ಕಬ್ಬೂರ: ‘ನಮ್ಮ ಹಳ್ಳಿ ಮಕ್ಕಳ ಸಲುವಾಗಿ ನಾನು ಜನಿಸಿದ ಹಳ್ಳಿಯಲ್ಲಿ ಉನ್ನತ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದೇನೆ. 184 ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡಿದ್ದೇನೆ. ಇದನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಿದ್ದು ಹೆಮ್ಮೆ ಅನಿಸುತ್ತದೆ’ ಎಂದು ಉದ್ಯಮಿ, ಶಿಕ್ಷಣ ಪ್ರೇಮಿ ಮಹೇಶ ಬೆಲ್ಲದ ಹೇಳಿದರು.

ಪಟ್ಟಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಅವರು, ‘ಹಳ್ಳಿ ಮಕ್ಕಳು ಶಿಕ್ಷಣ ಪಡೆದು ಉನ್ನತ ಹುದ್ದೆಗೆ ಏರಿದರೆ ನನಗೆ ಸಂತಸ. ಇದನ್ನು ನಾನು ಹಲವು ಹಳ್ಳಿಗಳಲ್ಲಿ ನೋಡಿದ್ದೇನೆ. ಪಾಲಕರು ತಮ್ಮ ಮಕ್ಕಳಿಗೆ ಸಂಪೂರ್ಣವಾಗಿ ಶಿಕ್ಷಣ ಕೊಡಿಸಬೇಕು. ಇದರಿಂದ ನಿಮ್ಮ ಜೀವನಕ್ಕೂ ಮುಂದಿನ ದಿನಗಳಲ್ಲಿ ಲಾಭವಾಗುತ್ತದೆ’ ಎಂದು ಅಭಿಪ್ರಾಪಟ್ಟರು.

ಶಿಕ್ಷಕ ಮಹೇಶ ಗೋಜಗೋಜಿ, ಪ್ರಾಂಶುಪಾಲ ಕಲ್ಪನಾ ನಗರ, ವೀರೇಶ ಪಾಟೀಲ, ಶ್ರೀಪಾದ ಕುಂಬಾರ ಮಾತನಾಡಿದರು.

ಸಂಕೇಶ್ವರ ಹಿರಾ ಶುಗರ್ ನಿರ್ದೇಶಕ ಸುರೇಶ ಬೆಲ್ಲದ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರಕಾಶ ಬೆಲ್ಲದ, ಕಬ್ಬೂರ ಅರ್ಬನ್ ಬ್ಯಾಂಕಿನ ಅಧ್ಯಕ್ಷ ರಮೇಶ ಬೆಲ್ಲದ, ಶಾಂತಿನಾಥ ಖೇಮಲಾಪುರೆ, ಸಿದ್ದಯ್ಯ ಮಠದ, ಆರ್.ಕೆ.ಬಾಗಿ, ಶಿವಾನಂದ ಐಹೊಳೆ ಇದ್ದರು.ಪಟ್ಟಣದ ವಿವಿಧ ಸಂಘ– ಸಂಸ್ಥೆಗಳು, ದೇವಸ್ಥಾನಗಳ ಟ್ರಸ್ಟಿಗಳು, ಪಟ್ಟಣ ಹಾಗೂ ಗ್ರಾಮದ ಸಾರ್ವಜನಿಕರು ಸನ್ಮಾನಿಸಿದರು. ಲಕ್ಷ್ಮಿ ಮಂಚಣ್ಣವರ ಸ್ವಾಗತಿಸಿದರು. ಸಿದ್ದಪ್ಪ ಮುರಚಿಟ್ಟಿ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-21-1565852901

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.