ಮಾನ್ವಿ: ‘ನಾಡು, ನುಡಿ ಹಾಗೂ ಸಂಸ್ಕೃತಿಯ ಹಿತರಕ್ಷಣೆಗಾಗಿ ಕೆಲಸ ಮಾಡುವ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ಅಗತ್ಯ’ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಜಿ.ಶಿವರಾಜ ನಾಯಕ ಹೇಳಿದರು.

ಶನಿವಾರ ಪಟ್ಟಣದ ಕಳಿಂಗ ಪಿಯು ಕಾಲೇಜಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಆರ್. ಲಲಿತಮ್ಮ ದತ್ತಿ ವಿಷಯ ‘ಕನ್ನಡ ಸಾಹಿತ್ಯ’ ಕುರಿತು ನಿವೃತ್ತ ಶಿಕ್ಷಕಿ ಮಹಿಮೂದಾ ಬೇಗಂ,. ದಿವಂಗತ ಮನೋರಂಜನ ದತ್ತಿ ವಿಷಯ ‘ವಚನ ಸಾಹಿತ್ಯ’ ಕುರಿತು ಜಿ.ಎಂ. ರಂಗಪ್ಪ ಮೇದಾ, ‘ಕನ್ನಡದ ಕಟ್ಟಾಳು ರಾಮಚಂದ್ರಪ್ಪ’ ದತ್ತಿ ಕುರಿತು ನಿವೃತ್ತ ಶಿಕ್ಷಕ ಮೂಕಪ್ಪ ಕಟ್ಟಿಮನಿ ಉಪನ್ಯಾಸ ನೀಡಿದರು.

ಕುಂಬಳೂರು ಆದಮ್ಮ ಈರಣ್ಣ ಸ್ಮಾರಕ ದತ್ತಿ ಪ್ರಶಸ್ತಿಯನ್ನು ‘ಅಂತರ್ಧ್ವನಿ’ ಕೃತಿಯ ಲೇಖಕಿ ಅಂಬಮ್ಮ ಪ್ರತಾಪಸಿಂಗ್ ಅವರಿಗೆ ನೀಡಿ ಗೌರವಿಸಲಾಯಿತು. ಪ್ರಥಮದರ್ಜೆ ಗುತ್ತೇದಾರ ಎಂ.ಮಲ್ಲಿಕಾರ್ಜುನಗೌಡ ಪೋತ್ನಾಳ ಅವರು ತಮ್ಮ ತಂದೆ ಮರಿಲಿಂಗಣ್ಣಗೌಡ ಸ್ಮಾರಕ ದತ್ತಿಯನ್ನು ಘೋಷಣೆ ಮಾಡಿದರು.

ಬಿವಿಆರ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ವಿ.ರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಅಧ್ಯಕ್ಷ ಶರಣಬಸವ ನೀರಮಾನ್ವಿ, ದತ್ತಾತ್ರೇಯ ಮೇಟಿ, ಸೈಯ್ಯದ್ ಹುಸೇನ್ ಸಾಹೇಬ್, ದತ್ತಿ ದಾನಿಗಳಾದ ಎಚ್.ಶರ್ಪುದ್ದೀನ್ ಪೋತ್ನಾಳ ಹಾಗೂ ಚಂದ್ರಶೇಖರ ಸುಟ್ಟಹಟ್ಟಿ, ಉಪನ್ಯಾಸಕಿ ಲಾವಣ್ಯ, ಲಕ್ಷ್ಮಣ ಜಾನೇಕಲ್, ಹನುಮಂತಪ್ಪ ಕೊಟ್ನೆಕಲ್, ಚನ್ನಬಸವ ಮಾಡಗಿರಿ, ಬಸವರಾಜ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-32-1839498588

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.