ಮಂಡ್ಯ: 2026–27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಜೂನ್ 1ರಿಂದ ಆರಂಭವಾಗಲಿವೆ. ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳ ಕಟ್ಟಡಗಳಿಗೆ ಸಂಬಂಧಿಸಿದ ‘ಸುರಕ್ಷತೆ ಪ್ರಮಾಣಪತ್ರ’ಗಳನ್ನು ಮೂರು ದಿನದೊಳಗೆ ಸಲ್ಲಿಸುವಂತೆ ಶಾಲಾ ಶಿಕ್ಷಣ ಇಲಾಖೆಯು ಆಯಾ ಡಿಡಿಪಿಐಗಳಿಗೆ ಸೂಚಿಸಿದೆ.

ಸೋರುವ ಚಾವಣಿ, ಶಿಥಿಲಗೊಂಡ ಗೋಡೆ, ಹಾಳಾದ ಹೆಂಚು, ಮುರಿದ ಕಿಟಕಿ–ಬಾಗಿಲು, ಕುಳಿತುಕೊಳ್ಳಲು ಸಾಧ್ಯವಾಗದ ನೆಲಹಾಸು ಒಳಗೊಂಡ ಸರ್ಕಾರಿ ಶಾಲೆಗಳ ಕೊಠಡಿಗಳು ಮಕ್ಕಳ ಕಲಿಕೆಗೆ ಅಪಾಯಕಾರಿ. ಇಂಥ ಕೊಠಡಿಗಳನ್ನು ಗುರುತಿಸಿ, ಸುರಕ್ಷತೆಯನ್ನು ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಶ್ಮಿ ಮಹೇಶ್ ಅವರು ಎಲ್ಲ ಉಪನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯಿತಿಯ ಪಂಚಾಯತ್ರಾಜ್ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರ್ಗಳು ಶಾಲೆಗಳಿಗೆ ಭೇಟಿ ನೀಡಿ, ನೈಜ ವರದಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ. ಕಟ್ಟಡದ ತಳಪಾಯದ ಸ್ಥಿರತೆ, ಚಾವಣಿ, ಗೋಡೆಯ ಸ್ಥಿತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಲಾಗಿದೆ.

ಶಾಲೆಗಳ ಪಟ್ಟಿ ತಯಾರಿಕೆ: ಮಂಡ್ಯ ಡಿಡಿಪಿಐ ಜಿ.ಎ. ಲೋಕೇಶ್ ನಿರ್ದೇಶನದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾಲ್ಲೂಕು ಮಟ್ಟದಲ್ಲಿ ಸರ್ಕಾರಿ ಶಾಲೆಗಳ ಪಟ್ಟಿ ಸಿದ್ಧಪಡಿಸಿದ್ದಾರೆ. ಜೂನ್ 4ರವರೆಗೆ ಎಂಜಿನಿಯರ್ಗಳು ಶಾಲೆಗಳಿಗೆ ಭೇಟಿ ನೀಡುವರು. ಮುಖ್ಯ ಶಿಕ್ಷಕರು ಕಟ್ಟಡ ಸುರಕ್ಷತೆಗೆ ಸಂಬಂಧಿಸಿ ಅಗತ್ಯ ಮಾಹಿತಿ ಒದಗಿಸಲು ಆದೇಶಿಸಿದ್ದಾರೆ.

‘ಶಾಲೆಗಳ ಹೆಸರು, ಭೇಟಿ ನೀಡುವ ಎಂಜಿನಿಯರ್ ಹೆಸರು, ಮುಖ್ಯಶಿಕ್ಷಕರ ಹೆಸರು, ಸಂಪರ್ಕ ಸಂಖ್ಯೆಗಳನ್ನು ಒಳಗೊಂಡ ಪಟ್ಟಿ ತಯಾರಿಸಿದ್ದೇವೆ. ಪರಿಶೀಲನೆಗೆ ನಿಯೋಜಿಸಿರುವ ಅಧಿಕಾರಿಗಳ ವಿವರವನ್ನೂ ಮುಖ್ಯಶಿಕ್ಷಕರಿಗೆ ಕಳುಹಿಸಲಾಗಿದೆ’ ಎಂದು ಮಳವಳ್ಳಿ ಬಿಇಒ ಉಮಾ ವಿ.ಇ ತಿಳಿಸಿದರು.

‘ಶೌಚಾಲಯ, ಕಾಂಪೌಂಡ್, ಅಡುಗೆ ಮನೆ, ಕೊಠಡಿಗಳ ಸ್ಥಿತಿಗತಿ ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ. ಶಾಲೆ ನಡೆಸಲು ಕಟ್ಟಡ ಯೋಗ್ಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ದುಃಸ್ಥಿತಿಯಲ್ಲಿರುವ ಕೊಠಡಿಗಳ ದುರಸ್ತಿಗೆ ಬೇಕಾಗುವ ಅಂದಾಜು ಮೊತ್ತವನ್ನು ನಮೂದಿಸುತ್ತಿದ್ದೇವೆ’ ಎಂದು ಮಂಡ್ಯ ಪಂಚಾಯತ್ರಾಜ್ ಎಂಜಿನಿಯರಿಂಗ್ ವಿಭಾಗದವರು ತಿಳಿಸಿದರು.

ಕಟ್ಟಡ ಸುರಕ್ಷತೆ ಜತೆಗೆ ಸೌಕರ್ಯಗಳ ವಿವರ ಒಳಗೊಂಡ ಸಮಗ್ರ ವರದಿಯನ್ನು ಸಲ್ಲಿಸುತ್ತೇವೆ. ತುರ್ತು ಕಾಮಗಾರಿ ಅಗತ್ಯವಿರುವ ಶಾಲೆಗಳಿಗೆ ಅನುದಾನ ನೀಡಲಾಗುವುದು

-ಕೆ.ಆರ್.ನಂದಿನಿ, ಸಿಇಒ ಮಂಡ್ಯ ಜಿ.ಪಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.