಣೀರಾದರು. ಜೈನ ಅನಾಥಾಶ್ರಮದ ರೂವಾರಿ ಮುತ್ತಣ್ಣ ಅರಗಿ ವಿದ್ಯಾರ್ಥಿಗಳ ಕಳಕಳಿ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ಕಲ್ಲಹಳ್ಳಿಯ ಸತ್ಯಕಾಮ ಪ್ರತಿಷ್ಠಾನಕ್ಕೆ ಭೇಟಿ ನೀಡಿ ಅಲ್ಲಿ ನಡೆಯುತ್ತಿದ್ದ ಸಂಸ್ಕಾರ ಶಿಬಿರದ ವೀಣಾ ಬನ್ನಂಜೆ ಅವರನ್ನು ಭೇಟಿ ಮಾಡಿ ಅವರಸೇವೆಗೆ ಮನಸೋತು ಪ್ರತಿಷ್ಠಾನಕ್ಕೆ₹2 ಸಾವಿರ ಸಹಾಯಧನ ನೀಡಿದರು.

ಪ್ರಾಚಾರ್ಯ ಎನ್.ಬಿ.ಪಾಟೀಲ, ಇಂಗ್ಲಿಷ್ ವಿಭಾಗದ ಚಿದಾನಂದ ಐಗಳಿ, ಸಮಾಜಶಾಸ್ತ್ರ ವಿಭಾಗದ ಶಿವಲಿಂಗ ಸಿದ್ನಾಳ, ಇಂಗ್ಲೀಷ್ ವಿಭಾಗದ ವಿದ್ಯಾರ್ಥಿಗಳಾದ ಬಸವರಾಜ ಮಾಳಿ, ಕಾವ್ಯಾ ಚಿಕ್ಕನ್ನವರ, ಪೂಜಾ ಹವಾಲ್ದಾರ, ಮಂಜು ಲಾಲಿಬುಡ್ಡಿ, ಸಚಿನ ಮಹಾಲಿಂಗಪುರ, ಸುಪ್ರಿಯಾ ಕಂಬಾರ, ಸಚಿನ ಕುದರಿಮನಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-19-876554742

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.