ಕಿಕ್ಕೇರಿ: ಹಳೆಯ ನೆನಪಿನ ಬುತ್ತಿಯಾಗಿ 30ವರ್ಷದ ಹಿಂದೆ ಓದಿದ ಶಾಲೆ, ಗೆಳೆಯರ, ಗುರುಗಳ ನೆನಪು ಕಣ್ತುಂಬಿಕೊಳ್ಳುವ ಭಾಗ್ಯವಾಗಿ ಗುರುವಂದನೆ ಕಾರ್ಯಕ್ರಮ ಲಭಿಸಿದೆ ಎಂದು ಮಂದಗೆರೆ ಹೇಮಾವತಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಡಿ.ಆರ್. ಮಧುಸೂದನ್ ಮೆಲಕು ಹಾಕಿದರು.

ಸಮೀಪದ ಮಂದಗೆರೆ ಹೇಮಾವತಿ ಅನುದಾನಿತ ಪ್ರೌಢಶಾಲೆಯಲ್ಲಿ 1988-89ನೇ ಸಾಲಿನ ಹಳೆ ವಿದ್ಯಾರ್ಥಿಗಳು ಬಳಗ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗುರುವಿನ ಋಣ ತೀರಿಸಲು ಸಾಧ್ಯವೇ ಇಲ್ಲ. ತಾಯಿ ಜೀವ ನೀಡಿದರೆ, ಜೀವನ, ಭವಿಷ್ಯ ಕೊಡುವ ತಾಯಿ ಹೃದಯದ ದೇವರು ಗುರು. ಒತ್ತಡದ ಬದುಕಿನಲ್ಲಿರುವ ನಾವುಗಳು 30 ವರ್ಷಗಳ ನಂತರ ಹಳೆ ಗೆಳೆಯರ ಮಿಲನ, ವಿದ್ಯೆ ನೀಡಿದ ಗುರುಗಳಿಗೆ ಪೂಜಿಸುವ ಅವಕಾಶ ಕಲ್ಪಿಸಿಕೊಟ್ಟ ಗೆಳೆಯ ಮಂದಗೆರೆ ಮಧುಸೂದನ್ ಪರಿಶ್ರಮ ಮರೆಯಲಾರೆ ಎಂದರು.

ಮೈತ್ರಿ ಮೆಟಲೈಜಿಂಗ್ ಇಂಡಿಯಾ ಕಂಪನಿ, ರಿನೆವೇಷನ್ಸ್ ಆಫ್ ಟೆಂಪಲ್ ಉದ್ಯಮ ಸ್ಥಾಪಿಸಿ 600ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿರುವೆ. ಗುರುಗಳ ಬೆತ್ತದ ರುಚಿ ಕುಗ್ರಾಮದಿಂದ ಬೆಂಗಳೂರಿನಲ್ಲಿ ಉದ್ಯಮಿಯಾಗಿಸಿದೆ. ಗುರುನಮನದ ಕ್ಷಣ ಮರೆಯಲಾರೆ. ಶಾಲೆ ಅಭಿವೃದ್ಧಿಗೆ ತನ್ನ ಸಹಕಾರ ಇದೆ. ಕನ್ನಡ ಶಾಲೆ ಉಳಿದರೆ ಮಾತ್ರ ಕನ್ನಡ ನಾಡು, ನುಡಿ ಉಳಿಯಲು ಸಾಧ್ಯ. ಮುರುಡೇಶ್ವರದ ಶಿವ ಪ್ರತಿಮೆ, ಲಂಡನ್ನಲ್ಲಿನ ಬಸವೇಶ್ವರ ಪ್ರತಿಮೆ ಮತ್ತಿತರ ಪ್ರತಿಮೆಗಳಿಗೆ ಮೆಟಲ್ ಕೋಟಿಂಗ್ ಮಾಡಿರುವೆ. ಸಂಸ್ಕೃತಿ, ಪರಂಪರೆ, ದೇಗುಲ ಉಳಿವಿಗೆ ಸದಾ ಶ್ರಮಿಸಲು ಗುರುಗಳಿಂದ ಕಲಿತ ಸಂಸ್ಕಾರ ಕಾರಣ ಎಂದು ನುಡಿದರು.

ಹಳೆ ವಿದ್ಯಾರ್ಥಿಯಾದ ಚಲನಚಿತ್ರ ನಟ ಮಂದಗೆರೆ ಮಧುಸೂದನ್ ಮಾತನಾಡಿ, ಹಳೆಯ ನೆನಪು, ಗುರುಗಳ ಆಶೀರ್ವಾದ ತಮ್ಮನ್ನು ಸುಶಿಕ್ಷಿತರನ್ನಾಗಿ ಮಾಡಿಸಿದೆ. ಇಂತಹ ಪರಂಪರೆ ಕಾರ್ಯಕ್ರಮ ಭವಿಷ್ಯದ ಮಕ್ಕಳಿಗೆ ಆದರ್ಶವಾಗಬೇಕಿದೆ. ಮೊಬೈಲ್, ರೀಲ್ಸ್, ಸಾಮಾಜಿಕ ಜಾಲತಾಣದಿಂದ ಗುರುವನ್ನು ಹಿಂದಿನ ಪೀಳಿಗೆ ಮರೆಯುತ್ತಿದೆ. ನಾವು ಓದಿದ ಕನ್ನಡ ಶಾಲೆ ಉಳಿವಿಗೆ ಸದಾ ಮುಂದಾಗಿರುವುದಾಗಿ ತಿಳಿಸಿ ಶಾಲಾ ದಿನದ ನೆನಪು ನೆನೆದರು.

ಗುರುಗಳ ಹಿತನುಡಿ: ಗುರುಗಳು ಶಿಷ್ಯರು ನೀಡಿದ ಗೌರವ ಸಮರ್ಪಣೆ ಸ್ವೀಕರಿಸಿ ಗುರು ಶಿಷ್ಯರ ಬಾಂಧವ್ಯ, ಹಳೆಯ ನೆನಪು ನೆನೆದು ಈ ಕನ್ನಡ ಶಾಲೆ ಉಳಿಸಿ. ಇದೇ ನೀವು ಕೊಡುವ ಗುರು ಕಾಣಿಕೆ ಎಂದು ಶಿಷ್ಯರನ್ನು ಹರಸಿದರು.

ಹಳೆ ವಿದ್ಯಾರ್ಥಿಗಳು ಗುರುಗಳೊಂದಿಗೆ ಇದ್ದ ಬಾಂಧವ್ಯ, ಭಯ ಎಲ್ಲವನ್ನು ಸಂತಸದಿಂದ ಹಂಚಿಕೊಂಡು ಖುಷಿಪಟ್ಟರು.

ಗುರುಗಳ ಕುರಿತು ಮಂದಗೆರೆ ಮಧುಸೂದನ್ ಕಾವ್ಯ ರಚಿಸಿ ಮೂಡಿಬಂದ ಗೀತೆ ಮುದ ನೀಡಿತು. ಗುರುಗಳಿಗೆ ಶಿಷ್ಯರು ಫಲತಾಂಬೂಲ, ಮೈಸೂರು ಪೇಟ, ಹಾರ ತುರಾಯಿಗಳೊಂದಿಗೆ ಗೌರವ ಸಮರ್ಪಣೆ ನೀಡಿ ಆನಂದಭಾಷ್ಪ ಮಿಡಿದರು.

ಗುರುಗಳಾದ ವೆಂಕಟೇಶ್, ಕುಮಾರ್, ರಮೇಶ್, ಜಿ.ಟಿ. ಜಯರಾಮೇಗೌಡ, ಸೂರ್ಯನಾರಾಯಣಪ್ಪ, ರಂಗಸ್ವಾಮಿ ಆಡಳಿತ ಮಂಡಳಿಯ ಜಿ.ವಿ. ವೆಂಕಟೇಶ್, ಚಿಕ್ಕಮಂದಗೆರೆ ಜಯರಾಂ, ಮಂಜು, ಮಂಜೇಗೌಡ, ರಾಜು, ಮೋಹನ್ಬಾಬು, ಹಳೆ ವಿದ್ಯಾರ್ಥಿ ಬಳಗ ಸಣ್ಣಪ್ಪ, ತುಳಸೀರಾಜು, ಮಾದೇಶ್, ಅರುಣ್, ಉಷಾ, ಅನಿತಾ, ಪ್ರಜ್ವಲಾ, ರೂಪಾ, ಛಾಯಾ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-40-813005445

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.