ಮುದ್ದೇಬಿಹಾಳ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವತಿಯಿಂದ ಆಯೋಜಿಸಲಾಗಿರುವ ಪ್ರತಿಷ್ಠಿತ ‘ಯುವ ವಿಜ್ಞಾನಿ ಕಾರ್ಯಕ್ರಮ’ (ಯುವಿಕಾ–2026) ಕ್ಕೆ ತಾಲ್ಲೂಕಿನ ಬಿದರಕುಂದಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಗ್ರಂಥಿಕಾ ಕುಂಬಾರ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿನಿಯ ಈ ವಿಶೇಷ ಸಾಧನೆಯನ್ನು ಮೆಚ್ಚಿ ಪಟ್ಟಣದ ಶ್ರೀ ಪವಾಡ ಬಸವೇಶ್ವರ ಆಶ್ರಮದ ಆವರಣದಲ್ಲಿ ಭಾನುವಾರ ಸಂಜೆ ಕುಂಬಾರ ಸಮಾಜದ ವತಿಯಿಂದ ಸಿಹಿ ಹಂಚಿ, ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ವೇಳೆ ಮುಖ್ಯಶಿಕ್ಷಕ ಶಿವಾನಂದ ಕುಂಬಾರ ಮಾತನಾಡಿ, ‘ಪಟ್ಟಣ ಭಾಗದ ವಿದ್ಯಾರ್ಥಿನಿಯೊಬ್ಬಳು ರಾಷ್ಟ್ರಮಟ್ಟದ ಇಸ್ರೋ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ಇದು ಇತರ ವಿದ್ಯಾರ್ಥಿಗಳಿಗೂ ಸ್ಫೂರ್ತಿಯಾಗಲಿ’ ಎಂದು ಹಾರೈಸಿದರು.

ಸಮಾರಂಭದಲ್ಲಿ ಕುಂಬಾರ ಸಮಾಜದ ಹಿರಿಯರಾದ ಸಂಗಣ್ಣ ಕುಂಬಾರ, ಬಸವರಾಜ ಕುಂಬಾರ (ಗೋನಾಳ), ವಿದ್ಯಾರ್ಥಿನಿಯ ತಂದೆ ಮಂಜುನಾಥ ಕುಂಬಾರ, ರಾಜಶೇಖರ ಕುಂಬಾರ, ಪತ್ರಕರ್ತ ಬಸವರಾಜ ಕುಂಬಾರ, ಅಂಬಣ್ಣ ಕುಂಬಾರ, ಮಲ್ಲಣ್ಣ ಕುಂಬಾರ, ಶರಣಬಸಪ್ಪ ಕುಂಬಾರ, ಮುತ್ತು ಕುಂಬಾರ ಹಾಗೂ ವೀರೇಶ ಚಲವಾದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-26-832362147

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.