ಭಾರತೀನಗರ: ಆಧುನಿಕತೆ ಬೆಳೆದಂತೆಲ್ಲಾ ಗ್ರಾಮೀಣ ಪ್ರದೇಶಗಳ ಜೀವಾಳವಾಗಿದ್ದ ಜಾನಪದ ಕಲೆಗಳು, ಕ್ರೀಡೆಗಳು ನಾಶವಾಗುತ್ತಿವೆ ಎಂದು ಸಾಹಿತಿ ಕೂಡಲೂರು ವೆಂಕಟಪ್ಪ ವಿಷಾದಿಸಿದರು.

ಸಮೀಪದ ಮೆಣಸಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಸ್ಪರ್ಶ ಮಕ್ಕಳ ಕೇಂದ್ರ, ಮೇಲು ಕೋಟೆ ದೃಶ್ಯ ಟ್ರಸ್ಟ್, ಮಂಡ್ಯ ಕರ್ನಾಟಕ ಸಂಘ ಗ್ರಾಮದ ಗ್ರಾಮ ಪಂಚಾಯಿತಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇವುಗಳ ಸಹಯೋಗದಲ್ಲಿ ಒಂದು ತಿಂಗಳಿಂದ ಹಮ್ಮಿಕೊಳ್ಳಲಾಗಿದ್ದ ಪಡಸಾಲೆ ಮಕ್ಕಳ ಸಾಂಸ್ಕೃತಿಕ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶಗಳು ಜಾನಪದ ಕಲೆಗಳ ತವರಾಗಿದ್ದವು. ಈಗ ಗ್ರಾಮಾಂತರ ಪ್ರದೇಶಗಳಿಗೂ ಆಧುನಿಕತೆಯ ಬಿಸಿ ತಟ್ಟಿದ್ದು, ಜಾನಪದ ಕಲೆಗಳು ಇದರಲ್ಲಿ ಸಿಲುಕಿ ಸುಟ್ಟು ಕರಕಲಾಗಿವೆ. ಹಳ್ಳಿಗಳ ಕಥೆಯೇ ಹೀಗಾದರೆ ನಗರ ಪ್ರದೇಶಗಳಲ್ಲಿ ಜಾನಪದ ಕಲೆಗಳನ್ನು ನೋಡಲು ಸಾಧ್ಯವೇ ಇಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಮಂಡ್ಯದ ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ವಿನಯ್ ಮಾತನಾಡಿ, ಮಕ್ಕಳನ್ನು ಚೌಕಟ್ಟಿನಲ್ಲಿ ಬೆಳೆಸುವುದಕ್ಕಿಂತ ಅವರಿಗೆ ಯಾವುದನ್ನು ಕಲಿಯಲು ಇಷ್ಟವೋ ಅವುಗಳನ್ನು ಕಲಿಯಲು ಪೋಷಕರು ಸ್ವಾತಂತ್ರ್ಯ ನೀಡಬೇಕು. ಹಾಗಾದಲ್ಲಿ ಎಲ್ಲರೊಳಗಿರುವ ಒಬ್ಬ ಕಲೆಗಾರ, ನಿರ್ದೇಶಕ, ರಂಗಕರ್ಮಿ, ಸೇರಿ ಹಲವು ರಂಗಗಳಲ್ಲಿ ಹೊಸ ಮೇಧಾವಿಗಳು ಹುಟ್ಟಿಕೊಳ್ಳುತ್ತಾರೆಂದು ಹೇಳಿದರು.

ವಕೀಲ ಬೊಮ್ಮೇಗೌಡ ಮಾತನಾಡಿದರು. ಶಾಲಾ ಎಸ್ಡಿಎಂಸಿ ಅಧ್ಯಕ್ಷ ರವಿ, ಮಾಜಿ ಅಧ್ಯಕ್ಷ ಎಂ.ಟಿ.ಮಹೇಶ್, ಸ್ಪರ್ಶ ಮಕ್ಕಳ ಕೆಂದ್ರದ ಅಧ್ಯಕ್ಷ ಸಂಸ ಸುರೇಶ್, ದೃಶ್ಯ ಟ್ರಸ್ಟ್ನ ಸಂಸ್ಥಾಪಕ ಕಾರ್ಯದರ್ಶಿ ಮೇಲುಕೋಟೆ ಗಿರೀಶ್, ನೀನಾಸಂ ಕಲಾವಿದ ಯಡಗನಹಳ್ಳಿ ವೈ.ಎಂ.ಹನುಮಂತು, ರಂಗ ನಿರ್ದೇಶಕ ಹಾಗೂ ಮಜಾಭಾರತ ಮೆಂಟರ್ ಪುನೀತ್ಗೌಡ ಉಪಸ್ಥಿತರಿದ್ದರು.

ವಿವಿಧ ಗ್ರಾಮಗಳ ಶಿಬಿರಾರ್ಥಿಗಳಿಂದ ರತ್ನಮಂಜರಿ ಸ್ವಯಂವರ ಎಂಬ ರಂಗನಾಟಕ, ವಿವಿಧ ಜಾನಪದ ಕಲಾಪ್ರಕಾರಗಳನ್ನು ಪ್ರದರ್ಶಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-40-1992476383

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.