ಮಂಗಳೂರು: ಅಡ್ಯಾರ್ನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ನಲ್ಲಿ ಪ್ರಾರಂಭಿಸಿರುವ ಸಮಗ್ರ ಕೈಗಾರಿಕಾ ಕೇಂದ್ರಗಳನ್ನು ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಹಾಗೂ ಆಲ್ಕಾರ್ಗೊ ಗ್ರೂಪ್ನ ಸಂಸ್ಥಾಪಕ ಮತ್ತು ಅಧ್ಯಕ್ಷ ಶಶಿಕಿರಣ್ ಶೆಟ್ಟಿ ಶನಿವಾರ ಉದ್ಘಾಟಿಸಿದರು.

ಡಿಸ್ಕವರ್ ಡಾಲರ್ನ ಇಂಡಸ್ಟ್ರಿ ಇಂಟಿಗ್ರೇಟೆಡ್ ಸೆಂಟರ್ಗಳು, ಎಂ.ಆರ್.ರಿಸಲ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಆಲ್ಕಾರ್ಗೊ ಗ್ರೂಪ್ನ ಉದ್ಘಾಟನೆಯು ಸಹ್ಯಾದ್ರಿ ಕಾಲೇಜಿನಲ್ಲಿ ಉದ್ಯಮ- ಶೈಕ್ಷಣಿಕ ಸಹಯೋಗವನ್ನು ಬಲಪಡಿಸುವಲ್ಲಿ ಮಹತ್ವದ ಮೈಲಿಗಲ್ಲು ಎಂದು ಸಂಸ್ಥೆ ತಿಳಿಸಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಶರಣಪ್ರಕಾಶ ಪಾಟೀಲ, ‘ಸಹ್ಯಾದ್ರಿಯಲ್ಲಿ ಸ್ಥಾಪಿಸಿರುವ ಕೈಗಾರಿಕೆ ಸಂಯೋಜಿತ ಕೇಂದ್ರಗಳು ಶೈಕ್ಷಣಿಕ ಮತ್ತು ಉದ್ಯಮದ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ರಾಜ್ಯ ಸರ್ಕಾರವು ಉದ್ಯಮಕ್ಕೆ ಪೂರಕವಾದ ಪಠ್ಯಕ್ರಮವನ್ನು ಪುನರ್ ರಚಿಸಲು ಯೋಚಿಸುತ್ತಿದೆ. ವಿದ್ಯಾರ್ಥಿಗಳಿಗೆ ಲಭ್ಯವಿರುವ ಜಾಗತಿಕ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು, ಸಹ್ಯಾದ್ರಿ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಭಾಷಾ ಪ್ರಯೋಗಾಲಯ ಸ್ಥಾಪಿಸಬಹುದು’ ಎಂದರು.

ಶಶಿಕಿರಣ್ ಶೆಟ್ಟಿ ಮಾತನಾಡಿ,‘ಹಲವಾರು ದೇಶಗಳು ಒಟ್ಟು ಜನಸಂಖ್ಯೆಯಲ್ಲಿ ಹಿರಿಯ ನಾಗರಿಕರ ಪ್ರಮಾಣ ಹೆಚ್ಚುತ್ತಿರುವ ಸವಾಲನ್ನು ಎದುರಿಸುತ್ತಿವೆ. ಆದರೆ, ಭಾರತವು ಮುಂಬರುವ ವರ್ಷಗಳಲ್ಲಿ ಜಾಗತಿಕ ಕಾರ್ಯಪಡೆಯ ಪ್ರಮುಖ ಪಾತ್ರ ನಿರ್ವಹಿಸುತ್ತದೆ’ ಎಂದು ಹೇಳಿದರು.

ಡಿಸ್ಕವರ್ ಡಾಲರ್ನ ಸಿಇಒ ಸುಬ್ರಹ್ಮಣ್ಯ ರಾವ್, ಜಿಂಥೋರಾ ಎಐನ ಮುಖ್ಯಸ್ಥ ಅಕ್ಷಯ್ ಶೆಟ್ಟಿ, ಡಾಟಾವೆಕ್ಸ್ ಎಐನ ಸಿಇಒ ರಾಜೇಶ್ ಕೋಟ್ಯಾನ್, ಎಂಆರ್ರೆಸಲ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ನ ಉಪಾಧ್ಯಕ್ಷೆ ಪದ್ಮಶ್ರೀ ಆಳ್ವ, ಫ್ಲೋಕೇರ್ನ ಉತ್ಪನ್ನ ನಾಯಕಿ ಶ್ರೇಯಸ್ ಕೋಟ್ಯಾನ್, ಐಐಎಂ ಮುಂಬೈನ ಪ್ರೊ. ವಿವೇಕಾನಂದ ಖಾನಪುರಿ, ಪ್ರೊ. ಬಾಲಕೃಷ್ಣ ಇ. ನಾರ್ಖೇಡೆ, ಕಹಾನಿ ಡಿಸೈನ್ವರ್ಕ್ಸ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕಿ ರಾಮನ್ ಮಧೋಕ್, ಆಲ್ಕಾರ್ಗೊ ಲಾಜಿಸ್ಟಿಕ್ಸ್ನ ಗ್ರೂಪ್ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಇಂದ್ರಾಣಿ ಚಟರ್ಜಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-29-1086325966

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.