ಮೊಳಕಾಲ್ಮುರು: ‘ಉತ್ತಮ ಶಿಕ್ಷಣ ಪಡೆಯುವ ಮೂಲಕ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ, ಆದ್ದರಿಂದ ಪೋಷಕರು ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ತರಲು ಒತ್ತು ನೀಡಬೇಕು’ ಎಂದು ಪಟ್ಟಸಾಲಿ ನೇಕಾರರ ಜನಾಂಗದ ರಾಜ್ಯ ಘಟಕದ ಅಧ್ಯಕ್ಷ ಎಚ್. ತಿಪ್ಪೇಸ್ವಾಮಿ ಹೇಳಿದರು.

ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಭಾನುವಾರ ಪಟ್ಟಸಾಲಿ ನೇಕಾರ ಜನಾಂಗದ ಮಕ್ಕಳಿಗೆ ಪಟ್ಟಸಾಲೆ ನೇಕಾರ ನೌಕರರ ಸಂಘವು ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ನೇಕಾರ ಜನಾಂಗವು ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿ ನಿರುದ್ಯೋಗ ಮತ್ತು ಆರ್ಥಿಕ ಸಮಸ್ಯೆ ಎದುರಿಸುತ್ತಿದೆ. ಇದನ್ನು ಮೆಟ್ಟಿ ನಿಲ್ಲಲು ಜನಾಂಗವು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಅನಾದಿ ಕಾಲದ ಕುಲಕಸುಬು ಎಂದು ನೆಚ್ಚಿಕೊಂಡು ಕೂತಲ್ಲಿ ಮಕ್ಕಳ ಭವಿಷ್ಯ ಕಷ್ಟಕರವಾಗಲಿದೆ’ ಎಂದು ಕಿವಿಮಾತು ಹೇಳಿದರು.

‘ಪ್ರತಿಭೆ ಎನ್ನುವುದು ಎಲ್ಲಾ ಮಕ್ಕಳಲ್ಲಿಯೂ ಇರುತ್ತದೆ. ಇದನ್ನು ಹುಡುಕಿ ಹೊರತರುವ ಜೊತೆಗೆ ಸೂಕ್ತ ರೀತಿಯಲ್ಲಿ ಪ್ರೋತ್ಸಾಹಿಸಲು ಸಮುದಾಯ ಸಹಕಾರ ನೀಡಬೇಕು’ ಎಂದು ಸಮಾಜದ ಸ್ಥಳೀಯ ಘಟಕದ ಅಧ್ಯಕ್ಷ ಎನ್. ಅಪ್ಪಳ್ಳಿ ಮನವಿ ಮಾಡಿದರು.

ಈ ವೇಳೆ ಎಸ್ಎಸ್ಎಲ್ಸಿ, ಪಿಯಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಮತ್ತು ಕಿಜ್ ಕಾರ್ಯಕ್ರಮ, ದೇವರ ದಾಸಿಮಯ್ಯ ವಚನಗಳ ಕಂಠಪಾಠ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಂಘದ ಅಧ್ಯಕ್ಷ ಸಿ.ಎಸ್. ತಿಪ್ಪೇಶ್, ಕಾರ್ಯದರ್ಶಿ ಜೆ.ಬಿ. ರಾಜು, ಸದಸ್ಯರಾದ ಎಸ್.ಟಿ. ನಾಗರಾಜ್, ಬಿ.ಆರ್. ತಿಪ್ಪೇಶ್, ಒ.ಟಿ. ನಾಗರಾಜ್, ಎಚ್. ಶ್ರೀನಿವಾಸ್, ಪುಷ್ಪಲತಾ, ರುದ್ರಮುನಿ, ವಲಯ ಅರಣ್ಯಾಧಿಕಾರಿ ರಾಮಚಂದ್ರಪ್ಪ, ನಿವೃತ್ತ ಶಿಕ್ಷಕ ಆರ್.ಕೆ. ತಿಪ್ಪೇರುದ್ರಪ್ಪ, ಎಂ.ಎಲ್. ತಿಮ್ಮರಾಜ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-44-395313633

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.