ಮಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೃತ್ತಿಪರ ಶಿಕ್ಷಣ ಕೋರ್ಸ್ಗಳ ಪ್ರವೇಶಾತಿಗೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಗುರುವಾರ ಜಿಲ್ಲೆಯಲ್ಲಿ ಸುಗಮವಾಗಿ ನಡೆಯಿತು.

ಬೆಳಗಿನ ಅವಧಿಯಲ್ಲಿ ನಡೆದ ಭೌತ ವಿಜ್ಞಾನ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದ 21,488 ವಿದ್ಯಾರ್ಥಿಗಳಲ್ಲಿ 19,643 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. 1,845 ವಿದ್ಯಾರ್ಥಿಗಳು ಗೈರಾಗಿದ್ದರು. ಮಧ್ಯಾಹ್ನದ ಅವಧಿಯಲ್ಲಿ ನಡೆದ ರಸಾಯನ ವಿಜ್ಞಾನ ಪರೀಕ್ಷೆಗೆ 19,632 ಮಂದಿ ಹಾಜರಾಗಿದ್ದರು, 1,856 ಮಂದಿ ಗೈರಾಗಿದ್ದರು. ಜಿಲ್ಲೆಯ ಒಟ್ಟು 40 ಕೇಂದ್ರಗಳಲ್ಲಿ ಪರೀಕ್ಷೆ ನಡೆದವು.

‘ಭೌತ ವಿಜ್ಞಾನ ಪ್ರಶ್ನೆಪತ್ರಿಕೆ ತುಸು ಕಠಿಣವಾಗಿತ್ತು. ಆದರೆ, ಪಠ್ಯಕ್ರಮಕ್ಕೆ ಹೊರತಾದ ಯಾವುದೇ ಪ್ರಶ್ನೆಗಳು ಇರಲಿಲ್ಲ. ರಸಾಯನ ವಿಜ್ಞಾನ ವಿಷಯವೂ ತೀರಾ ಸುಲಭ ಇರಲಿಲ್ಲ. ಕಳೆದ ವರ್ಷದ ಪ್ರಶ್ನೆಪತ್ರಿಕೆಗೆ ಹೋಲಿಸಿದರೆ ಸ್ವಲ್ಪ ಕಠಿಣ ಅನ್ನಿಸಿತು. ಪರೀಕ್ಷಾ ಕೇಂದ್ರದಲ್ಲಿ ವ್ಯವಸ್ಥೆ ಉತ್ತಮವಾಗಿತ್ತು’ ಎಂದು ನಾರಾಯಣಗುರು ಕಾಲೇಜಿನ ಪರೀಕ್ಷಾ ಕೇಂದ್ರದ ವಿದ್ಯಾರ್ಥಿ ಅಖಿಲ್ ಹೇಳಿದರು.

‘ಯಾವುದೇ ಆಭರಣ, ಲೋಹದ ವಸ್ತುಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಪರೀಕ್ಷಾ ಕೇಂದ್ರದ ಒಳಗೆ ತರದಂತೆ ತಿಳಿಸಲಾಗಿತ್ತು. ಈ ಬಾರಿ ಜೀನ್ಸ್ ಪ್ಯಾಂಟ್ ಧರಿಸಲು ಸಹ ಅವಕಾಶ ಇಲ್ಲವೆಂದು ಪರೀಕ್ಷಾ ಪ್ರಾಧಿಕಾರ ತಿಳಿಸಿತ್ತು. ಇದರ ಅರಿವಿಲ್ಲದೆ ಕೆಲವು ವಿದ್ಯಾರ್ಥಿಗಳು ಜೀನ್ಸ್ ಧರಿಸಿ ಬಂದಿದ್ದರು. ಇಂತಹವರಿಗೆ ತಿಳಿಸಿ ಹೇಳಲಾಯಿತು. ಮಕ್ಕಳ ಜೊತೆ ಬಂದಿದ್ದ ಪಾಲಕರು ಬೇರೆ ಬಟ್ಟೆಯನ್ನು ತಂದುಕೊಟ್ಟ ನಂತರ ಅವರು ವಸ್ತ್ರ ಬದಲಾಯಿಸಿಕೊಂಡು, ತಪಾಸಣೆಗೆ ಒಳಗಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳಿದರು. ಈ ಎಲ್ಲ ಕಾರಣಕ್ಕಾಗಿಯೇ ಎರಡು ತಾಸು ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಲು ಸೂಚಿಸಲಾಗಿತ್ತು’ ಎಂದು ಪ್ರಾಂಶುಪಾಲರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಿವಿಯೋಲೆ, ಮೂಗಿನ ನತ್ತು ಧರಿಸಿ ಬಂದಿದ್ದ ವಿದ್ಯಾರ್ಥಿನಿಯರು ಪರೀಕ್ಷಾ ಕೇಂದ್ರದ ಹೊರಗೆ ನಿಂತು, ಅವುಗಳನ್ನು ತೆಗೆದು ಪಾಲಕರಿಗೆ ಒಪ್ಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-29-240270028

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.