ಮೂಡುಬಿದಿರೆ: ಸಿಬಿಎಸ್ಇ ಹತ್ತನೇ ತರಗತಿಯ ಫಲಿತಾಂಶದಲ್ಲಿ ಆಳ್ವಾಸ್ನ 42 ವಿದ್ಯಾರ್ಥಿಗಳು ಶೇ 95ಕ್ಕೂ ಅಧಿಕ ಅಂಕ ಪಡೆದಿದ್ದಾರೆ.

ಸಂಸ್ಥೆ ಸತತ ಆರು ವರ್ಷದಿಂದ ಶೇ 100 ಫಲಿತಾಂಶ ದಾಖಲಿಸುತ್ತಿದೆ. ಕರ್ನಾಟಕದ ಒಂದು ಶಾಲೆಯಿಂದ ಶೇ 95ಕ್ಕಿಂತ ಹೆಚ್ಚು ಅಂಕ ಪಡೆದವರ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಆಳ್ವಾಸ್ ಪ್ರಥಮ ಸ್ಥಾನ ಪಡೆದಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅನಘಾ ಉಮೇಶ್ ರಾವ್ (ಶೇ 99.2), ಪ್ರಮತ್ ಔರಾದ್ಕರ್ (99), ಆದ್ಯಾ ಭಟ್ (99), ಅನುರಾಧಾ (99), ವಾತ್ಸಲ್ಯ ಎನ್. (98%), ಧನ್ವಿತ್ ಪಿ.ಬಿ. (97.2), ನಮ್ರತಾ (97.2), ಮನೋಘ್ನ (97), ಶ್ವೇತಾ (97), ಶಿವಾನಿ ಜಿ.ಎ. (97), ವಾಘ್ಮಿ ಪ್ರಶಾಂತ್ (97), ಅವನಿ ಪಿ.ಶೆಟ್ಟಿ (97), ವಿಭಾಸ್ (97), ಯಕ್ಷಿತಾ (96.4), ಸೃಜನ್ (96.4), ಗೌತಮ್ (96.4), ಪ್ರತೀಕ್ಷಾ ಕೆ.ಎಂ. (96.4), ಸಾನ್ವಿ (96.4), ಜನಿತ್ (96.2), ಭಾರ್ಗವ್ (96), ಜಶ್ಮಿತಾ (96), ಐಶ್ರೀ ಶೆಟ್ಟಿ (96), ಆದಿಲ್ (96), ಧೃತಿ (96), ನಿಶ್ಚಲ್ (96), ಹಿತೈಶಿ (96), ಪ್ರಥಮ್ (96), ಆದ್ರಿತ್ (95.4), ಸುಮಿತ್ (95.2), ಐಶಾನಿ (95.2), ಭೃತಿ (95), ಪೂರ್ವಿಕ್ (95), ತರುಂಜನ್ (95), ಸಾಯಿದೀಕ್ಷಾ (95), ಅಂಜನಾ ತನಯ್ (95), ಗ್ಲೋರಿ ಪ್ರಕಾಶ್ (95), ಅಂಜನಿ (95), ದಿವ್ಯಾ (95), ಧನ್ಯಾ (95), ನಿಶಾ (95), ಅಧ್ವಿತಿ (95), ಯಶಶ್ವಿ (95), ಸಂಜನಾ (95), ಹರ್ಷವರ್ಧನ್ (95) ರೋಹಿತ್ (95), ಸಿದ್ಧಾರ್ಥ (95) ಸಾಧನೆ ಮಾಡಿದ್ದಾರೆ ಎಂದರು.

116 ವಿದ್ಯಾರ್ಥಿಗಳು ಶೇ 90ಕ್ಕಿಂತ ಅಂಕ ಗಳಿಸಿದ್ದು, 185 ಮಂದಿ ಶೇ 85, 225 ಮಂದಿ ಶೇ 80ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ. ಸಂಸ್ಕೃತದಲ್ಲಿ 7 ಮಂದಿ, ಹಿಂದಿಯಲ್ಲಿ ನಾಲ್ವರು, ಸಮಾಜ ವಿಜ್ಞಾನ, ಕನ್ನಡದಲ್ಲಿ ತಲಾ ಮೂವರು, ವಿಜ್ಞಾನ ಹಾಗೂ ಇಂಗ್ಲಿಷ್ನಲ್ಲಿ ತಲಾ ಒಬ್ಬ ವಿದ್ಯಾರ್ಥಿ ಶೇ 100 ಅಂಕ ಪಡೆದಿದ್ದಾರೆ. ಅವುಗಳ ಜೊತೆಯಲ್ಲಿ ಐಟಿ ವಿಷಯದಲ್ಲಿ 17 ವಿದ್ಯಾಥಿಗಳು ಶೇ 100 ಅಂಕ ಗಳಿಸಿದ್ದಾರೆ ಎಂದು ಹೇಳಿದರು.

ವಿಷಯವಾರು ಅಂಕಗಳಲ್ಲಿ 36 ಮಂದಿ ಶೇ 100 ಅಂಕ, 69 ಮಂದಿ ಶೇ 99, 117 ಮಂದಿ ಶೇ 98, 175 ಮಂದಿ ಶೇ 97, 255 ಮಂದಿ ಶೇ 96, 335 ಮಂದಿ ಶೇ 95 ಅಂಕಗಳಿಸಿದ್ದಾರೆ.

ಆಡಳಿತಾಧಿಕಾರಿ ಪ್ರೀತಂಕುಂದರ್, ಆಳ್ವಾಸ್ ಸಿಬಿಎಸ್ಇ ಶಾಲೆಯ ಮುಖ್ಯಶಿಕ್ಷಕ ಮೊಹಮ್ಮದ್ ಶಫಿ ಶೇಖ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-29-2029328358

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.