ಮಂಗಳೂರು: ಉದ್ಯೋಗ ಮಾರುಕಟ್ಟೆ ಮತ್ತು ಕೌಶಲಗಳ ಅಗತ್ಯ ನಿತ್ಯವೂ ಬದಲಾಗುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಹೊಸದನ್ನು ಕಲಿಯಲು ಮತ್ತು ಪರಿವರ್ತೆನೆಗೆ ಹೊಂದಿಕೊಳ್ಳಲು ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದು ಯುನೆಕ್ಸ್ಟ್ ಲರ್ನಿಂಗ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಂಬರೀಶ್ ಸಿನ್ಹಾ ಸಲಹೆ ನೀಡಿದರು.

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ವಿಶ್ವವಿದ್ಯಾಲಯ ಆನ್ಲೈನ್ ಶಿಕ್ಷಣ ನಿರ್ದೇಶನಾಲಯದ 3ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಆನ್ಲೈನ್ ಶಿಕ್ಷಣಕ್ಕೆ ಸಾಧ್ಯವಾಗಿದೆ. ತಾವಿದ್ದಲ್ಲೇ ಗುಣಮಟ್ಟದ ಶಿಕ್ಷಣ ಸುಲಭವಾಗಿ ಸಿಗುತ್ತಿರುವುದು ಮಹತ್ವದ ಬೆಳವಣಿಗೆ ಎಂದರು.

ಘಟಿಕೋತ್ಸವ ಭಾಷಣ ಮಾಡಿದ ತಮಿಳುನಾಡಿನ ಮರ್ಕಂಟೈಲ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಸಲೀ ಎಸ್. ನಾಯರ್ ಆಧುನಿಕ ಯುಗದಲ್ಲಿ ಸುಲಭವಾಗಿ ಜ್ಞಾನಾರ್ಜನೆ ಮಾಡಲು ಆನ್ಲೈನ್ ಶಿಕ್ಷಣ ನೆರವಾಗಿದೆ ಎಂದರು.

ಮಾಹೆ ಕುಲಪತಿ ಡಾ.ಶರತ್ ಕೆ.ರಾವ್ ಅಚ್ಚುಕಟ್ಟಾದ ಪಠ್ಯಕ್ರಮ, ಸುಲಭ ಕಲಿಕಾ ವ್ಯವಸ್ಥೆ, ಉದ್ಯೋಗಕ್ಕೆ ಬೇಕಾದ ಕೌಶಲ ಸೃಷ್ಟಿ ಹಾಗೂ ಆಧುನಿಕ ತಂತ್ರಜ್ಞಾನ ಒಳಗೊಂಡ ಆನ್ಲೈನ್ ಶಿಕ್ಷಣ ಮಾದರಿ ರೂಪಿಸುವುದು ಸಂಸ್ಥೆಯ ಗುರಿ ಎಂದರು.

ಮಾಹೆ ಆನ್ಲೈನ್ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಮನೋಜ್ ಕುಮಾರ್ ನಾಗಸಂಪಿಗೆ ಪರಿಚಯ ಮಾಡಿದರು. ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹ ಕುಲಪತಿ ನಾರಾಯಣ ಸಭಾಹಿತ್ ಸ್ವಾಗತಿಸಿದರು. ರಿಜಿಸ್ಟ್ರಾರ್ ಪಿ.ಗಿರಿಧರ ಕಿಣಿ ವಂದಿಸಿದರು. ಮಂಗಳೂರು ಕ್ಯಾಂಪಸ್ ಸಹ ಕುಲಪತಿ ಡಾ.ದಿಲೀಪ್ ಜಿ.ನಾಯಕ್ ಹಾಗೂ ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ಡಾ.ವಿನೋದ್ ವಿ.ಥಾಮಸ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-29-192366403

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.