ಮಂಗಳೂರು: ಎಲ್ಲ ರೂಪದ ತಂಬಾಕು ಉತ್ಪನ್ನಗಳು ಮನುಷ್ಯನ ಆರೋಗ್ಯಕ್ಕೆ ಹಾನಿಕರವಾಗಿವೆ. ಒಮ್ಮೆ ಅದನ್ನು ಸೇವಿಸಲು ಆರಂಭಿಸಿದರೆ ಅದು ನಮ್ಮನ್ನು, ನಮ್ಮ ಜೀವನವನ್ನು ಮುಕ್ತಾಯಗೊಳಿಸುವವರೆಗೂ ಕೊಂಡೊಯ್ಯುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ಹೇಳಿದರು.

ನಗರದ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ವಿಶ್ವ ತಂಬಾಕು ರಹಿತ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ಚಟಕ್ಕೆ ದಾಸರಾಗಬಾರದು ಎಂಬ ದೃಢ ಸಂಕಲ್ಪ ಹೊಂದಬೇಕು. ಆಗ ಜೀವನ ಸುಂದರವಾಗುತ್ತದೆ ಎಂದರು.

ವೆನ್ಲಾಕ್ ಅಧೀಕ್ಷಕ ಡಾ. ಶಿವಪ್ರಕಾಶ್ ಮಾತನಾಡಿ, ಕೆಲವೊಮ್ಮೆ ಆಕರ್ಷಕವಾಗಿ ಪ್ರಸ್ತುತಪಡಿಸುವ ಜಾಹೀರಾತುಗಳು ತಂಬಾಕು– ಗುಟ್ಕಾ ಬಳಸುವಂತೆ ಪ್ರೇರೇಪಿಸುತ್ತವೆ. ಕುತೂಹಲಕ್ಕಾಗಿಯೋ ಅಥವಾ ಅಲ್ಲಿರುವ ನಟ-ನಟಿಯರ ಮೇಲಿನ ಆಕರ್ಷಣೆಗೋ ಒಮ್ಮೆ ಇವುಗಳನ್ನು ಬಳಸಲು ಮನಸ್ಸು ಮಾಡಿದರೆ ನಿಮ್ಮ ಜೀವನ ದುರಂತದಲ್ಲಿ ಮುಕ್ತಾಯವಾಗುತ್ತದೆ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪ್ರತಿನಿಧಿ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, ತಂಬಾಕು-ಗುಟ್ಕಾ ರೀತಿಯ ಮಾದಕ ವಸ್ತುಗಳ ಸೇವನೆ ನಿರ್ಬಂಧಕ್ಕೆ ಇರುವ ಕಾನೂನುಗಳ ಬಗ್ಗೆ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಭಾರಿ ಪ್ರಾಂಶುಪಾಲ ಒ.ಆರ್.ಪ್ರಕಾಶ್ ಮಾತನಾಡಿ, ಬೀಡಿ-ಸಿಗರೇಟು ಮತ್ತು ತಂಬಾಕಿನ ಇತರ ಉತ್ಪನ್ನಗಳನ್ನು ತಯಾರಿಸುವ, ಮಾರುವ ಮತ್ತು ಸಾಗಾಣಿಕೆ ಮಾಡುವ ಕೆಲಸದಿಂದ ಸಾವಿರಾರು ಜನರು ಬದುಕು ಕಟ್ಟಿಕೊಂಡಿದ್ದಾರೆ. ಇದರಿಂದ ಇತರರ ಜೀವನ ಹಾಳಾಗುತ್ತಿದೆ ಎಂಬ ಘೋರ ಸತ್ಯ ಅವರಲ್ಲಿ ಬಹುತೇಕರಿಗೆ ಗೊತ್ತಿಲ್ಲ. ಇಂತಹ ಉದ್ಯಮಗಳ ಬಗ್ಗೆ ಸಮಾಜ ಮರುಚಿಂತನೆ ಮಾಡುವ ಕಾಲ ಸನ್ನಿಹಿತವಾಗಿದೆ ಎಂದರು.

ದಂತವೈದ್ಯೆ ಡಾ.ಆರತಿ ಕುಲಕರ್ಣಿ, ತಂಬಾಕು ಚಟದಿಂದ ಮುಕ್ತರಾಗಿರುವ ಪ್ರನ್ನ ಕುಮಾರ್ ಎನ್ನುವವರು ಮಾತನಾಡಿದರು. ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿ ಡಾ.ದೀಪಾ ಪ್ರಭು ಕೆ.ಪಿ. ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ ಉಳೆಪಾಡಿ ವಂದಿಸಿದರು. ಆಶುರಾ ಬೇಗಂ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-29-124146471

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.