ಮುದ್ದೇಬಿಹಾಳ: ಕಡಿಮೆ ಖರ್ಚಿನಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಕಲಿತು ವಿದ್ಯಾರ್ಥಿಗಳು ಸಾಧನೆ, ಪರಿಶ್ರಮ ಹಾಗೂ ಧೈರ್ಯ ಪ್ರವೃತ್ತಿ ಬೆಳೆಸಿಕೊಂಡು ಪಾಲಕರಿಗೆ ಸಾಧನೆಯನ್ನು ಸಮರ್ಪಿಸಬೇಕು ಎಂದು ಇಂಗ್ಲಿಷ್ ಪ್ರಾಧ್ಯಾಪಕ ಪ್ರೊ ಎಲ್.ಎಚ್.ಮಮದಾಪುರ ಹೇಳಿದರು.

ಅವರು ಸರ್ಕಾರಿ ಪದವಿ ಕಾಲೇಜಿನಲ್ಲಿ ಶನಿವಾರ ನಡೆದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

‘ಸ್ಪರ್ಧೆ ಯಾವ ಪ್ರಮಾಣದಲ್ಲೇ ಇರಲಿ, ಶಿಕ್ಷಣ ಎಲ್ಲೇ ಪಡೆಯಲಿ, ಸಾಧನೆ ಅತ್ಯಂತ ಮಹತ್ವದ್ದು ಹೀಗಾಗಿ ಗುರಿಯನ್ನು ಹಾಕಿಕೊಂಡು ವಿದ್ಯಾರ್ಥಿಗಳು ಪ್ರಯತ್ನ ಮಾಡಬೇಕು’ ಎಂದರು.

ರಸಾಯನಶಾಸ್ತ್ರ ಪ್ರಾಧ್ಯಾಪಕ ಪ್ರೊ ವಿಶ್ವರಾಜ್ ಮಾತನಾಡಿ, ವಿದ್ಯಾರ್ಥಿಗಳು ರಾಜ್ಯ ಶಿಕ್ಷಣ ವ್ಯವಸ್ಥೆಯ ಜೊತೆಗೆ ಕೇಂದ್ರ ಸರ್ಕಾರದ ಎಂಜಿನಿಯರಿಂಗ್, ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಶಿಕ್ಷಣವನ್ನು ಪಡೆಯಲು ಮುಂದಾಗಬೇಕು. ಕಲಾ ವಿಭಾಗದ ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣ ಪಡೆದರೆ, ವಕೀಲ, ತಂತ್ರಜ್ಞ, ಸಂಪನ್ಮೂಲ ಕ್ಷೇತ್ರಗಳಲ್ಲಿ ಬೆಳೆಯಬಹುದು. ಕೊನೆಗೆ ಸರ್ಕಾರಿ ನೌಕರಿ ಇಲ್ಲದಿದ್ದರೂ ಸ್ವಯಂ ಉದ್ಯೋಗ ಮಾಡಿ ಯಶಸ್ಸು ಪಡೆಯಬೇಕು ಎಂದು ಹೇಳಿದರು.

ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಪರಶುರಾಮ ದೇವಿ ಮಾತನಾಡಿದರು.

ಸಮಾರಂಭದಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ದೀಪ ನೀಡಲಾಯಿತು. ಉಪನ್ಯಾಸಕರಾದ ಡಾ.ವೈ ಎಸ್.ಗುಂಡಕರ್ಜಿಗಿ,ಮುತ್ತಣ್ಣ ಗೌಡರ್,ದನಶ್ರೀ,ಜ್ಯೋತಿ ಮಾತನಾಡಿದರು. ಉಪನ್ಯಾಸಕರಾದ ಗುರು ಬ್ಯಾಲ್ಯಳ, ಗಿರೀಶ್ ವಾಗಣಗೆರಿ, ಗೀತಾ ಅಂಕಲಗಿ,ಗೀತಾ ಬಡಿಗೇರ, ವಿದ್ಯಾ ತಳವಾರ, ರಾಜಕುಮಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-26-2027315700

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.