ಮುದ್ದೇಬಿಹಾಳ: ಪಟ್ಟಣದ ಹೊರವಲಯದಲ್ಲಿರುವ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಹಲವು ಮೂಲಸೌಲಭ್ಯಗಳ ಕೊರತೆ ನಡುವೆಯೂ ಶೈಕ್ಷಣಿಕ, ಸಾಂಸ್ಕೃತಿಕವಾಗಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಶಾಲೆಯು ಮಾದರಿ ಇಂಗ್ಲಿಷ್ ಮಾಧ್ಯಮ ಶಾಲೆಯಾಗಿ ರೂಪುಗೊಂಡಿದೆ.

ಶಾಲೆಯಲ್ಲಿ ಒಟ್ಟು 520 ವಿದ್ಯಾರ್ಥಿಗಳಲ್ಲಿ 249 ಹೆಣ್ಣು ಮಕ್ಕಳು, ಮತ್ತು 271 ಗಂಡು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. 18 ಜನ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದ್ಯಕ್ಕೆ ಕೇವಲ 4 ಶೌಚಾಲಯಗಳು ಇರುವುದರಿಂದ ತೊಂದರೆಯಾಗುತ್ತಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹೈಟೆಕ್ ಶೌಚಾಲಯ ಅವಶ್ಯಕತೆ ಇದೆ ಎಂದು ಶಾಲೆಯ ಸಿಬ್ಬಂದಿ ಮತ್ತು ಮಕ್ಕಳು ತಿಳಿಸಿದ್ದಾರೆ.

ಮೈದಾನದ ಕೊರತೆ: ಸಮತಟ್ಟಾದ ಮೈದಾನ ಮತ್ತು ಕಾಂಪೌಂಡ್ ಕೊರತೆ ಇದೆ. ಸೌಲಭ್ಯಗಳಿರುವ ಮೈದಾನ ಮಾಡಿ ಕೊಡಬೇಕು. ಕ್ರೀಡಾ ಸಾಮಗ್ರಿ ಒದಗಿಸಬೇಕು ಎಂದು ಎಸ್.ಡಿ.ಎಂ.ಸದಸ್ಯ ಯಲ್ಲಪ್ಪ ಮ್ಯಾಗೇರಿ ಮತ್ತು ಹಲವು ಪಾಲಕರು ಒತ್ತಾಯಿಸಿದ್ದಾರೆ.

ಸಭಾ ಭವನ : ಎಲ್ಲಾ ಮಕ್ಕಳನ್ನು ಒಂದೇಡೆ ಸೇರಿಸಿ ಕಾರ್ಯಕ್ರಮಗಳನ್ನು ಮಾಡಲು ಸಭಾ ಭವನ, ವಿಜ್ಞಾನ ಪ್ರಯೋಗಾಲಯದ ಅವಶ್ಯಕತೆ ಇದೆ ಎಂದೂ ಎಸ್ಡಿಎಂಸಿ ಸದಸ್ಯರು ಮನವಿ ತಿಳಿಸಿದ್ದಾರೆ.

ಶಾಲೆಗೆ ಸುಣ್ಣ ಬಣ್ಣ: 2021-22 ರಲ್ಲಿ ಶಾಲೆ ಉದ್ಘಾಟನೆಯಾದ ನಂತರ ಸುಣ್ಣ-ಬಣ್ಣವಾಗಿಲ್ಲ. ಬಿಸಿಲು, ಮಳೆ-ಗಾಳಿಗೆ ಬಣ್ಣ ಮಾಸಿದೆ. ಸುಮಾರು 32 ಕೋಣೆಗಳಿಗೆ ಒಳಗೆ ಮತ್ತು ಹೊರಗೆ ಮತ್ತು ಸುತ್ತಲೂ ಕಟ್ಟಡಕ್ಕೆ ಬಣ್ಣದ ಅವಶ್ಯಕತೆ ಇದೆ. ಹಾಗಾಗಿ ಈ ಸರ್ಕಾರಿ ಶಾಲೆಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಎಸ್ಡಿಎಂಸಿ ಸದಸ್ಯರು ಮನವಿ ಮಾಡಿದ್ದಾರೆ.

ಮಕ್ಕಳು ಕುಳಿತುಕೊಳ್ಳುವ ಬೆಂಚ್ ಮತ್ತು ಕಾರ್ಯಾಲಯಕ್ಕೆ ಬೇಕಾಗುವ ಪೀಠೋಪಕರಣಗಳ ಅವಶ್ಯಕತೆ ಇದೆ. ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಪ್ರತ್ಯೇಕವಾದ ಕೋಣೆ ಅವಶ್ಯಕತೆ ಇದೆ ಎಂದು ಹೇಳಿದರು.

ಶಾಲೆಯಲ್ಲಿ ಒಂದು ಕೊಳವೆಬಾವಿ ಇರುವುದರಿಂದ ನೀರು ಎಲ್ಲಾ ಮಕ್ಕಳಿಗೆ ಕುಡಿಯಲು, ಅಡುಗೆ ಮಾಡಲು ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ. ಸಾರ್ವಜನಿಕ ಕುಡಿಯುವ ನೀರಿನ ಪೈಪ್ ಲೈನ್ ಹಾಕಿಸಿ ಕೊಟ್ಟರೆ ಅನುಕೂಲ ಎಂದು ಮನವಿ ಮಾಡಿದರು.

ಆದರ್ಶ ವಿದ್ಯಾಲಯಕ್ಕೆ ತೆರಳುವ ರಸ್ತೆಯು ಸಂಪೂರ್ಣ ಹದಗೆಟ್ಟು ಹೋಗಿದ್ದು, ಶಾಸಕರು ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡುವಂತೆ ಶಾಲಾ ಸಿಬ್ಬಂದಿ, ಮಕ್ಕಳು ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-26-1783746777

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.