ಮಂಡ್ಯ: ‘ಮಕ್ಕಳ ಸಾಹಿತ್ಯ ಪುಸ್ತಕಗಳನ್ನು ಪ್ರಕಟಿಸಲು ಹೆಚ್ಚು ಪ್ರಕಾಶಕರು ಬರುತ್ತಿದ್ದಾರೆ, ಆದರೆ ಸರ್ಕಾರ ಈ ವಿಷಯದಲ್ಲಿ ನಿರಾಸಕ್ತಿ ತೋರುತ್ತಿದೆ’ ಎಂದು ಲೇಖಕ ಜಿ.ಎನ್. ಮೋಹನ್ ವಿಷಾದಿಸಿದರು.

ನಗರದ ಗಾಂಧಿ ಭವನದಲ್ಲಿ ಪರಿಚಯ ಪ್ರಕಾಶನದ ವತಿಯಿಂದ ಭಾನುವಾರ ನಡೆದ ಕಾರ್ಯಕ್ರಮದಲ್ಲಿ 2024ನೇ ಸಾಲಿನ ‘ಪರಿಚಯ ಮಕ್ಕಳ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.

‘ಪ್ರಸ್ತುತ ಸನ್ನಿವೇಶ ಗಮನಿಸಿದರೆ, ಮಾಧ್ಯಮ ಎಂದರೆ ಮೂಗು ಮುರಿಯುವ ಮಟ್ಟಕ್ಕೆ ಬಂದು ತಲುಪಿರುವುದು ದುರಂತ. ಈ ಪ್ರಕಾಶನದವರು ಪ್ಯಾಕೆಟ್ ಪುಸ್ತಕಗಳನ್ನು ವಿತರಿಸಿ ಓದುಗರನ್ನು ತಲುಪುವ ಕೆಲಸ ಮಾಡಿರುವುದು ಶ್ಲಾಘನೀಯ’ ಎಂದು ಅಭಿಪ್ರಾಯಪಟ್ಟರು.

‘ಕನ್ನಡ ನಾಡಿನಲ್ಲಿ ಮಕ್ಕಳ ಸಾಹಿತ್ಯವನ್ನು ಶ್ರೀಮಂತಗೊಳಿಸಬೇಕು. ಮಕ್ಕಳಿಗೆ ಏನೋ ಬೇಕೋ ಅದನ್ನು ರೂಪಿಸಿ ಅವರಿಗೆ ಸಾಹಿತ್ಯದ ಆಸಕ್ತಿ ಬೆಳೆಸುವಂತೆ ಮಾಡಬೇಕು. ಮಕ್ಕಳಿಗೆ ಮೊಬೈಲ್ನಲ್ಲಿ ಹಾಡುಗಳನ್ನು ಹಾಕಿಸಿ ಅದನ್ನು ಜೋಗುಳದ ರೀತಿ ಮಾಡಿದ್ದಾರೆ. ಇದರ ಜೊತೆಗೆ ಮಕ್ಕಳ ಸಾಹಿತ್ಯ ಪುಸ್ತಕ ಕೊಡುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಮಕ್ಕಳ ಸಾಹಿತ್ಯ ಸಂಗ್ರಹಗಾರರು ಹೆಚ್ಚಾಗಿದ್ದು, ಮಕ್ಕಳ ಸಾಹಿತ್ಯ ಅರ್ಥವಾಗದ ದುರಾವಸ್ಥೆಗೆ ಸರ್ಕಾರ ತಲುಪಿದೆ. ಮಕ್ಕಳ ಕೃತಿ ಸಂಗ್ರಹಣೆಯಲ್ಲಿ ಕಿವುಡು, ಮೂಕತನವನ್ನು ಪ್ರದರ್ಶಿಸುತ್ತಿರುವ ಸರ್ಕಾರದ ನಡೆ ಸರಿಯಲ್ಲ. ಸಾರ್ವಜನಿಕ ಗ್ರಂಥಾಲಯದಲ್ಲಿ ಮಕ್ಕಳ ಸಾಹಿತ್ಯ ಪುಸ್ತಕಗಳನ್ನು ಇಟ್ಟುಕೊಳ್ಳುತ್ತಿಲ್ಲ. ಏಕೆಂದರೆ ಪುಸ್ತಕ ಆಕಾರ ದೊಡ್ಡದು, ಪುಟಗಳ ಸಂಖ್ಯೆ ಕಡಿಮೆ ಎನ್ನುವುದನ್ನು ಪ್ರಶ್ನಿಸುತ್ತಾರೆ, ಸಾರ್ವಜನಿಕ ಶಿಕ್ಷಣ ಇಲಾಖೆಯೂ ಆತ್ಮ ಇಲ್ಲದಂತೆ ಮಕ್ಕಳ ಸಾಹಿತ್ಯ ಪುಸ್ತಕದ ಬಗ್ಗೆ ತೋರುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಲೇಖಕಿ ವಸು ವತ್ಸಲೆ ಮಾತನಾಡಿ, ‘ಮಕ್ಕಳ ಸಾಹಿತ್ಯ ಎನ್ನುವುದೇ ಅರಿವಿಲ್ಲ, ಮಕ್ಕಳ ಸಾಹಿತ್ಯ ಕಾರ್ಯಕ್ರಮದಲ್ಲಿ ಮಕ್ಕಳೇ ಇಲ್ಲವಲ್ಲ ಎನ್ನುವ ಪ್ರಶ್ನೆ ಕೇಳುತ್ತಾರೆ, ಅದರಾಚೆಗೂ ನೋಡುವ ಮನಸುಗಳು ಬೇಕಿವೆ. ಮಕ್ಕಳಿಗೋಸ್ಕರ ಬರೆಯುತ್ತಿದ್ದೇವೆ ಎನ್ನುವ ನಾವು, ನಮ್ಮೊಳಗಿರುವ ಮಗುತನವನ್ನು ಮರೆಯುತ್ತಾ ಸೋಲುತ್ತಿದ್ದೇವೆ. ಕುವೆಂಪು, ದ.ರಾ.ಬೇಂದ್ರೆ, ಜಿ.ವಿ.ರಾಜರತ್ನಂ ಸೇರಿದಂತೆ ಹಲವು ಕನ್ನಡ ಕವಿಗಳು ಮಕ್ಕಳನ್ನು ಹುಡುಕಲಿಲ್ಲ, ಬದಲಿಗೆ ಅಲ್ಲಿ ಮಕ್ಕಳ ನೆಲೆ ಹುಡುಕಿದರು. ಬಾಲ್ಯದ ಬಗ್ಗೆ ಇಣುಕಿ ನೋಡುವ ಸಾಹಿತ್ಯವಾಗಲೀ ಅಥವಾ ವಿಶ್ವವಿದ್ಯಾಲಯದಲ್ಲಿಯಾಗಲೀ ಸಿಗಲೇ ಇಲ್ಲ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಮಾತನಾಡಿ, ‘ಸಾಹಿತ್ಯಕ್ಕಿಂತ ಹೆಚ್ಚಾಗಿ ಒಂದು ರೇಖಾಚಿತ್ರ ಇಡೀ ಕೃತಿ ಸಾರಾಂಶವನ್ನೇ ಹೇಳುತ್ತದೆ. ಶಬ್ಧಗಳು ಎಷ್ಟೋ ಸಂದರ್ಭದಲ್ಲಿ ಅರ್ಥವನ್ನೇ ಕಳೆದುಕೊಂಡಿದ್ದು, ಅದನ್ನು ಸರಿಪಡಿಸಿಕೊಂಡು ಮೂಲ ಅರ್ಥದ ಶಬ್ಧವೇ ಇರಬೇಕು’ ಎಂದು ಸಲಹೆ ನೀಡಿದರು.

‘ಮಕ್ಕಳ ಸಾಹಿತ್ಯ: ನನ್ನ ಅಸ್ಮಿತೆಯ ಹುಡುಕಾಟ’ ಕುರಿತು ಶಿವಲಿಂಗಪ್ಪ ಹಂದಿಹಾಳ ಅವರು ವಿಶೇಷ ಉಪನ್ಯಾಸ ನೀಡಿದರು. ಲೇಖಕಿ ಅನುಪಮಾ ಕೆ.ಬೆಣಚಿನಮರ್ಡಿ (ಇರುವೆಗಳು ಮತ್ತು ಆಗಂತಕ), ಲೇಖಕಿ ವಸು ವತ್ಸಲೆ (ಅಂತರಿಕ್ಷದಲ್ಲಿ ವಿಹಾ) ಹಾಗೂ ಕಲಾವಿದ ಸಂತೋಷ್ ಸಸಿಹಿತ್ಲು (ಮಕ್ಕಳ ರೇಖಾಚಿತ್ರ) ಅವರಿಗೆ 2024ನೇ ಸಾಲಿನ ‘ಪರಿಚಯ ಮಕ್ಕಳ ಸಾಹಿತ್ಯ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ರೇಖಾಚಿತ್ರ ಕಲಾವಿದ ಗುಜ್ಜಾರಪ್ಪ, ಪರಿಚಯ ಪ್ರಕಾಶನದ ಸಂಸ್ಥಾಪಕ ಶಿವಕುಮಾರ್ ಅರಾಧ್ಯ, ವಿಕಸನ ಸಂಸ್ಥೆ ಅಧ್ಯಕ್ಷ ಮಹೇಶ್ ಚಂದ್ರಗುರು, ಲೇಖಕ ಟಿ.ಸತೀಶ್ ಜವರೇಗೌಡ, ಪ್ರಥಮ್ ಬುಕ್ಸ್ನ ಹೇಮಾ ಖುರ್ಸಾಪುರ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-40-1525951720

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.