ಮಂಡ್ಯ: ಕಲಾತ್ಮಕ ಇರುವ ಪುಸ್ತಕ ಓದಲು ಹಾಗೂ ಚಿತ್ರಗಳಿರುವ ಪುಸ್ತಕಗಳನ್ನು ನೋಡಲು ಮಕ್ಕಳಿಗೆ ಅವಕಾಶ ಮಾಡಿಕೊಟ್ಟಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಸಲಹೆ ನೀಡಿದರು.

ನಗರದ ಶಿವನಂಜಪ್ಪ ಉದ್ಯಾನ(ಕಾಡುಮನೆ)ದಲ್ಲಿ ಪರಿಚಯ ಪ್ರಕಾಶನದ ವತಿಯಿಂದ ‘ನೀವು ಬನ್ನಿ ನಿಮ್ಮ ಮಕ್ಕಳನ್ನು ಕರೆತನ್ನಿ, ಒಂದು ಹೊಸ ಹಾದಿಯತ್ತ ಹೆಜ್ಜೆ ಇಡೋಣ’ ಎಂಬ ಶೀರ್ಷಿಕೆಯಡಿ ಆರಂಭಿಸಿದ ‘ಸಂಡೆ ಲೈಬ್ರರಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪುಸ್ತಕಗಳನ್ನು ಓದುವುದರಿಂದ ಮಕ್ಕಳ ಭೌತಿಕ ಗುಣ ಹೆಚ್ಚಾಗುತ್ತದೆ. ಆಸಕ್ತಿ ಇರುವ ಮಕ್ಕಳು ಓದಲು ಹಾಗೂ ಚಿತ್ರ ನೋಡಲು ಪುಸ್ತಕಗಳ ಮೂಲಕ ವಿನೂತನ ಕಾರ್ಯಕ್ರಮ ನಡೆಸುತ್ತಿರುವ ಪುಸ್ತಕ ಪ್ರಕಾಶನದ ಶಿವಕುಮಾರ್ ಆರಾಧ್ಯ ಅವರ ಕೆಲಸ ಶ್ಲಾಘನೀಯವಾಗಿದ್ದು, ಇದು ಫಲಿಸಲಿ’ ಎಂದು ಆರೈಸಿದರು.

‘ಪ್ರಕೃತಿಯ ನಡುವೆ ಓದು ಕಾರ್ಯಕ್ರಮ ಆಯೋಜಿಸಿರುವುದನ್ನು ಎಲ್ಲಿಯೂ ನೋಡಿಲ್ಲ. ಮಕ್ಕಳ ಕೈಯಲ್ಲಿ ಪುಸ್ತಕಗಳನ್ನು ಕೊಟ್ಟು ಓದಿಸುವುದು ಒಂದು ಸಾಹಸಮಯ ಕೆಲಸವಾಗಿದೆ. ಬಹುತೇಕ ಮಕ್ಕಳು ಮೊಬೈಲ್ ಗೀಳಿಗೆ ಒಳಗಾಗಿ ಹುಚ್ಚರಾಗುವಂತೆ ಮಾಡುತ್ತಿದ್ದೇವೆ, ಅದನ್ನು ತಪ್ಪಿಸಲು ಇಂತಹ ಕಾರ್ಯಕ್ರಮವು ಸಹಕಾರಿಯಾಗಿದೆ’ ಎಂದು ಅಭಿಪ್ರಾಯಪಟ್ಟರು.

ಪರಿಚಯ ಪ್ರಕಾಶನದ ಶಿವಕುಮಾರ್ ಆರಾಧ್ಯ ಮಾತನಾಡಿ, ‘ಪುಸ್ತಕಗಳನ್ನು ಓದುವ ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳೆಸುವುದು ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದು, ಜಿಲ್ಲೆಯಲ್ಲಿ ವಿನೂತನ ಕಾರ್ಯಕ್ರಮ ಇದಾಗಿದ್ದು, ಪ್ರತಿ ಮೂರನೇ ಭಾನುವಾರ ಮಕ್ಕಳಿಗೆ ‘ಸಂಡೆ ಲೈಬ್ರರಿ’ ವಾತಾವರಣ ನಿರ್ಮಿಸಿದ್ದು, ಪೋಷಕರು ಮಕ್ಕಳನ್ನು ಕರೆತಂದು ಓದುವ ಹವ್ಯಾಸ ಬೆಳೆಸಬೇಕು’ ಎಂದು ಮನವಿ ಮಾಡಿದರು.

ಸದ್ವಿದ್ಯಾ ಟ್ರಸ್ಟಿ ಪಣಿಮಾಲಾ, ಪ್ರಕಾಶನದ ಬಿ.ಕೆ. ಪುಷ್ಪಾ, ಭವಾನಿ, ಬಿ.ಕೆ. ಸುಷ್ಮಾ, ಕಲಾವಿದ ನಾರಾಯಣ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-40-1532223044

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.