ಮಂಗಳೂರು: ದೇಶದ ಪ್ರಥಮ ಸ್ವಾಯತ್ತ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಂಗಳೂರಿನ ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್ ಈ ವರ್ಷದಿಂದ ವಿದ್ಯಾರ್ಥಿಗಳ ಪ್ರವೇಶಕ್ಕೆ ‘ಕೆಪಿಟಿ–ಸಿಎಟಿ’ ಪರೀಕ್ಷಾ ಕ್ರಮವನ್ನು ಪರಿಚಯಿಸಿದೆ.

ಕೆಪಿಟಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆಯುವುದು ಕಡ್ಡಾಯ. ಏ.27ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಮೇ 11 ಕೊನೆಯ ದಿನವಾಗಿದೆ. ಮೊದಲ ಹಂತದ ‘ಕೆಪಿಟಿ–ಸಿಎಟಿ’ ಪರೀಕ್ಷೆಯು ಮೇ 6ರಂದು ಹಾಗೂ ಎರಡನೇ ಹಂತದ ಪ್ರವೇಶ ಪರೀಕ್ಷೆಯು ಮೇ 13ರಂದು ನಡೆಯಲಿದೆ. ಅಂತಿಮ ಮೆರಿಟ್ ಪಟ್ಟಿ ಮೇ 20ರಂದು ಪ್ರಕಟವಾಗಲಿದ್ದು, 21ರಿಂದ ಕೌನ್ಸೆಲಿಂಗ್ ಪ್ರಾರಂಭವಾಗಲಿದೆ ಎಂದು ಕೆಪಿಟಿ ಡೀನ್ ರವೀಂದ್ರ ಕೇಣಿ, ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

60 ನಿಮಿಷಗಳ ಪ್ರವೇಶ ಪರೀಕ್ಷೆಯಲ್ಲಿ ಬಹು ಆಯ್ಕೆಯ ಪ್ರಶ್ನೆಗಳು ಇರುತ್ತವೆ. ಎಸ್ಎಸ್ಎಲ್ಸಿಯ ಶೇ 75 ಹಾಗೂ ಪ್ರವೇಶ ಪರೀಕ್ಷೆಯ ಶೇ 25ರಷ್ಟು ಅಂಕ ಪರಿಗಣಿಸಿ ಅಂತಿಮ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ ಎಂದರು.

1946ರಲ್ಲಿ ಪ್ರಾರಂಭವಾದ ಕೆಪಿಟಿಯು ನವದೆಹಲಿಯ ಎಐಸಿಟಿಇ ಯಿಂದ ಮಾನತ್ಯೆ ಪಡೆದು, ಸ್ವಾಯತ್ತ ಗೊಂಡ ಕಾರಣಕ್ಕೆ ಶೈಕ್ಷಣಿಕ, ಆಡಳಿತಾ ತ್ಮಕ, ಪರೀಕ್ಷಾ ವ್ಯವಸ್ಥೆಗಳನ್ನು ಸ್ವತಂತ್ರ ವಾಗಿ ನಿರ್ವಹಿಸುವ ಅಧಿಕಾರ ಪಡೆದು ಕೊಂಡಿದೆ. ಬದಲಾದ ಕಾಲಕ್ಕೆ ತಕ್ಕಂತೆ ಪಠ್ಯಕ್ರಮವನ್ನು ಬದಲಾಯಿಸಿಕೊಳ್ಳಲೂ ಅವಕಾಶವಿದೆ. ಎಸ್ಎಸ್ಎಲ್ಸಿ ಉತ್ತೀರ್ಣರಾದವರು ಕೆಪಿಟಿಯ ಪ್ರವೇಶ ಪರೀಕ್ಷೆ ಬರೆದು ಮೂರು ವರ್ಷಗಳ ಡಿಪ್ಲೊಮಾಕ್ಕೆ ಸೇರ್ಪಡೆಯಾಗಬಹುದು ಎಂದರು.

ಆಟೊಮೊಬೈಲ್ ಎಂಜಿನಿಯರಿಂಗ್, ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್, ಕೆಮಿಕಲ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ , ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿ ಯರಿಂಗ್, ಪಾಲಿಮರ್ ಟೆಕ್ನಾಲಜಿ ಸೇರಿ ಒಟ್ಟು ಎಂಟು ಕೋರ್ಸ್ಗಳಿಗೆ ಒಟ್ಟು 520 ಮಂದಿಗೆ ಪ್ರವೇಶಕ್ಕೆ ಅವಕಾಶ ಇದೆ. ಕಾಲೇಜಿನ ಕೋರ್ಸ್ಗಳ ಪ್ರವೇಶಕ್ಕೆ ಗರಿಷ್ಠ ಶುಲ್ಕ ₹4,830 ಇದ್ದರೆ, ಬಡ, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಕನಿಷ್ಠ ₹580 ಶುಲ್ಕವಿದೆ. ಮಾಹಿತಿಗೆ 0824–3516910/3542476 ಈ ಸಂಖ್ಯೆ ಸಂಪರ್ಕಿಸಬಹುದು ಎಂದು ಪ್ರಾಂಶುಪಾಲ ಹರೀಶ್ ಶೆಟ್ಟಿ ಹೇಳಿದರು.

ಉಪ ಡೀನ್ ನಾರಾಯಣ ಸ್ವಾಮಿ, ರಜಿಸ್ಟ್ರಾರ್ ವಿನೋದಾಕುಮಾರಿ, ಪರೀಕ್ಷಾ ನಿಯಂತ್ರಕ ಪಿ.ಡಿ.ತಳವಾರ, ಪ್ರೊ. ಸತೀಶ್ ಕೆ.ಎಂ, ವಿದ್ಯಾರ್ಥಿ ಕ್ಷೇಮಾ ಧಿ ಕಾರಿ ಹರೀಶ್ ಸಿ.ಪಿ. ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-29-1721657950

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.