ಮಂಗಳೂರು: ‘ಜಾತ್ಯತೀತ ತತ್ವಗಳ ಅಡಿಪಾಯದಲ್ಲಿ ಭವ್ಯ ಭಾರತ ನಿರ್ಮಾಣವಾಗಿದ್ದರೂ ಇಂದು ಅದೇ ತತ್ವಗಳಿಗೆ ಕೊಡಲಿಪೆಟ್ಟು ನೀಡುವ ಶಕ್ತಿಗಳು ಮೆರೆಯುತ್ತಿವೆ. ಸಂವಿಧಾನದ ಆಶಯಗಳನ್ನು ಬುಡಮೇಲು ಗೊಳಿಸುವ ದುಷ್ಕೃತ್ಯ ನಡೆಯುತ್ತಿದೆ. ಸೌಹಾರ್ದಯುತ ಭಾರತ ನಿರ್ಮಾಣವಾಗಲು ಮಕ್ಕಳಲ್ಲಿ ಮಾನವೀಯ ಗುಣಗಳನ್ನು ಬೆಳೆಸಬೇಕು’ ಎಂದು ಸೇಂಟ್ ಮದರ್ ತೆರೆಸಾ ವಿಚಾರ ವೇದಿಕೆ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ ಹೇಳಿದರು.

ನಗರದ ಸೇಂಟ್ ಅಲೋಶಿಯಸ್ ಪ್ರೌಢಶಾಲೆಯಲ್ಲಿ ಚಿಣ್ಣರ ಚಾವಡಿ ಮಂಗಳೂರು, ಸೇಂಟ್ ಮದರ್ ತೆರೆಸಾ ವಿಚಾರ ವೇದಿಕೆ ಆಶ್ರಯದಲ್ಲಿ 6 ದಿನ ನಡೆದ ‘ಚಿಣ್ಣರ ಕಲರವ 2026’ ಮಕ್ಕಳ ಸಂತಸ ಕಲಿಕಾ ಕಾರ್ಯಾಗಾರದ ಸಮಾರೋಪದಲ್ಲಿ ಅವರು ಮಾತನಾಡಿದರು.

ಚಿಣ್ಣರ ಚಾವಡಿ ಜಿಲ್ಲಾ ಸಂಚಾಲಕ, ವಕೀಲ ಮನೋಜ್ ವಾಮಂಜೂರು ಮಾತನಾಡಿ, ವಿವಿಧ ಸ್ವರೂಪದ, ಭಿನ್ನತೆಯುಳ್ಳ ಮಕ್ಕಳೆಲ್ಲರೂ ಒಂದಾಗಿ ಆಟವಾಡಿದರೆ ಅಲ್ಲಿ ಮೂಡುವ ಏಕತೆ ದೇಶಕ್ಕೆ ನೀಡುವ ಐಕ್ಯ ಸಂದೇಶವಾಗಿದೆ. ಇಂದಿನ ಶಿಕ್ಷಣ ನೀತಿ ಅಂಕ ಕೇಂದ್ರೀಕರಿಸುತ್ತದೆಯೇ ಹೊರತು ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸದಿರುವುದು ನೋವಿನ ಸಂಗತಿ. ಈ ಕೊರತೆ ಸಾಂಸ್ಕೃತಿಕ ರಂಗ, ಸಾಹಿತ್ಯ ಲೋಕಕ್ಕೂ ತುಂಬಾ ಪರಿಣಾಮ ಬೀರಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಚಿಣ್ಣರ ಚಾವಡಿ ತಂಡದ ನಿಕಟಪೂರ್ವ ಅಧ್ಯಕ್ಷೆ ಪೂರ್ವಿ ಶೆಟ್ಟಿ ಮಾತನಾಡಿ, ಇಂತಹ ಶಿಬಿರಗಳು ಮಕ್ಕಳ ಮಾನಸಿಕ ಒತ್ತಡ ಕಡಿಮೆ ಮಾಡಿ ಮನಸ್ಸಿಗೆ ಮುದ ನೀಡುತ್ತವೆ ಎಂದು ಹೇಳಿದರು.

ಸೇಂಟ್ ಮದರ್ ತೆರೆಸಾ ವಿಚಾರ ವೇದಿಕೆ ಗೌರವ ಸಲಹೆಗಾರ ಫ್ಲೇವಿ ಕ್ರಾಸ್ತಾ ಅತ್ತಾವರ, ಶಿಬಿರದ ಶಿಕ್ಷಕ ರಾಜ್ ಮುಖೇಶ್ ಸುಳ್ಯ ಮಾತನಾಡಿ, ಇಂತಹ ಶಿಬಿರಗಳು ಮಕ್ಕಳನ್ನು ಸಮಾಜಮುಖಿಯನ್ನಾಗಿಸುವಲ್ಲಿ ಇನ್ನಷ್ಟು ಪ್ರಖರವಾಗಿ ಮೂಡಿಬರಲಿ ಎಂದು ಆಶಯ ವ್ಯಕ್ತಪಡಿಸಿದರು. ಶಿಬಿರದ ಬಗ್ಗೆ ಶಿಬಿರಾರ್ಥಿಗಳು, ಪೋಷಕರು ಮೆಚ್ಚುಗೆ ವ್ಯಕ್ತಪಿಡಿಸಿದರು. ಶಿಬಿರಾರ್ಥಿಗಳಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದವರನ್ನು ಸನ್ಮಾನಿಸಲಾಯಿತು.

ಚಿಣ್ಣರ ಚಾವಡಿ ತಂಡದ ಸಂಚಾಲಕ ಸುನಿಲ್ ಕುಮಾರ್ ಬಜಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಸಂಚಾಲಕರಾದ ಅಸುಂತ ಡಿಸೋಜ, ಶಿಬಿರದ ನಿರ್ದೇಶಕ ಪ್ರವೀಣ್ ವಿಸ್ಮಯ ಬಜಾಲ್, ಚಿಣ್ಣರ ಚಾವಡಿ ಕಾರ್ಯದರ್ಶಿ ಸಂಗಮೇಶ್ ಭಾಗವಹಿಸಿದ್ದರು. ನೂತನ ಅಧ್ಯಕ್ಷ ಆಡ್ಲಿನ್ ಸಿಕ್ವೇರಾ ಸ್ವಾಗತಿಸಿ, ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-29-906238877

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.