ಮಾನ್ವಿ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿದ್ದ ದಿ.ಸೈಯದ್ ಇಕ್ಬಾಲ್ ಅಹ್ಮದ್ ಸ್ಮರಣಾರ್ಥ ಸಹಾಯಕ ಪ್ರಾಧ್ಯಾಪಕ ಸೈಯದ್ ಮುಜೀಬ್ ಅಹ್ಮದ್ ಅವರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ನಿಧಿಗೆ ₹25ಸಾವಿರ ದೇಣಿಗೆಯನ್ನು ಬುಧವಾರ ನೀಡಿದರು.

ದತ್ತಿನಿಧಿ ದೇಣಿಗೆ ₹25 ಸಾವಿರದ ಡಿಡಿ ಸ್ವೀಕರಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಶರಣಬಸವ ನೀರಮಾನ್ವಿ, ‘ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ಸ್ಥಾಪಿಸಿರುವುದು ಶ್ಲಾಘನೀಯ. ಸಾಹಿತ್ಯ ಪರಿಷತ್ತಿನ ವತಿಯಿಂದ ಪ್ರತಿ ವರ್ಷ ಸೈಯದ್ ಇಕ್ಬಾಲ್ ಅಹ್ಮದ್ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ದತ್ತಿ ದಾನಿ ಸೈಯದ್ ಮುಜೀಬ್ ಅಹ್ಮದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸೈಯದ್ ಇಕ್ಬಾಲ್ ಅಹ್ಮದ್ ಅವರ ಸಹೋದರ ಸೈಯದ್ ಹುಸೇನ್ ಸಾಹೇಬ್, ಕಸಾಪ ಕೋಶಾಧ್ತಕ್ಷ ಎಚ್.ಶರ್ಪುದ್ದೀನ್ ಪೋತ್ನಾಳ, ಗೌರವ ಕಾರ್ಯದರ್ಶಿ ಲಕ್ಷ್ಮಣ ಜಾನೇಕಲ್, ಡಿಎಸ್ಎಸ್ ಮುಖಂಡ ಚನ್ನಬಸವ ಮಾಡಗಿರಿ ಮಾತನಾಡಿದರು.

ಪ್ರಾಧ್ಯಾಪಕರಾದ ಸೈಯದ್ ಮಿನಾಜುಲ್ ಹಸನ್, ಚಂದ್ರು ಎನ್.ಹೊಸೂರು, ಚನ್ನಬಸವ ಮಾಡಗಿರಿ, ಬಸವರಾಜ ಸುಂಕೇಶ್ವರ, ಬಿಲಾಲ್, ಎಚ್.ಚಂದ್ರಶೇಖರ, ಗೋಪಾಲ, ಶಿಕ್ಷಕ ಸಬ್ಜಲಿ, ರೆಹಮತ್ ಅಲಿ, ಮುದಾಸ್ಸಿರ್ ಅಲಿ, ರಾಮು ಹೊಳೆಪ್ಪನವರ, ರಾಜೆ ಸಾಬ್ ಹಾಗೂ ಸೈಯದ್ ಇಕ್ಬಾಲ್ ಅಹ್ಮದ್ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-32-748086800

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.