ಮಂಡ್ಯ: ‘ಬರವಣಿಗೆಯಲ್ಲಿ ಪದ ವ್ಯತ್ಯಾಸವಾದರೆ ಆ ಸಾಲು ಅರ್ಥ ಕಳೆದುಕೊಳ್ಳುತ್ತದೆ. ಹಾಗಾಗಿ ಭಾಷೆಯ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಕಾಳಜಿವಹಿಸಬೇಕು’ ಎಂದು ಕುಲಪತಿ ಪ್ರೊ.ಕೆ. ಶಿವಚಿತ್ತಪ್ಪ ಅಭಿಪ್ರಾಯಪಟ್ಟರು.

ಮಂಡ್ಯ ವಿಶ್ವವಿದ್ಯಾಲಯದ ವತಿಯಿಂದ ವಿವಿ ಸಿಂಡಿಕೇಟ್ ಸಭಾಂಗಣದಲ್ಲಿ ಸೋಮವಾರ ನಡೆದ ಸುಮಾರಾಣಿ ಶಂಭು ರಚಿತ ಬಿ.ಇಡಿ ಪಠ್ಯಕ್ರಮಾನುಸಾರ ‘ಭಾಷೆಯ ಸುತ್ತ’ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾಷೆಯ ಮೇಲೆ ಮೊದಲು ಹಿಡಿತ ಸಾಧಿಸುವ ಶಕ್ತಿ ಬೆಳೆಸಿಕೊಳ್ಳಬೇಕು. ಓದುವುದರಿಂದಲೂ ಭಾಷೆಯ ಮೇಲೆ ಗಮನ ಹರಿಸಬಹುದು. ಪುಸ್ತಕ ಬರೆಯುವುದು ಒಂದು ಕಲೆಯಾಗಿದೆ. ಅದನ್ನು ಬೆಳೆಸಿಕೊಳ್ಳುವ ಮೂಲಕ ಸಮಾಜಕ್ಕೆ ಸೇವೆ ಮತ್ತು ಸಲಹೆ ಕೊಡುವ ನಿಟ್ಟಿನಲ್ಲಿ ಎಲ್ಲರೂ ಸಾಗಬೇಕು ಎಂದು ತಿಳಿಸಿದರು.

ಎಸ್ಬಿಇಟಿ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಮಾತನಾಡಿ, ‘ಜ್ಞಾನವನ್ನು ಹಂಚುವ ಕೆಲಸವನ್ನು ನಾವೆಲ್ಲರೂ ಮಾಡಬೇಕು. ಭಾಷೆ ಎಂಬುದನ್ನು ದೇವರು ನಿರ್ಮಿಸಿಲ್ಲ, ಅದನ್ನು ಮನುಷ್ಯ ಮಾಡಿಕೊಂಡಿರುವುದು. ಭಾಷೆಯ ಕೌಶಲಕ್ಕೆ ಮೊದಲ ಆದ್ಯತೆ ಕೊಡಬೇಕು. ನಿರೂಪಣೆ ಮಾಡುವುದನ್ನು ಕನ್ನಡಿ ಮುಂದೆ ನಿಂತು ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ಪ್ರಯೋಜನ ಆಗಲಿದೆ’ ಎಂದರು.

ನಿವೃತ್ತ ಪ್ರಾಂಶುಪಾಲ ಪ್ರೊ.ಎಸ್.ಬಿ.ಶಂಕರಗೌಡ ಮಾತನಾಡಿ, ‘ಬಿ.ಇಡಿ ವಿದ್ಯಾರ್ಥಿಗಳಿಗೆ ಮಾತ್ರ ಭಾಷೆ ಎಂಬುದು ಮುಖ್ಯವಾಗುವುದಿಲ್ಲ. ಎಲ್ಲರಿಗೂ ಭಾಷೆ ಎಂಬುದು ಮುಖ್ಯವಾಗುತ್ತದೆ. ಶಿಕ್ಷಣ ನಡೆಯುವುದೇ ಭಾಷೆಯ ಮೂಲಕ’ ಎಂದು ಅಭಿಪ್ರಾಯಪಟ್ಟರು.

ಸುಮಾರಾಣಿ ಶಂಭು ರಚಿತ ಬಿ.ಇಡಿ ಪಠಠ್ಯಕ್ರಮಾನುಸಾರ ‘ಭಾಷೆಯ ಸುತ್ತ’ ಕೃತಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಂಡ್ಯ ವಿವಿ ಪ್ರಸಾರಾಂಗ ನಿರ್ದೇಶಕ ಪ್ರೊ.ಎಸ್.ಚಂದ್ರಕಿರಣ್, ಕುಲಸಚಿವ(ಮೌಲ್ಯಮಾಪನ) ಪ್ರೊ.ಜಿ.ವಿ.ವೆಂಕಟರಮಣ, ಪ್ರಾಂಶುಪಾಲ ಎಸ್.ಎಸ್.ಸುರೇಶ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-40-57902835

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.