ಮಂಗಳೂರು: ಸಹ್ಯಾದ್ರಿ ಎಂಜಿನಿ ಯರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್ ಕಾಲೇಜು ಮತ್ತು ಎಂಫಸಿಸ್ ಫೌಂಡೇಶನ್ ಆಶ್ರಯದಲ್ಲಿ ‘ಎಂಫಸಿಸ್ ಎಐ ಮತ್ತು ರೊಬೊಟಿಕ್ಸ್ ಲ್ಯಾಬ್’ ಅನ್ನು ಸ್ಥಾಪಿಸಿದ್ದು, ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರು ಇದೇ 22ರಂದು ಬೆಳಿಗ್ಗೆ 10ಕ್ಕೆ ಇದನ್ನು ಲೋಕಾರ್ಪಣೆಗೊ ಳಿಸಲಿದ್ದಾರೆ ಎಂದು ಸಂಸ್ಥೆಯ ಪ್ರಾಂಶು ಪಾಲ ಎಸ್.ಎಸ್. ಇಂಜಗನೇರಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು,‘ ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿದ್ಯಾ ಶಂಕರ್, ಸ್ಪಾರ್ಕಲ್ ಇನ್ನೋವೇಶನ್ ಇಕೋಸಿಸ್ಟಮ್ ಮತ್ತು ಕಮ್ಯುನಿಕೇಷನ್ಸ್ನ ಹಿರಿಯ ಉಪಾಧ್ಯಕ್ಷೆ ದೀಪಾ ನಾಗರಾಜ್, ಎಂಫಸಿಸ್ ಫೌಂಡೇಷ ನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ವಿಭಾಗದ ಮುಖ್ಯಸ್ಥ ಸುಮಿತ್ ಚೌಹಾಣ್, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ನ ಉಪಾಧ್ಯಕ್ಷ ಚೇತನ್ ದೀಕ್ಷಿತ್, ನ್ಯಾಸ್ಕಾಮ್ ಪ್ರಾದೇಶಿಕ ನಿರ್ದೇಶಕ ಭಾಸ್ಕರ್ ಭಾಗವಹಿಸಲಿದ್ದಾರೆ’ ಎಂದರು.

ಸಹ್ಯಾದ್ರಿ ಹಬ್ ಫಾರ್ ಇನ್ನೋವೇಶನ್ ಆ್ಯಂಡ್ ಎಂಟರ್ಪ್ರೆನರ್ಶಿಪ್ (ಶೈನ್) ಫೌಂಡೇಶನ್, ಕೆಡಿಇಎಂ ಮತ್ತು ನ್ಯಾಸ್ಕಾಮ್ ಸಹಯೋಗದೊಂದಿಗೆ ಎಂಫಸಿಸ್ ಫೌಂಡೇಶನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಕಾರ್ಯ ಕ್ರಮದ ಅಂಗವಾಗಿ ಸ್ಥಾಪಿಸಲಾಗಿದೆ. ಕೌಶಲ ತರಬೇತಿ ನೀಡಿ ವಿದ್ಯಾರ್ಥಿಗಳನ್ನು ಉದ್ಯಮಕ್ಕೆ ಸಜ್ಜುಗೊಳಿಸುವುದು, ನಾವೀನ್ಯತೆ, ನವೋದ್ಯಮ, ಮತ್ತು ಪ್ರಾದೇಶಿಕ ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಸುಧಾರಿತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ನಾಲ್ಕು ವರ್ಷಗಳಿಗೆ ₹ 2 ಕೋಟಿ ಒದಗಿಸಲಾಗಿದೆ. ಬೇರೆ ಕಾಲೇಜು ವಿದ್ಯಾರ್ಥಿಗಳೂ ಈ ಸೌಲಭ್ಯ ಬಳಸಬಹುದು’ ಎಂದು ಸಿಇಒ ಜಾನ್ಸನ್ ಟೆಲ್ಲಿಸ್ ಮಾಹಿತಿ ನೀಡಿದರು.

‘ಕಾಲೇಜಿನ ಪ್ರಾಂಗಣದಲ್ಲಿ ಸ್ಥಾಪಿಸಿರುವ ಸಮಗ್ರ ಕೈಗಾರಿಕಾ ಕಾರ್ಯಕ್ಷೇತ್ರವನ್ನು ಇದೇ 23ರಂದು 10ಕ್ಕೆ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಆರ್. ಪಾಟೀಲ್ ಉದ್ಘಾಟಿಸುವರು. ಆಲ್ ಕಾರ್ಗೊ ಲಾಜಿಸ್ಟಿಕ್ಸ್ನ ಸಂಸ್ಥಾಪಕ ಮತ್ತು ಅಧ್ಯಕ್ಷ ಶಶಿಕಿರಣ್ ಶೆಟ್ಟಿ, ಸೈಂಟಿಯಾ ಕನ್ಸಲ್ಟಿಂಗ್ ಪ್ರಧಾನ ಸಲಹೆಗಾರ ರಾಹುಲ್ ಖರ್ಗೆ, ಆಲ್ ಕಾರ್ಗೋ ಲಾಜಿಸ್ಟಿಕ್ಸ್ ಗ್ರೂಪ್ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಇಂದ್ರಾಣಿ ಚಟರ್ಜಿ, ಎಂಆರ್ ರಿಸಲ್ಟ್ ಉಪಾಧ್ಯಕ್ಷೆ ಪದ್ಮಶ್ರೀ ಆಳ್ವ, ಡಿಸ್ಕವರ್ ಡಾಲರ್ನ ಸಿಇಒ ಸುಬ್ರಹ್ಮಣ್ಯ ರಾವ್ ಭಾಗವಹಿಸಲಿದ್ದಾರೆ ಎಂದು ಕಾಲೇಜಿನ ಉಪಪ್ರಾಂಶುಪಾಲ ಸುಧೀರ್ ಶೆಟ್ಟಿ ತಿಳಿಸಿದರು.

ವಿದ್ಯಾರ್ಥಿಗಳು ಉದ್ಯಮ ತಜ್ಞರ ಜೊತೆ ಒಡನಾಟ ಹೊಂದುವುದು, ಸಕ್ರಿಯ ಪ್ರಾಜೆಕ್ಟ್ಗಳಲ್ಲಿ ಕಾರ್ಯನಿರ್ವಹಿಸುವುದು, ಇಂಟರ್ನ್ಶಿಪ್ ಮತ್ತು ಫ್ರೀಲ್ಯಾನ್ಸಿಂಗ್ ಕಾರ್ಯಯೋಜನೆಗಳಿಗೆ ಕಾರ್ಯಕ್ಷೇತ್ರ ನೆರವಾಗಲಿದೆ. ಸದ್ಯ 100 ಸ್ಥಾನಗಳು ಲಭ್ಯವಿದ್ದು, ಅದನ್ನು 300ಕ್ಕೆ ಹೆಚ್ಚಿಸಲಿದ್ದೇವೆ. ಸದ್ಯ ನಾಲ್ಕು ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. ವರ್ಷದೊಳಗೆ ಕಂಪನಿಗಳ ಸಂಖ್ಯೆ 25ಕ್ಕೆ ಹೆಚ್ಚಿಸುವ ಉದ್ದೇಶವಿದೆ ಎಂದರು.

ಸಂಸ್ಥೆಯ ರಾಮಕೃಷ್ಣ ದೇವಾನಂದ, ಮಾನಸ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-29-1176516461

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.