ಮಂಗಳೂರು: ಸೇಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಎಂಜಿನಿಯರಿಂಗ್ ವಿಭಾಗವು, ಫಾದರ್ ಮುಲ್ಲರ್ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ, ವೈದ್ಯಕೀಯ ವೃತ್ತಿಪರರಿಗೆ ‘ಅನ್ಬಾಕ್ಸಿಂಗ್ ಎಐ2.0’ ಎಂಬ ಒಂದು ದಿನದ ಪ್ರಾಯೋಗಿಕ ಕಾರ್ಯಾಗಾರ ಆಯೋಜಿಸಿತ್ತು.

ಕಾರ್ಯಾಗಾರ ಉದ್ಘಾಟಿಸಿದ ಅಲೋಶಿಯಸ್ ವಿ.ವಿ. ಕುಲಪತಿ ಫಾ. ಪ್ರವೀಣ್ ಮಾರ್ಟಿಸ್, ‘ಜಗತ್ತು ಹೊಸ ಶೈಕ್ಷಣಿಕ ಹಾದಿಯಲ್ಲಿ ಸಾಗುತ್ತಿದೆ. ಡಿಜಿಟಲೀಕರಣದ ಮೂಲಕ ತಂತ್ರಜ್ಞಾನದ ಮಾನವೀಕರಣಕ್ಕೆ ಹೊರಳುತ್ತಿದೆ. ಕೃತಕ ಬುದ್ಧಿಮತ್ತೆ (ಎಐ) ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರವನ್ನು ಪರಿವರ್ತಿಸುತ್ತಿದ್ದರೂ, ಮಾನವ ಬುದ್ಧಿಮತ್ತೆ ಮತ್ತು ನೈತಿಕ ಜವಾಬ್ದಾರಿಯನ್ನು ದುರ್ಬಲಗೊಳಿಸಲಾರದು’ ಎಂದರು.

ಮುಖ್ಯ ಅತಿಥಿ, ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಗಳ ನಿರ್ದೇಶಕ ಫಾ. ಫೌಸ್ಟಿನ್ ಲ್ಯೂಕಾಸ್ ಲೋಬೊ, ಕೃತಕ ಬುದ್ಧಿಮತ್ತೆಯ ವಿವೇಚನಾಯುಕ್ತ ಬಳಕೆಯ ಅಗತ್ಯವನ್ನು ತಿಳಿಸಿ ‘ತಾಂತ್ರಿಕ ಪ್ರಗತಿಯ ನಡುವೆ ಮಾನವ ಅಂತಃಕರಣವನ್ನು ಕಳೆದುಕೊಳ್ಳಬಾರದು’ ಎಂದರು.

ಫಾದರ್ ಮುಲ್ಲರ್ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ರಮೇಶ್ ಭಟ್ ಎಂ. ಮಾತನಾಡಿದರು. ಡಾ. ಎಸ್. ರೂಬನ್ ಸ್ವಾಗತಿಸಿದರು. ಡಾ. ಗ್ಲೆನ್ಸನ್ ಟೋನಿ ಕಾರ್ಯಕ್ರಮ ನಿರೂಪಿಸಿದರು. ಡಾ. ಗೀತಾ ಪಿಂಟೊ ವಂದಿಸಿದರು.

ಉಪನ್ಯಾಸ ಗೋಷ್ಠಿಯಲ್ಲಿ ಡಾ. ಎಸ್. ರೂಬನ್, ಗ್ಲೆನ್ಸನ್ ಟೋನಿ ಹಾಗೂ ಮೊಹಮ್ಮದ್ ಸಿರಾಜ್ ಬಿ. ವಿಷಯ ಮಂಡಿಸಿದರು.

ಕಣಚೂರು ವೈದ್ಯಕೀಯ ಕಾಲೇಜು, ಫಾದರ್ ಮುಲ್ಲರ್ ಸಂಶೋಧನಾ ಕೇಂದ್ರ ಮತ್ತು ಅಲೋಶಿಯಸ್ ವಿ.ವಿ ಅಧ್ಯಾಪಕರು, ಸಂಶೋಧಕರು ಮತ್ತು ವೃತ್ತಿಪರರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-51-1795379226

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.