ಮಾನ್ವಿ: ‘ವಿದ್ಯಾರ್ಥಿಗಳು ಕೇವಲ ಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ಹೊಸ ಆಲೋಚನೆಗಳನ್ನು ಹುಟ್ಟು ಹಾಕುವ ಮತ್ತು ಸತ್ಯವನ್ನು ಅನ್ವೇಷಿಸುವ ಸಂಶೋಧನಾ ಪ್ರವೃತ್ತಿಯತ್ತ ಮುಖ ಮಾಡಬೇಕು’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸೈಯದ್ ಮುಜೀಬ್ ಅಹ್ಮದ್ ಹೇಳಿದರು.

ಪಟ್ಟಣದ ಲೊಯೋಲ ಕಾಲೇಜಿನಲ್ಲಿ ಈಚೆಗೆ ಏರ್ಪಡಿಸಲಾಗಿದ್ದ ವಿದ್ಯಾರ್ಥಿಗಳ ಪ್ರಾಯೋಗಿಕ ಕಾರ್ಯ ಮತ್ತು ಕ್ಷೇತ್ರ ಅಧ್ಯಯನ ವಿಷಯಗಳ ಪ್ರಸ್ತುತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಲೊಯೋಲ ಕಾಲೇಜಿನ ಪ್ರಾಂಶುಪಾಲ ಫಾದರ್ ವಿನೋದ್ ಪೌಲ್ ಮಾತನಾಡಿ,‘ ಇಗ್ನೇಶಿಯಸ್ ಬೋಧನಾ ಕ್ರಮ ಮತ್ತು ಕ್ಷೇತ್ರ ಅಧ್ಯಯನಗಳ ಸಮ್ಮಿಲನವು ಗುಣಮಟ್ಟದ ಶಿಕ್ಷಣಕ್ಕೆ ಭದ್ರ ಬುನಾದಿಯಾಗಿದೆ. ಇದು ವಿದ್ಯಾರ್ಥಿಗಳಲ್ಲಿ ಆಂತರಿಕ ಪರಿವರ್ತನೆಯನ್ನು ತಂದು, ಅವರನ್ನು ಸಮಾಜಮುಖಿ ಆಲೋಚನೆಯುಳ್ಳ ಉತ್ತಮ ನಾಯಕರನ್ನಾಗಿ ರೂಪಿಸುವಲ್ಲಿ ಯಶಸ್ವಿಯಾಗುತ್ತದೆ’ ಎಂದರು.

ಸಹಾಯಕ ಪ್ರಾಧ್ಯಾಪಕರಾದ ಚಂದ್ರು ಎನ್.ಹೊಸೂರು, ಬಸವರಾಜ ಸುಂಕೇಶ್ವರ, ಹುಲಿಯಪ್ಪ ದುಮತಿ ಮಾತನಾಡಿದರು. ಸ್ನಾತಕ ಪದವಿಯ ಕಲಾ ವಿಭಾಗದ ನಾಲ್ಕನೇ ಮತ್ತು ಆರನೇ ಸೆಮಿಸ್ಟರ್ ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರ ಅಧ್ಯಯನದ ವಿಷಯಗಳನ್ನು ಮತ್ತು ಪ್ರಾಯೋಗಿಕ ಕಾರ್ಯಗಳನ್ನು ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿದರು. ಉಪ ಪ್ರಾಚಾರ್ಯ ಖಾಸಿಂಸಾಬ್, ಕಲಾ ವಿಭಾಗದ ಮುಖ್ಯಸ್ಥ ದೇವಣ್ಣ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-32-1301540844

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.