ಮಂಡ್ಯ: ‘ಮಹಾತ್ಮ ಗಾಂಧೀಜಿಯವರ ಅಹಿಂಸಾ ಅಸ್ತ್ರ ಎಂದರೆ ಅದು ಸತ್ಯ ಮತ್ತು ಆತ್ಮಬಲವನ್ನು ಆಧರಿಸಿದ ಒಂದು ಸಕ್ರಿಯ ಹಾಗೂ ಬಲಶಾಲಿ ಪ್ರತಿರೋಧವಾಗಿದೆ. ಇದು ಎದುರಾಳಿಯ ಮನಸ್ಸನ್ನು ಹಿಂಸೆಯಿಂದ ಬದಲಾಯಿಸಿ, ಪ್ರೀತಿ ಮತ್ತು ಸಹನೆಯಿಂದ ಗೆಲ್ಲುವ ಗುರಿಯನ್ನು ಹೊಂದಿದೆ’ ಎಂದು ಕವಿ ಕೆ.ಪಿ. ಮೃತ್ಯುಂಜಯ ಅಭಿಪ್ರಾಯಪಟ್ಟರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಕೃಷಿ ವಿವಿ ರಾಷ್ಟ್ರೀಯ ಸೇವಾ ಯೋಜನಾ ಘಟಕ (ವಿ.ಸಿ.ಫಾರಂ), ಪರಿಸರ ರೂರಲ್ ಡೆವಲಪ್ಮೆಂಟ್, ಜಿಲ್ಲಾ ಯುವ ಪರಿಷತ್ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ‘ಯುವ ಮನಸುಗಳಿಗೆ ಗಾಂಧಿ’ ಕುರಿತ ರಾಜ್ಯಮಟ್ಟದ ವಿಚಾರ ಮಂಥನ ಕಾರ್ಯಕ್ರಮದಲ್ಲಿ ‘ಯಾಕಾಗಿ ಗಾಂಧಿ’ ವಿಷಯ ಮಂಡಿಸಿದರು.

‘ಹಿಂದ್ ಸ್ವರಾಜ್’ ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ದರ್ಶನದ ಪ್ರಮುಖ ಕೃತಿಯಾಗಿದ್ದು, ಇದನ್ನು ವಿದ್ಯಾರ್ಥಿಗಳು ಓದಲೇಬೇಕು. ಗಾಂಧೀಜಿ ಅವರ ಪ್ರಕಾರ ‘ಸ್ವರಾಜ್’ ಎಂದರೆ ಕೇವಲ ಬ್ರಿಟಿಷರಿಂದ ರಾಜಕೀಯ ಸ್ವಾತಂತ್ರ್ಯ ಪಡೆಯುವುದಲ್ಲ, ಬದಲಿಗೆ ವ್ಯಕ್ತಿ ಸ್ವಯಂ ನಿಯಂತ್ರಣ, ಆಂತರಿಕ ಶಕ್ತಿ ಸಾಧಿಸುವುದೇ ನಿಜವಾದ ಸ್ವರಾಜ್ಯ’ ಎಂದರು.

‘ಪ್ರಸ್ತುತ ಕನ್ನಡ ಬೇಡ ಎಂದು ಇಂಗ್ಲಿಷ್ ಅನ್ನು ಮೆರೆಸುತ್ತಿದ್ದೇವೆ. ಈ ನೆಲದ ಭಾಷೆಯಲ್ಲಿ ಮಗು ಶಿಕ್ಷಣ ಪಡೆಯಬೇಕು. ಆಯಾ ಸ್ಥಳೀಯ ಭಾಷೆಯಲ್ಲಿಯೂ ವ್ಯವಹಾರ ನಡೆಯಬೇಕು ಎಂದು ಗಾಂಧಿ ಹೇಳಿಕೊಟ್ಟಿದ್ದರು. ಮುಖ್ಯವಾಗಿ ಹಿಂದೂ– ಮುಸ್ಲಿಮರು ಹೊಂದಾಣಿಕೆಯಿಂದ ಹೋಗಬೇಕು ಎಂದಿದ್ದರು’ ಎಂದು ಸ್ಮರಿಸಿದರು.

‘ಯುವ ಜನತೆ ಮತ್ತು ಗಾಂಧಿ’ ಕುರಿತು ಮಾತನಾಡಿದ ಬಿ.ಹೊಸೂರು ಅಕ್ಕಮಹಾದೇವಿ ಮಹಿಳಾ ವಿವಿ ವಿಶೇಷ ಅಧಿಕಾರಿ ವಿಷ್ಣು ಎಂ.ಶಿಂಧೆ ಮಾತನಾಡಿದರು. ಕಸಾಪ ಮಾಜಿ ಅಧ್ಯಕ್ಷ ಎಂ.ವಿ. ಧರಣೇಂದ್ರಯ್ಯ, ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್, ಉಪನ್ಯಾಸಕಿ ಸುಚಿತ್ರಾ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-40-451814339

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.