ಮಂಡ್ಯ: ಮೈಸೂರು ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಮ್ಯಾನೇಜ್ಮೆಂಟ್ ವತಿಯಿಂದ ಏ.17 ಮತ್ತು 18ರಂದು ‘ಮೈಸಿರಿ ಸಂಭ್ರಮ’ ವಾರ್ಷಿಕೋತ್ಸವ ಕಾರ್ಯಕ್ರಮವು ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಮುಖ್ಯ ಗ್ರಂಥಪಾಲಕ ವಿದ್ಯಾಸಾಗರ್ ಹೇಳಿದರು.

‘ಮೈಸೂರು ವಿಭಾಗೀಯ ಮಟ್ಟದ 40ಕ್ಕೂ ಹೆಚ್ಚು ಕಾಲೇಜಿನ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವರು. ಸಾಂಸ್ಕೃತಿಕ, ಎಂಜಿನಿಯರಿಂಗ್ನ ನಾಲ್ಕು ವಿಭಾಗಗಳ ತಂತ್ರಜ್ಞಾನ ಆಧಾರಿತ ಮಾದರಿ ಪ್ರದರ್ಶನ ನಡೆಯಲಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ಏ.17 ರಂದು ಬೆಳಿಗ್ಗೆ 11ಕ್ಕೆ ಜೆಎಸ್ಎಸ್ ವಿಶ್ವವಿದ್ಯಾಲಯದ ಉಪಕುಲಪತಿ ಎಚ್.ಬಸವನಗೌಡ ಉದ್ಘಾಟಿಸುವರು. ಏ.18ರಂದು ಸಂಜೆ 5 ಗಂಟೆಗೆ ಚಲನಚಿತ್ರ ನಟಿ ರಾಗಿಣಿ ದಿಗ್ವೇದಿ ಆಗಮಿಸುವರು. ಕಾಲೇಜಿನ ವಿದ್ಯಾರ್ಥಿಗಳಿಗೆ ನೃತ್ಯ, ಫ್ಯಾಷನ್ ಶೋ ಸ್ಪರ್ಧೆ ಆಯೋಜಿಸಲಾಗಿದೆ. ಇದರಲ್ಲಿ ನೃತ್ಯ ವಿಜೇತರಿಗೆ ₹7,000(ಪ್ರ), ₹5,000(ದ್ವಿ) ಹಾಗೂ ಫ್ಯಾಷನ್ ಶೋ ವಿಜೇತರಿಗೆ ₹5,000(ಪ್ರ), ₹3,000 ದ್ವಿತೀಯ ಬಹುಮಾನ ನೀಡಲಾಗುವುದು ಎಂದು ವಿವರಿಸಿದರು.

ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಂ.ಜಶ್ವಂತ್, ಉಪಗ್ರಂಥಪಾಲಕ ಜಿ.ಎನ್.ಮಹದೇವಸ್ವಾಮಿ, ಪಿ.ನಿತೀಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-40-1350036125

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.