ಮಂಗಳೂರು: ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರಗಳಲ್ಲಿ ಉದ್ಯೋಗ ಕಡಿತ ಗಮನಾರ್ಹವಾಗಿ ನಡೆಯುತ್ತಿದ್ದರೂ, ವಿದ್ಯಾರ್ಥಿಗಳಿಗೆ ಐಟಿ ಬಗೆಗಿನ ಒಲವು ಕಡಿಮೆಯಾಗಿಲ್ಲ. ಬಹುತೇಕ ಪದವಿ ಕಾಲೇಜುಗಳಲ್ಲಿ ಬಿಸಿಎ (ಬ್ಯಾಚಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್) ಕೋರ್ಸ್ ಪ್ರವೇಶಕ್ಕೆ ಈ ಬಾರಿಯೂ ತೀವ್ರ ಪೈಪೋಟಿ ಏರ್ಪಟ್ಟಿದೆ.

ದ್ವಿತೀಯ ಪಿಯುಸಿ ಪೂರೈಸಿ, ವೃತ್ತಿ ಶಿಕ್ಷಣ ಕೋರ್ಸ್ಗಳಿಗೆ ಹೋಗುವವರು ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶಕ್ಕೆ ಕಾಯುತ್ತಿದ್ದರೆ, ಪದವಿ ಕೋರ್ಸ್ಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳು ಈಗಾಗಲೇ ಪ್ರವೇಶ ಅರ್ಜಿ ಸಲ್ಲಿಸುತ್ತಿದ್ದಾರೆ.

ಪದವಿ ಕಾಲೇಜುಗಳಲ್ಲಿ ಕಲಾ ಮತ್ತು ವಿಜ್ಞಾನ ಪದವಿ ವಿಭಾಗಗಳು ವರ್ಷದಿಂದ ವರ್ಷಕ್ಕೆ ಇನ್ನಷ್ಟು ಸೊರಗುತ್ತಿವೆ. ನಗರ ಪ್ರದೇಶದ ಪದವಿ ಕಾಲೇಜುಗಳಲ್ಲಿ ಈ ಕೋರ್ಸ್ಗಳಿಗೆ ವಿದ್ಯಾರ್ಥಿಗಳ ಪ್ರವೇಶ ತಕ್ಕಮಟ್ಟಿಗೆ ಇದ್ದರೂ, ಗ್ರಾಮೀಣ ಭಾಗದ ಬಹುತೇಕ ಕಾಲೇಜುಗಳು ವಿದ್ಯಾರ್ಥಿಗಳಿಗೆ ಕಾಯುತ್ತಿವೆ.

‘ದ್ವಿತೀಯ ಪಿಯುಸಿ ಫಲಿತಾಂಶ ಬರುವುದನ್ನೇ ಕಾಯುವ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಸೆಳೆಯಲು ನಾನಾ ತಂತ್ರ ರೂಪಿಸುತ್ತವೆ. ಅಧಿಕ ಶುಲ್ಕ ನೀಡಿ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳಿಗೆ ಹೋಗುವ ಬದಲಾಗಿ ಕಡಿಮೆ ಶುಲ್ಕದಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಅದೇ ಕೋರ್ಸ್ ಮಾಡಬಹುದೆಂದು ಮನವರಿಕೆ ಮಾಡಿಕೊಡುತ್ತಿದ್ದೇವೆ. ಖಾಸಗಿ ಕಾಲೇಜುಗಳಿಗೆ ಪೈಪೋಟಿ ಒಡ್ಡುವ ರೀತಿಯಲ್ಲಿ ನಾವೂ ವಿಳಂಬವಿಲ್ಲದೆ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಪ್ರಾರಂಭಿಸಿದ್ದೇವೆ’ ಎಂದು ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರೊಬ್ಬರು ತಿಳಿಸಿದರು.

‘ಬಿಸಿಎ ಪ್ರವೇಶಕ್ಕೆ ತೀವ್ರ ಪೈಪೋಟಿ ಇದ್ದು, 120 ಸೀಟ್ಗಳಿಗೆ 170ಕ್ಕೂ ಅಧಿಕ ಅರ್ಜಿಗಳು ಬಂದಿವೆ. ನಿಗದಿತ ಮಾನದಂಡದಂತೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಬಿ.ಕಾಂ.ನಲ್ಲಿ 240ರಷ್ಟು ಸೀಟ್ಗಳು ಇದ್ದು, ಅರ್ಧದಷ್ಟು ಭರ್ತಿಯಾಗಿವೆ. ಬಿ.ಎ. ಮತ್ತು ಬಿ.ಎಸ್ಸಿ.ಗೆ ಪ್ರವೇಶ ಬಯಸುವವರ ಸಂಖ್ಯೆಯೂ ತೀರಾ ನಿರಾಶಾದಾಯಕವಾಗಿಲ್ಲ’ ಎನ್ನುತ್ತಾರೆ ಹಂಪನಕಟ್ಟೆ ವಿಶ್ವವಿದ್ಯಾಲಯದ ಕಾಲೇಜಿನ ಪ್ರಾಂಶುಪಾಲ ಗಣಪತಿ ಗೌಡ.

‘ಹಿಂದಿನ ವರ್ಷಗಳಲ್ಲಿ ಬಿಸಿಎಗೆ ಇರುವ ಬೇಡಿಕೆ ಗಮನಿಸಿ 90 ವಿದ್ಯಾರ್ಥಿಗಳ ಪ್ರವೇಶಾವಕಾಶವನ್ನು 120ಕ್ಕೆ ಏರಿಕೆ ಮಾಡಿದ್ದೇವೆ. ಪ್ರಸ್ತುತ ಶೇ 50ರಷ್ಟು ಸೀಟ್ಗಳು ಭರ್ತಿಯಾಗಿವೆ’ ಎನ್ನುತ್ತಾರೆ ನಗರದ ರಥಬೀದಿಯ ಡಾ. ಪಿ. ದಯಾನಂದ ಪೈ– ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಜಯಕರ ಭಂಡಾರಿ.

ಬಲ್ಮಠ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬಿಸಿಎ ಮತ್ತು ಬಿ.ಕಾಂ. ಕೋರ್ಸ್ಗಳಿಗೆ ಹೆಚ್ಚು ಬೇಡಿಕೆ ಇದೆ. ಬಿಸಿಎಗೆ 40, ಬಿ.ಕಾಂ.ಗೆ 140, ಬಿ.ಎಸ್ಸಿ.ಗೆ 55, ಬಿ.ಎ.ಗೆ 180 ವಿದ್ಯಾರ್ಥಿನಿಯರ ಪ್ರವೇಶಕ್ಕೆ ಅವಕಾಶ ಇದೆ.

‘ವಾಣಿಜ್ಯ ಪದವಿಯಲ್ಲಿ ಅಪ್ರೆಂಟಿಸ್ಷಿಪ್ ಎಂಬೆಡೆಡ್ ಡಿಗ್ರಿ ಪ್ರೋಗ್ರಾಂ (ಎಇಡಿಪಿ) ಅನ್ನು ಕಳೆದ ವರ್ಷ ಅನುಷ್ಠಾನಗೊಳಿಸಲಾಗಿದ್ದು, ರಿಟೇಲ್ ಮ್ಯಾನೇಜ್ಮೆಂಟ್ನಲ್ಲಿ ಕೋರ್ಸ್ ಅಧ್ಯಯನ ಮಾಡಬಹುದು. ಎರಡು ವರ್ಷ ಕಾಲೇಜಿನಲ್ಲಿ ತರಗತಿ ಪಾಠ, ಅಂತಿಮ ವರ್ಷದಲ್ಲಿ ಕಂಪನಿಗಳಲ್ಲಿ ಅಪ್ರೆಂಟಿಸ್ಷಿಪ್ ಮಾಡಲು ಅವಕಾಶ ಸಿಗುತ್ತದೆ. ಉದ್ಯೋಗದ ದೃಷ್ಟಿಯಿಂದ ಇದು ಉತ್ತಮ ಕೋರ್ಸ್ ಆಗಿದ್ದು, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಎಲ್ಲ ಕೋರ್ಸ್ಗಳಿಗೂ ವಾರ್ಷಿಕ ಶುಲ್ಕು ₹5,470 ಆಗಿದ್ದು, ಕಡಿಮೆ ಖರ್ಚಿನಲ್ಲಿ ಉತ್ತಮ ಶಿಕ್ಷಣ ಪಡೆಯಬಹುದು’ ಎನ್ನುತ್ತಾರೆ ಬಲ್ಮಠ ಮಹಿಳಾ ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ ಕೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-29-630009707

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.