ಮೂಡಲಗಿ: ‘ವಿದ್ಯಾರ್ಥಿಗಳು ಕೀಳರಿಮೆಯಿಂದ ಹೊರಬಂದು ನನ್ನಿಂದ ಎಲ್ಲವೂ ಸಾಧ್ಯ ಎನ್ನುವ ಆತ್ಮವಿಶ್ವಾಸದಿಂದ ಪ್ರಯತ್ನಪಟ್ಟರೆ ಯಶಸ್ಸು ಬೆನ್ನು ಹಿಂದೆ ಬರುತ್ತದೆ’ ಎಂದು ಗೋಕಾಕದ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ರಮೇಶ ಎಲ್. ಮಿರ್ಜಿ ಹೇಳಿದರು.

ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ, ವಾಣಿಜ್ಯ ಹಾಗೂ ಬಿಸಿಎ ಮಹಾವಿದ್ಯಾಲಯದ 2025–26ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ‘ನೀವು ಪಡೆಯುವ ಜ್ಞಾನ, ಕೌಶಲಗಳು ನಿಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ‘ವಿದ್ಯಾರ್ಥಿಗಳು ಒಳ್ಳೆಯ ಸಾಧನೆ ಮಾಡಿದರೆ ಅದು ಸಂಸ್ಥೆಗೆ ಸಲ್ಲುವ ಗೌರವ. ವಿದ್ಯಾರ್ಥಿಗಳು ಸದಾ ಶ್ರೇಷ್ಠತೆಯತ್ತ ಸಾಗಲಿ ಎನ್ನುವುದು ಸಂಸ್ಥೆಯ ಆಶಯ’ ಎಂದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕಬಡ್ಡಿ ಆಟಗಾರ, ಕಾಲೇಜು ವಿದ್ಯಾರ್ಥಿ ಚಂದ್ರು ದಾಸನ್ನವರ ಹಾಗೂ ಸೈಕ್ಲಿಂಗ್ ತಂಡಕ್ಕೆ ಆಯ್ಕೆಯಾಗಿರುವ ಪೂಜಾ ಮಠಪತಿ ಅವರನ್ನು ಗೌರವಿಸಿದರು.

ಸಂಸ್ಥೆಯ ನಿರ್ದೇಶಕರಾದ ಸಂದೀಪ ಸೋನವಾಲಕರ, ಡಾ. ಶಿವು ವಿ.ಹೊಸೂರ, ನಿವೃತ್ತ ಶಿಕ್ಷಕ ಎಸ್.ಬಿ. ಖೋತ, ಡಾ. ಪವನಕುಮಾರ ಕೆ., ಎಲ್.ಪಿ. ಹಿಡ್ಕಲ್, ಡಾ. ಬಸವಂತ ಬರಗಾಲಿ, ಪಿ.ಬಿ. ಚೌಡಕಿ, ಕೆ.ಪಿ. ಡೋಣಿ, ವೇದಾ ದೇಶಪಾಂಡೆ, ಭಾರತಿ ತಳವಾರ, ಕಾಲೇಜು ಆಡಳಿತಾಧಿಕಾರಿ ಎಸ್.ಎಲ್. ಚಿತ್ರಗಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-21-1120058865

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.