ಮಾಲೂರು: ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಲೂರು ಶಾಖೆ 14 ಪ್ರತಿನಿಧಿ ಸ್ಥಾನಗಳಿಗೆ ಇದೇ 19ರಂದು ನಡೆಯುವ ಚುನಾವಣೆಯಲ್ಲಿ ತಮ್ಮ ತಂಡದ ಅಭ್ಯರ್ಥಿಗಳಿಗೆ ಬೆಂಬಲಿಸುವಂತೆ ಹಾಲಿ ಅಧ್ಯಕ್ಷ ಷಣ್ಮುಖಯ್ಯ ಕೋರಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ತಮ್ಮ ಆಡಳಿತಾವಧಿಯಲ್ಲಿ ಶಿಕ್ಷಕರ ವೇತನ, ಬಡ್ತಿ, ಟೈಮ್ ಬಾಂಡ್, ಸೇವಾ ಪುಸ್ತಕ ನೋಂದಣಿ ಸೇರಿದಂತೆ ಹತ್ತಾರು ಸಮಸ್ಯೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲಾಗಿದೆ ಎಂದು ತಿಳಿಸಿದರು.

ನಿವೃತ್ತ ಶಿಕ್ಷಕರಿಗೆ ಶಾಲೆಗಳಲ್ಲೇ ಗೌರವ ಸಮರ್ಪಣೆ ಮಾಡಲಾಗಿದೆ. ಶಾಸಕ ಕೆ.ವೈ.ನಂಜೇಗೌಡ ಅವರ ಸಹಕಾರದಿಂದ ಸ್ಥಗಿತಗೊಂಡಿದ್ದ ಗುರುಭವನ ಕಾಮಗಾರಿ ಪುನರಾರಂಭಗೊಂಡು ಅಂತಿಮ ಹಂತ ತಲುಪಿದೆ ಎಂದರು.

ಮುಂದಿನ ಐದು ವರ್ಷಗಳ ಅವಧಿಗೆ ಭಾನುವಾರ ನಡೆಯುವ ಚುನಾವಣೆಯಲ್ಲಿ ನಿಕಟ ಪೂರ್ವ ಅಧ್ಯಕ್ಷ ಆರ್.ನರಸಿಂಹ ಸೇರಿದಂತೆ 14 ಅಭ್ಯರ್ಥಿಗಳಿಗೆ ಬೆಂಬಲಿಸಬೇಕಾಗಿ ಕೋರಿದರು. ಷಣ್ಮುಖಯ್ಯ, ನರಸಿಂಹ, ಮುನಿರಾಜು, ಅಶೋಕ್, ಚಂದ್ರಕಲಾ, ತಿಮ್ಮರಾಯಪ್ಪ, ವೆಂಕಟೇಶಪ್ಪ, ರಾಜಮ್ಮ, ಭಗವತ್ ಸಿಂಗ್, ಅರ್ಜುನ್, ಚನ್ನಪ್ಪ, ಶೈಲಜಾ ದೇವಿ, ಲಲಿತಮ್ಮ, ನಪ್ರೀನ್ ತಾಜ್ ನಾಮಪತ್ರ ಸಲ್ಲಿಸಿದರು. ಕೊನೆಯ ದಿನ ಶನಿವಾರ 32 ನಾಮಪತ್ರಗಳು ಸಲ್ಲಿಕೆಯಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-18-108161256

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.