ಮೂಡಲಗಿ: ‘ಜಾನಪದ ರಂಗಭೂಮಿಯ ಬಯಲಾಟಗಳು ಇಂದು ನಿರ್ಲಕ್ಷಿತ ಕ್ಷೇತ್ರವಾಗುತ್ತಿದ್ದು, ಬಯಲಾಟಗಳ ಕುರಿತು ಹೆಚ್ಚಿನ ಸಂಶೋಧನಾ ಕಾರ್ಯಗಳು ನಡೆಯಬೇಕು’ ಎಂದು ಮೂಡಲಗಿ ಎಂಇಎಸ್ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಎ. ಎಸ್.ಮೀಶಿನಾಯ್ಕ ಹೇಳಿದರು.

ಇಲ್ಲಿಯ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಹದ ಕನ್ನಡ ವಿಭಾಗದ ಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳ ಯೋಜನಾ ಕಾರ್ಯ ವರದಿ ಮಂಡನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ಯುವ ಸಮುದಾಯ ಪಾಶ್ಚಾತ್ಯ ಸಂಸ್ಕೃತಿಯ ಕಡೆಗೆ ವಾಲುತ್ತಿದೆ. ಆದರೆ ನಮ್ಮ ಮೂಲ ಜನಪದ ಕಲೆ ಸಂಸ್ಕೃತಿಯಲ್ಲಿಯೇ ಸೃಜನಶೀಲ ಶಕ್ತಿ ಇದೆ. ಅವುಗಳ ಕುರಿತು ಹೆಚ್ಚಿನ ಅಧ್ಯಯನ ವಿದ್ಯಾರ್ಥಿ ದೆಸೆಯಲ್ಲಿ ನಡೆಯಬೇಕು ಎಂದರು.

ರಂಗ ಚಿಂತಕ ರಾಜು ಕಂಬಾರ ಮಾತನಾಡಿ, ಜಾನಪದ ಕಲೆಗಳ ಸಂಗಮವಾಗಿರುವ ಬಯಲಾಟಗಳು ಇಂದು ಸಂಪೂರ್ಣವಾಗಿ ನಶಿಸಿ ಹೋಗುತ್ತಿವೆ. ಅವುಗಳ ಪ್ರದರ್ಶನಗಳು ಕೂಡ ಕಡಿಮೆಯಾಗುತ್ತಿವೆ. ಹೊಸದಾಗಿ ಬಯಲಾಟ ಕಲಾವಿದರು ಬಣ್ಣ ಬಳಿದುಕೊಳ್ಳುತ್ತಿರುವುದು ತೀರಾ ನಿಂತು ಹೋಗಿದೆ ಎಂದರು. ಅಧ್ಯಕ್ಷತೆಯನ್ನು ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಬಸಪ್ಪ.ಎಸ್. ಹೆಬ್ಬಾಳ ವಹಿಸಿ ಮಾತನಾಡಿದರು. ಕನ್ನಡ ವಿಭಾಗದ ಹಾಲಪ್ಪ ಮಡಿವಾಳ, ಸುರೇಶ ಉಂದಗೆ, ಶ್ರೀನಾಥ ಕಾಂಬಳೆ ಹಾಗೂ ಯೋಜನಾ ವರದಿ ಸಿದ್ಧಪಡಿಸಿದ ವಿದ್ಯಾರ್ಥಿಗಳು ಇದ್ದರು. ಸಂಶೋಧನಾ ಮಾರ್ಗದರ್ಶಕ ಡಾ. ರಾಜು ಕಂಬಾರ ಸಣ್ಣಾಟಗಳ ಹಾಡು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು. ಶಿವಕುಮಾರ ಕೋಡಿಹಾಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರ, ಶಿವಾನಂದ ಚಂಡಿಕೆ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-21-216596656

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.