ಮಂಗಳೂರು: ಜಿಲ್ಲಾ ರೋಟರ್ಯಾಕ್ಟ್ ಮತ್ತು ರೋಟರ್ಯಾಕ್ಟ್ ಮಂಗಳೂರು ಸಿಟಿ ಆಶ್ರಯದಲ್ಲಿ ರೋಟರ್ಯಾಕ್ಟ್ ಮಾಹಿತಿ ಮತ್ತು ಜಾಗೃತಿ ಅಭಿಯಾನದ ಅಂಗವಾಗಿ ದಿ.ಶಾಂತಾರಾಮ್ ವಾಮಂಜೂರು ಸ್ಮಾರಕ 20 ವಾರ್ಷಿಕ ರಾಜ್ಯ ಮಟ್ಟದ ಅಂತರ್ಕ್ಲಬ್ ರೋಟರ್ಯಾಕ್ಟ್ ರಸಪ್ರಶ್ನೆ ಸ್ಪರ್ಧೆಯು ನಗರದ ಈಡನ್ ಕ್ಲಬ್ ಸಭಾಂಗಣದಲ್ಲಿ ಭಾನುವಾರ ನಡೆಯಿತು.

ರೋಟರ್ಯಾಕ್ಟ್ ಕ್ಲಬ್, ಮಣೇಲ್ ಶ್ರೀನಿವಾಸ ನಾಯಕ್ ಉದ್ಯಮ ಆಡಳಿತ ಕಾಲೇಜನ್ನು ಪ್ರತಿನಿಧಿಸಿದ ಕಾವ್ಯ ಮತ್ತು ಶ್ರೀನಿಧಿ ಅವರ ತಂಡವು ಪ್ರಥಮ ಸ್ಥಾನ ಗೆದ್ದುಕೊಂಡಿತು. ರೋಟರ್ಯಾಕ್ಟ್ ಕ್ಲಬ್ ಮೈಸೂರನ್ನು ಪ್ರತಿನಿಧಿಸಿದ ಪ್ರಜ್ವಲ್ ದ್ವಿತೀಯ ಸ್ಥಾನವನ್ನು ಪಡೆದರು.

ಜಿಲ್ಲಾ ಮಟ್ಟದ 7 ತಂಡಗಳು ಅಂತಿಮ ಮತ್ತು ನಿರ್ಣಾಯಕ ಸುತ್ತಿಗೆ ಆಯ್ಕೆಯಾಗಿದ್ದವು.

ಅತಿಥಿಯಾಗಿದ್ದ ರಂಗಭೂಮಿ ನಟ ಭೋಜರಾಜ ವಾಮಂಜೂರು ಮಾತನಾಡಿ, ಸಹೋದರ, ದಿ.ಶಾಂತಾರಾಮ್ ವಾಮಂಜೂರು ಸ್ಮರಣಾರ್ಥ ಪ್ರತಿ ವರ್ಷ ಸ್ಪರ್ಧೆ ಏರ್ಪಡಿಸುವ ರೋಟರ್ಯಾಕ್ಟ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು. ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ, ಪ್ರಮಾಣ ಪತ್ರ ಪ್ರದಾನ ಮಾಡಿದರು.

ರೋಟರಿ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಭಾಸ್ಕರ ರೈ ಮಾತನಾಡಿ, ರೋಟರ್ಯಾಕ್ಟ್ ಸಂಸ್ಥೆಯ ಯುವ ಸದಸ್ಯರು ಸಂಸ್ಥೆಯ ಧ್ಯೇಯ, ನೀತಿ, ಉದ್ದೇಶ ಅರಿತುಕೊಂಡು ಜ್ಞಾನವನ್ನು ವೃದ್ಧಿಸಬೇಕು. ಸಂಸ್ಥೆಯ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ರೋಟರ್ಯಾಕ್ಟ್ ದಕ್ಷಿಣ ಏಷ್ಯಾ ಸಂಸ್ಥೆಯ ಅಧ್ಯಕ್ಷ ಸ್ಟೀವನ್ ಡೇರಿಲ್ ಡಿಸೋಜ ಭಾಗವಹಿಸಿದ್ದರು.

ರೋಟರ್ಯಾಕ್ಟ್ ಮಂಗಳೂರು ಸಿಟಿ ಅಧ್ಯಕ್ಷ ಅಕ್ಷಯ್ ರೈ ಸ್ವಾಗತಿಸಿದರು. ರೋಟರ್ಯಾಕ್ಟ್ ಮಂಗಳೂರು ಸಿಟಿ ಸಂಸ್ಥೆಯ ಸಭಾಪತಿ ಡಾ. ದೇವದಾಸ್ ರೈ ನಿರೂಪಿಸಿ, ವಲಯ ಪ್ರತಿನಿಧಿ ಚಮನ್ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-29-513261569

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.