ಮೂಡಲಗಿ: ‘ನಮ್ಮ ನಾಡಿನ ಸಂಸ್ಕೃತಿಯ ಮೂಲ ಬೇರಾಗಿರುವ ಜನಪದವನ್ನು ಕೇವಲ ವೇದಿಕೆಗಳಿಗೆ ಸೀಮಿತಗೊಳಿಸದೆ ಜಾನಪದ ಕಲೆ, ಆಚರಣೆಗಳನ್ನು ಉಳಿಸಿಕೊಂಡು ಹೋಗುವುದು ಅವಶ್ಯವಿದೆ’ ಎಂದು ಮೂಡಲಗಿಯ ಎಸ್ಎಸ್ಆರ್ ಪದವಿ ಪೂರ್ವ ಕಾಲೇಜು ನಿವೃತ್ತ ಪ್ರಾಚಾರ್ಯ ಎಸ್.ಡಿ. ತಳವಾರ ಹೇಳಿದರು.

ಇಲ್ಲಿಯ ಕನ್ನಡ ಸಾಹಿತ್ಯ ಪರಿಷತ್ತು ಮೂಡಲಗಿ ಘಟಕ ಹಾಗೂ ಜ್ಞಾನದೀಪ್ತಿ ಫೌಂಡೇಷನದಿಂದ ಪ್ರತಿ ತಿಂಗಳು ಜರುಗುವ ಬೆಳದಿಂಗಳ ಸಾಹಿತ್ಯ ಚಿಂತನ ಮಂಥನ ಸರಣಿಯ 51ನೇ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜಾನಪದವು ಕೇವಲ ಮನರಂಜನೆಯಾಗಿರಲಿಲ್ಲ, ಅದು ಆಗಿನ ಜನರ ಬದುಕು ಆಗಿತ್ತು. ಬದುಕಿನೊಂದಿಗೆ ಜಾನಪದವು ಹಾಸುಹೊಕ್ಕು ಜನರ ಬೆವರು ಮತ್ತು ಉಸಿರಿನೊಂದಿಗೆ ಹೊರಹೊಮ್ಮಿದ್ದರಿಂದ ಇಂದಿಗೂ ಅದು ಸತ್ವಯುತವಾಗಿದೆ ಮತ್ತು ಇಂದಿನ ಬದುಕಿಗೂ ಹತ್ತಿರವಾಗುತ್ತದೆ’ ಎಂದರು.

‘ಕನ್ನಡ ಸಾಹಿತ್ಯ ಪರಿಷತ್ತು ಜಾನಪದ ಸೇರಿದಂತೆ ಸಾಹಿತ್ಯ, ಆಧ್ಯಾತ್ಮಿಕ, ಸಾಮಾಜಿಕ ಸಂಗತಿಗಳಿಗೆ ವೇದಿಕೆ ಕಲ್ಪಿಸಿ ತಂತ್ರಜ್ಞಾನ ದಿನಗಳಲ್ಲಿ ಜನರನ್ನು ನೈತಿಕ ಮೌಲ್ಯಗಳತ್ತ ಗಮನಹರಿಸುವಂತೆ ಮಾಡುತ್ತಿದೆ, ಇದು ಶ್ಲಾಘನೀಯವಾಗಿದೆ’ ಎಂದರು.

ಎಸ್ಎಸ್ಆರ್ ಪ್ರೌಢಶಾಲೆಯ ಇಂಗ್ಲಿಷ್ ಶಿಕ್ಷಕ ರಮೇಶ ಬಿರಾದಾರ ‘ಜಾನಪದ ಸಾಹಿತ್ಯ ಅಂದು ಇಂದು’ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿ, ‘ಜನರ ಬಾಯಿಯಿಂದ ಬಾಯಿಗೆ ಬಂದಿರುವುದು ಮತ್ತು ಯಾವುದು ಲಿಖಿತ ರೂಪದಲ್ಲಿ ಇಲ್ಲವೋ ಅದು ಜಾನಪದವಾಗಿ ಗಟ್ಟಿ ನೆಲೆ ಹೊಂದಿದೆ. ಜಾನಪದವನ್ನು ಉಳಿಸಿ ಬೆಳೆಸುವುದು ಇಂದಿನ ಅವಶ್ಯಕತೆ ಇದೆ’ ಎಂದರು.

ವೇದಿಕೆಯಲ್ಲಿ ಕಸಾಪ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ, ಪ್ರೊ.ಸಂಗಮೇಶ ಗುಜಗೊಂಡ, ಡಾ.ಮಹಾದೇವ ಜಿಡ್ಡಿಮನಿ, ಬಿ.ಎಂ. ನಂದಿ, ಬಿ.ವೈ. ಶಿವಾಪುರ, ಪಿ. ಅಯ್ಯನಗೌಡರ, ರಾಷ್ಟ್ರಪ್ರಶಸ್ತಿ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಎ.ಜೆ. ಶರಣಾರ್ಥಿ, ಮಾವಿನಹುಂಡಿ, ವೈ.ಎಲ್. ವ್ಯಾಪಾರಿ, ಸುರೇಶ ಲಂಕೆಪ್ಪನ್ನವರ, ಶಿವರಾಜ ಕಾಂಬಳೆ, ಶೈಲಜಾ ಬಡಿಗೇರ, ಗೋದಾವರಿ ದೇಶಪಾಂಡೆ, ಬಾಳೇಶ ತುಬಾಕಿ ಇದ್ದರು. ಆರ್.ಎಂ. ಕಾಂಬಳೆ ಪ್ರಾರ್ಥಿಸಿದರು. ಬಿ.ಆರ್. ತರಕಾರ ಸ್ವಾಗತಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-21-599226634

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.