ಮಂಗಳೂರು: ಪ್ರಾಬಲ್ಯ ಸಾಧಿಸುವ ಮನಸ್ಥಿತಿ ಮತ್ತು ಅಹಂನಿಂದಾಗಿ ಯುದ್ಧ, ಕ್ಷೋಭೆ ಉಂಟಾಗುತ್ತದೆ. ಅದು ಸಮಾಜವನ್ನು ಆತಂಕ, ಅಸುರಕ್ಷಿತ ಪರಿಸ್ಥಿತಿಗೆ ಕೊಂಡೊಯ್ಯುತ್ತದೆ. ಇಂಥ ಸಂದರ್ಭದಲ್ಲಿ ಸ್ತ್ರೀಹೃದಯದ ವ್ಯಕ್ತಿಗಳ ಅಗತ್ಯವಿದೆ ಎಂದು ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯಯ ಕನ್ನಡ ವಿಭಾಗದ ಪ್ರಾಧ್ಯಾಪಕಿ ಸೌಮ್ಯಾ ಹೇರಿಕುದ್ರು ಅಭಿಪ್ರಾಯಪಟ್ಟರು.

ಕರಾವಳಿ ಲೇಖಕಿಯರ–ವಾಚಕಿಯರ (ಕಲೇವಾ) ಸಂಘ ನೀಡುವ ‘ಅಮ್ಮ ಸಾಹಿತ್ಯ ಪ್ರಶಸ್ತಿ‘ ಮತ್ತು ‘ಅನನ್ಯ ಸಾಧಕಿ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು ಸ್ತ್ರೀ ಮನಸ್ಥಿತಿಯವರಿಗೆ ಪ್ರಕೃತಿಯ ಗುಣ ಇರುತ್ತದೆ. ಪ್ರಕೃತಿಗೆ ಪಾಲನೆಯ ಗುಣ ಇರುವುದರಿಂದ ವಿನಾಶದ ಯೋಚನೆ ಮೂಡುವುದಿಲ್ಲ. ಪಿತೃಪ್ರಧಾನ ಮನಸ್ಥಿತಿಯಿಂದಾಗಿ ಅಮೆರಿಕ ಸಾಮ್ರಾಜ್ಯ ವಿಸ್ತರಣೆ ದಾಹವನ್ನು ಹೊಂದಿದೆ ಎಂದರು.

ಸಾಮ್ರಾಜ್ಯಶಾಹಿಗಳ ಪುರುಷಹಂಕಾರಕ್ಕೆ ಮಹಿಳೆಯರು, ಮಕ್ಕಳು ಬಲಿಯಾಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಅಮ್ಮನ ಮನಸ್ಸು ಸಮಾಜದಲ್ಲಿ ಇನ್ನಷ್ಟು ವಿಸ್ತರಣೆ ಆಗಬೇಕು. ಆಕೆ ಸಮಾಜ ಕಟ್ಟಲು ಮುಂದೆ ನಿಲ್ಲಬೇಕು ಎಂದ ಸೌಮ್ಯಾ ಜಾತಿ ವ್ಯವಸ್ಥೆಯಲ್ಲೂ ಅಹಂ ದುಷ್ಪರಿಣಾಮ ಬೀರುತ್ತದೆ. ನಾವಷ್ಟೇ ಆರಾಮವಾಗಿರಬೇಕು ಎಂಬ ಒಂದು ವರ್ಗದವರ ಹಪಾಹಪಿ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದರು.

ಡಾ.ಮಮತಾ ತಿಲಕ್ ರಾವ್ ದತ್ತಿ ನಿಧಿಯ ಅಮ್ಮ ಪ್ರಶಸ್ತಿಯನ್ನು ಲೇಖಕಿ, ಪ್ರಕಾಶಕಿ ಇಂದಿರಾ ಹಾಲಂಬಿ ಅವರಿಗೆ, ಅನನ್ಯ ಸಾಧಕಿ ಪ್ರಶಸ್ತಿಯನ್ನು ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ ಅವರಿಗೆ ಪ್ರದಾನ ಮಾಡಲಾಯಿತು. ಚಂದ್ರಭಾಗಿ ರೈ ಪುಸ್ತಕ ಬಹುಮಾನವನ್ನು ಬಾಗಲಕೋಟೆ ಇಳಕಲ್ನ ಕವಯತ್ರಿ ಮರ್ತುಜಾ ಬೇಗಮ್ ಅವರಿಗೆ ನೀಡಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಮತಾ ತಿಲಕ್ ರಾವ್, ಓದುಗರನ್ನು ಬೆಳೆಸದ ಮತ್ತು ಓದುಗರೇ ಇಲ್ಲದ ಸಾಹಿತ್ಯ ನಿಷ್ಪ್ರಯೋಜಕ. ಆದ್ದರಿಂದ ಓದುವ ಹವ್ಯಾಸ ಬೆಳೆಸಿ ಬರೆಯಲು ಪ್ರೋತ್ಸಾಹ ನೀಡಬೇಕು ಎಂದರು.

ಸಾವಯುವ ಸಂಬಂಧಗಳ ಮೂಲಕ ಜಗತ್ತನ್ನು ಉಳಿಸಬಹುದು ಮತ್ತು ಬದುಕಿಸಬಹುದು ಎಂದು ಪ್ರಶಸ್ತಿ ಪ್ರದಾನ ಮಾಡಿದ ‘ಟೀಚರ್’ ಪತ್ರಿಕೆಯ ಸಂಪಾದಕ ಉದಯ ಗಾಂವ್ಕರ್ ಹೇಳಿದರು. ಕಲೇವಾ ಸಂಘದ ಅಧ್ಯಕ್ಷೆ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಲೇಖಕಿ ಚಂದ್ರಕಲಾ ನಂದಾವರ ಅವರ ನಿರ್ವಹಣೆಯಲ್ಲಿ ಇಂದಿರಾ ಹಾಲಂಬಿ ಅವರ ಓದು ಮತ್ತು ಸಂವಾದ ನಡೆಯಿತು. ಸೇಂಟ್ ಆ್ಯಗ್ನೆಸ್, ಬೆಸೆಂಟ್, ದಯಾನಂದ ಪೈ ಮತ್ತು ಸತೀಶ್ ಪೈ ಕಾಲೇಜು, ಮಲ್ಮಠ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಾರದಾ ವಿದ್ಯಾಲಯದ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ರತ್ನಾವತಿ ಜೆ. ಬೈಕಾಡಿ ಆಶಯಗೀತೆ ಹಾಡಿದರು. ಸುಧಾರಾಣಿ ಕಾರ್ಯಕ್ರಮ ನಿರೂಪಿಸಿದರು. ಯಶೋದಾ ಮೋಹನ್ ಸ್ವಾಗತಿಸಿದರು. ರೂಪಕಲಾ ಆಳ್ವ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-28-1706253339

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.