ಮಂಡ್ಯ: ‘ಹೊಸ ತಲೆಮಾರಿನ ಯುವಕರು ಮೊಬೈಲ್ನಲ್ಲಿ ಮುಳುಗಿ ಹೋಗಿರುವುದು ಅಪಾಯಕಾರಿ ಸನ್ನಿವೇಶ. ಇಂತಹ ಸಂದಿಗ್ಧದಲ್ಲಿ ಹೆಣ್ಣುಮಕ್ಕಳಿಗೆ ಅವಕಾಶ ಸಿಕ್ಕರೆ ಅವರ ಕ್ರಿಯಾಶೀಲತೆ ಅನಾವರಣಗೊಳ್ಳುತ್ತದೆ’ ಎಂದು ಸಾಹಿತಿ ಬಿ. ಚಂದ್ರೇಗೌಡ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಸಂಘದ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಎಂಆರ್ಎಂ ಪ್ರಕಾಶನದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಎಚ್.ಆರ್.ಕನ್ನಿಕಾ ಅವರ ‘ಲೈಫ್ ಮಾಕ್ಟೇಲ್’ ಕವನ ಸಂಕಲನ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೂರನೇ ಶತಮಾನದಿಂದಲೂ ಸಮಾಜ ಹೆಣ್ಣನ್ನು ಶಕ್ತಿಯಾಗಿ ನೋಡದೇ ಅಬಲೆಯಾಗಿ ನೋಡಿದೆ. ‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ’ ಎಂದು ಹೇಳುವ ನೆಲದಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವುದು ವಿಷಾದಕರ. ಹಿಂದೆ ನಡೆಯುತ್ತಿದ್ದ ಸತಿಸಹಗಮನ ಪದ್ಧತಿ ಮಾನವ ಕುಲಕ್ಕೇ ನಾಚಿಕೆಗೇಡಿನ ಸಂಗತಿ ಎಂದು ಇತಿಹಾಸದ ಪುಟಗಳನ್ನು ಉಲ್ಲೇಖಿಸಿದರು. ಜೀವ ಪೊರೆಯುವ ಶಕ್ತಿ ಹೆಣ್ಣಿಗಿದೆ. ನಿಸರ್ಗವೇ ತಾಯಿಗೆ ಈ ಕೊಡುಗೆ ನೀಡಿದೆ ಎಂದರು.

ಕೃತಿ ಕುರಿತು ಪ್ರಾಂಶುಪಾಲರಾದ ಅನುಸೂಯ ಹೊಂಬಾಳೆ ಮಾತನಾಡಿ, ‘ಕವಿ ಕೊಟ್ಟದ್ದನ್ನು ಓದುಗರು ಆಸ್ವಾದಿಸಬೇಕು. ಈ ನಿಟ್ಟಿನಲ್ಲಿ ನಾನು ಇವರ ಕವಿತೆಗಳನ್ನು ಓದಿದ್ದೇನೆ. ಕವನ ಸಂಕಲನದಲ್ಲಿರುವ 64 ಕವಿತೆಗಳನ್ನು ‘ಅಕ್ಕರೆ ಸಕ್ಕರೆ’, ‘ಬೇವು ಬೆಲ್ಲ’, ‘ಸವಿ ಜೇನು’, ‘ಉಪ್ಪು ಹುಳಿ ಖಾರ’, ಚಿಗುರು ಒಗರು’ ಎಂಬ ವಿಭಾಗಗಳಲ್ಲಿ ತಮ್ಮ ಬದುಕಿನ ಹೂರಣವನ್ನು ಕಟ್ಟಿಕೊಟ್ಟಿದ್ದಾರೆ ಎಂದರು.

ಎಂ.ಆರ್.ಎಂ ಪ್ರಕಾಶನದ ಪ್ರಕಾಶಕ ಮಂಜು ಮುತ್ತೇಗೆರೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಎಚ್.ಆರ್. ಕನ್ನಿಕಾ ಅವರನ್ನು ಸನ್ಮಾನಿಸಲಾಯಿತು. ನೇಗಿಲಯೋಗಿ ಟ್ರಸ್ಟ್ ಅಧ್ಯಕ್ಷ ಎ.ಸಿ. ರಮೇಶ್, ದ.ಕೋ.ಹಳ್ಳಿ ಚಂದ್ರಶೇಖರ್, ಕೊತ್ತತ್ತಿ ರಾಜು, ಉಮೇಶ್, ಕೀಲಾರ ಕೃಷ್ಣೇಗೌಡ, ದೊ.ಚಿ.ಗೌಡ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-40-417072165

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.