ಮಂಗಳೂರು: ‘ತಂತ್ರಜ್ಞಾನ ಯುಗದಲ್ಲಿ ಶಿಕ್ಷಣವು ತನ್ನ ಪ್ರಶ್ನಿಸುವ ಮನೋಭಾವವನ್ನು ಉಳಿಸಿಕೊಂಡು, ಹೇಗೆ ಕಲಿಯಬೇಕು ಎಂಬ ಕಲಿಕಾ ಸಾಮರ್ಥ್ಯ ಬೆಳೆಸಬೇಕು. ಈ ನಿಟ್ಟಿನಲ್ಲಿ ಸೇಂಟ್ ಅಲೋಶಿಯಸ್ ಸಂಸ್ಥೆ ಶ್ಲಾಘನೀಯ ಕಾರ್ಯ ಮಾಡುತ್ತಿದೆ’ ಎಂದು ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಹೇಳಿದರು.

ಸೇಂಟ್ ಅಲೋಶಿಯಸ್ ಕಾಲೇಜಿನ (ಸ್ವಾಯತ್ತ) 16ನೇ ಘಟಿಕೋತ್ಸವದಲ್ಲಿ ಅವರು ಪದವಿ ಪ್ರದಾನ ಮಾಡಿ ಮಾತನಾಡಿದರು.

ಸೇಂಟ್ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ವರಿಷ್ಠ ಫಾ.ಬ್ರಾಯನ್ ಪಿರೇರಾ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಸ್ನಾತಕ, ಸ್ನಾತಕೋತ್ತರ ಹಾಗೂ ಸ್ನಾತಕೋತ್ತರ ಡಿಪ್ಲೊಮಾದ 2,630 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 91 ರ್ಯಾಂಕ್, 16 ವಿಶೇಷ ಬಹುಮಾನ ವಿತರಿಸಲಾಯಿತು.

ಮಂಗಳೂರು ಜೆಸ್ವಿಟ್ ಎಜುಕೇಷನಲ್ ಸೊಸೈಟಿ ಅಧ್ಯಕ್ಷ, ಕರ್ನಾಟಕ ಜೆಸ್ವಿಟ್ ಪ್ರೊವಿನ್ಸ್ ಪ್ರಾಂತೀಯ ಮುಖ್ಯಸ್ಥ ಫಾ.ಡಯೋನಿಶಿಯಸ್ ವಾಝ್ ಎಸ್.ಜೆ. ಮಾತನಾಡಿ, ವಿದ್ಯಾರ್ಥಿಗಳು ತಾವು ಪ್ರೀತಿಸುವ ಕ್ಷೇತ್ರ ಅನುಸರಿಸಬೇಕು. ನಿಮ್ಮ ಮೇಲೆ ವಿಶ್ವಾಸವಿರಲಿ, ಸೇವಾ ಮನೋಭಾವದ ಮೂಲಕ ಜಗತ್ತಿಗೆ ಶಕ್ತಿ ತುಂಬಿ, ಜ್ಞಾನದಿಂದ ಜಗತ್ತನ್ನು ಸಮೃದ್ಧಗೊಳಿಸಿ ಎಂದರು.

ಪ್ರಾಂಶುಪಾಲ ಪ್ರವೀಣ್ ಮಾರ್ಟಿಸ್ ಎಸ್.ಜೆ. ಸ್ವಾಗತಿಸಿದರು. ಕುಲಸಚಿವ ರೊನಾಲ್ಡ್ ನಜರೆತ್ ರ್ಯಾಂಕ್ ವಿಜೇತ ವಿದ್ಯಾರ್ಥಿಗಳು, ವಿಶೇಷ ಬಹುಮಾನ ವಿಜೇತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಆಡಳಿತ ಮಂಡಳಿ, ಶೈಕ್ಷಣಿಕ ಮಂಡಳಿ ಸದಸ್ಯರು, ನಿರ್ದೇಶಕರು, ಡೀನ್ಗಳು, ಬೋಧಕ– ಬೋಧಕೇತರ ಸಿಬ್ಬಂದಿ, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಭಾಗವಹಿಸಿದ್ದರು.

ಘಟಿಕೋತ್ಸವದ ಸಂಯೋಜಕಿ ವೈಷಾಲಿ ರೈ ವಂದಿಸಿದರು. ಉಪನ್ಯಾಸಕರಾದ ವಿದ್ಯಾ ವಿನುತಾ ಡಿಸೋಜ, ಸಂಜುಪ್ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-29-1096305450

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.