ಮಂಗಳೂರು: ಮಕ್ಕಳ ಬೇಸಿಗೆ ಶಿಬಿರವು ಆನಂದಮಯ ಹಾಗೂ ಉಲ್ಲಾಸದಾಯಕವಾಗಿರಬೇಕು. ಮಕ್ಕಳ ಪಾಲಿಗೆ ಅದು ಮತ್ತೊಂದು ತರಗತಿ ಕೊಠಡಿಯಾಗಬಾರದು ಎಂದು ಮೈಮ್ ರಾಮದಾಸ್ ಹೇಳಿದರು.

ಇಲ್ಲಿನ ತುಳು ಭವನದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಹಮ್ಮಿಕೊಂಡಿರುವ ಒಂದು ವಾರದ ‘ತೆಲಿಕೆ – ನಲಿಕೆ’ ಮಕ್ಕಳ ಬೇಸಿಗೆ ಶಿಬಿರವನ್ನು ಸೋಮವಾರ ಮಕ್ಕಳ ಜೊತೆಗೆ ಡೋಲು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

‘ಅಕಾಡೆಮಿಯು ಇದೇ ಮೊದಲ ಬಾರಿಗೆ ಹಮ್ಮಿಕೊಂಡಿರುವ ಮಕ್ಕಳ ಬೇಸಿಗೆ ಶಿಬಿರದ ಪರಿಕಲ್ಪನೆಯು ಇತರ ಶಿಬಿರಗಳಿಗಿಂತ ಭಿನ್ನವಾಗಿದೆ. ತುಳು ಹಾಗೂ ತುಳುನಾಡಿನ ಅಸ್ಮಿತೆಯ ಈ ಶಿಬಿರವು ಮಕ್ಕಳಿಗೆ ವಿಶಿಷ್ಟ ಅನುಭವ ನೀಡಲಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ‘ತುಳು ಮಣ್ಣಿನ ಕಂಪನ್ನು ಮಕ್ಕಳಿಗೆ ಪರಿಚಯಿಸುವುದು ಈ ಶಿಬಿರದ ಉದ್ದೇಶ. ತುಳುನಾಡಿನ ಸೊಗಡಿನ ಕಲೆ, ಕಥೆ, ಆಟ ಕೂಟಗಳನ್ನು ಈ ಶಿಬಿರದಲ್ಲಿ ಚಿಣ್ಣರಿಗೆ ಹೇಳಿಕೊಡಲಿದ್ದೇವೆ. ವಿವಿಧ ಕ್ಷೇತ್ರಗಳ ಯುವ ಕಲಾವಿದರು, ತರಬೇತುದಾರರು, ಸಾಹಿತಿಗಳು, ಸಂಪನ್ಮೂಲ ವ್ಯಕ್ತಿಗಳಾಗಿ ಭಾವಗಹಿಸಲಿದ್ದಾರೆ’ ಎಂದು ಹೇಳಿದರು.

ಶಿಬಿರದಲ್ಲಿ 60 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಶಿಬಿರದ ಸಹ ನಿರ್ದೇಶಕ, ರಂಗ ಕಲಾವಿದ ವಿನೋದ್ ಶೆಟ್ಟಿ, ಕೊರಲ್ ಕಲಾ ತಂಡದ ಕಲಾವಿದ ರಮೇಶ್ ಮಂಚಕಲ್ ಭಾಗವಹಿಸಿದರು.

ಅಕಾಡೆಮಿಯ ಸದಸ್ಯೆ ಸಂಚಾಲಕಿ ಅಕ್ಷಯ ಆರ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-29-871848296

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.