ಮಂಗಳೂರು: ‘ಶಿಕ್ಷಣವು ಸೈದ್ಧಾಂತಿಕ ಕಲಿಕೆಯನ್ನು ಮೀರಿ ಪ್ರಾಯೋಗಿಕ ಮಾನ್ಯತೆ ಮತ್ತು ಕೌಶಲ ಅಭಿವೃದ್ಧಿಯ ಬಗ್ಗೆ ಹೆಚ್ಚು ಕೇಂದ್ರೀಕೃತ ಆಗಬೇಕಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಹೇಳಿದರು.

ಅಡ್ಯಾರ್ನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್ನಲ್ಲಿ ಪ್ರಾರಂಭಿಸಿರುವ ಎಂಫಸಿಸ್ ಎಐ ಮತ್ತು ರೊಬೊಟಿಕ್ಸ್ ಪ್ರಯೋಗಾಲಯವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಇಂತಹ ಪ್ರಯೋಗಾಲಯ ಸ್ಥಾಪನೆಯು ಸರ್ಕಾರಿ ಕಾಲೇಜುಗಳಿಗೆ ಮಾದರಿಯಾಗಿದೆ. ಎಂಫಸಿಸ್ ಫೌಂಡೇಶನ್ ಯೋಜನೆಯನ್ನು ಸರ್ಕಾರಿ ಕಾಲೇಜುಗಳಿಗೂ ವಿಸ್ತರಿಸಲು ಯೋಚಿಸಬೇಕು ಎಂದು ಹೇಳಿದರು.

ಎಂಫಸಿಸ್ ಫೌಂಡೇಶನ್ನ ಸ್ಪಾರ್ಕಲ್ ಇನ್ನೊವೇಶನ್ ಇಕೋ ಸಿಸ್ಟಮ್ ಮತ್ತು ಕಮ್ಯುನಿಕೇಷನ್ಸ್ನ ಹಿರಿಯ ಉಪಾಧ್ಯಕ್ಷೆ ಮತ್ತು ಮುಖ್ಯಸ್ಥೆ ದೀಪಾ ನಾಗರಾಜ್ ಮಾತನಾಡಿ, ಈ ಪ್ರಯೋಗಾಲಯವು ವಿದ್ಯಾರ್ಥಿಗಳು ಪ್ರಾಯೋಗಿಕ ಮಾನ್ಯತೆ ಮತ್ತು ಉದ್ಯಮ ಸಂಬಂಧಿತ ಕೌಶಲ ಪಡೆಯಲು ಅನುವು ಮಾಡಿಕೊಡುವ ಎಂಫಸಿಸ್ ಎಐ ಮತ್ತು ರೊಬೊಟಿಕ್ಸ್ ಪ್ರಯೋಗಾಲಮೂಲಕ ಶಿಕ್ಷಣ ಸಂಸ್ಥೆಗಳನ್ನು ಉದ್ಯಮದ ಅವಶ್ಯಕತೆಗಳೊಂದಿಗೆ ಸಂಪರ್ಕಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ. ಇಂದು ಸಂಸ್ಥೆಗಳು ಅತ್ಯುತ್ತಮ ಕೋಡರ್ಗಳನ್ನು ಮಾತ್ರ ಹುಡುಕುತ್ತಿಲ್ಲ, ಬದಲಾಗಿ ನೈಜ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸಲು ಕೃತಕ ಬುದ್ಧಿಮತ್ತೆಯನ್ನು ಪರಿಣಾಮಕಾರಿಯಾಗಿ ಅನ್ವಯಿಸಬಲ್ಲ ವ್ಯಕ್ತಿಗಳನ್ನು ಹುಡುಕುತ್ತಿವೆ ಎಂದರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಕಹಾನಿ ಡಿಸೈನ್ವರ್ಕ್ಸ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ರಾಮನ್ ಮಧೋಕ್, ಎಂಆರ್ಪಿಎಲ್ನ ಗ್ರೂಪ್ ಜನರಲ್ ಮ್ಯಾನೇಜರ್ (ಎಚ್ಆರ್) ನಿರ್ದೇಶಕ ಶ್ರೀಕೃಷ್ಣ ಹೆಗ್ಡೆ, ಎಂಫಸಿಸ್ನ ಸಿಎಸ್ಆರ್ ಮುಖ್ಯಸ್ಥ ಸುಮಿತ್ ಚೌವ್ಹಾಣ್, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಉಪಾಧ್ಯಕ್ಷ ಚೇತನ್ ದೀಕ್ಷಿತ್, ಕಾಲೇಜಿನ ಪ್ರಾಂಶುಪಾಲ ಎಸ್.ಎಸ್. ಇಂಜಗನೇರಿ ಉಪಸ್ಥಿತರಿದ್ದರು.

ಸಹ್ಯಾದ್ರಿ ಕಾಲೇಜಿನ ಸಿಇಒ ಜಾನ್ಸನ್ ಟೆಲ್ಲಿಸ್ ಸ್ವಾಗತಿಸಿದರು. ಎಂಬಿಎ ವಿಭಾಗದ ಪ್ರೊ. ಮೋನಿಷಾ ಶೆಟ್ಟಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-29-1412747247

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.