ಮುಧೋಳ: ‘ಜೀವನದಲ್ಲಿ ಸಾಧನೆಗೆ ವಿದ್ಯೆ ಮುಖ್ಯವೇ ಹೊರತು ಯಾವುದೇ ಜಾತಿ, ಧರ್ಮ, ಬಣ್ಣ, ಆಕಾರ, ರೂಪವಲ್ಲ. ಶಿಕ್ಷಣದಲ್ಲಿ ಓದಿನ ಜೊತೆಗೆ ಉತ್ತಮ ಆಚಾರ-ನಡೆ-ನುಡಿಗಳನ್ನು ಕಲಿಯಬೇಕು. ಹಿರಿಯರನ್ನು ಗೌರವಿಸುವುದು, ತಂದೆ-ತಾಯಿ, ಕಲಿಸಿದ ಗುರುವಿಗೆ ಗೌರವ ತರುವಂತ ಸಂಸ್ಕಾರಯುತ ಜೀವನ ನಡೆಸಬೇಕು. ಉತ್ತಮ ಸಂಸ್ಕಾರ ಅಳವಡಿಸಿಕೊಂಡರೆ ಆದರ್ಶ ಬದುಕು ನಿಮ್ಮದಾಗುತ್ತದೆ’ ಎಂದು ಬ.ವೀ.ವಿ.ಸಂಘದ ಕಾಲೇಜುಗಳ ಆಡಳಿತ ಮಂಡಳಿ ಸದಸ್ಯ ರವೀಂದ್ರ ಎಸ್. ಸಾವಳಗಿಮಠ ಹೇಳಿದರು.

ನಗರದ ದಾನಮ್ಮದೇವಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಕಾಲೇಜಿನ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಹಾಗೂ ಬಿ.ಎ., ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿನಿಯರ ಬೀಳ್ಕೊಡುವ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದರು.

ನಗರದ ಆರ್.ಎಂ.ಜಿ. ಪದವಿ-ಪೂರ್ವ ಕಾಲೇಜಿನ ಪ್ರಾಚಾರ್ಯ ಬಿ.ಎ.ಗಂಜಿಹಾಳ ಮಾತನಾಡಿ, ‘ಸಾಧಿಸುವ ಛಲವಿದ್ದರೆ ಸಾಧನೆಗೆ ಸಾವಿರ ದಾರಿಗಳಿವೆ. ಸಾಧನೆ ಮಾಡುವವರಿಗೆ ವಿವೇಚನೆ, ವೈಚಾರಿಕತೆ, ತಾತ್ವಿಕ ಚಿಂತನೆ ಇರಬೇಕು’ ಎಂದರು.

ಅಂತಿಮ ವರ್ಷದ ವಿದ್ಯಾರ್ಥಿನಿಯರಾದ ಸುಷ್ಮಿತಾ ಮಾಸರೆಡ್ಡಿ, ರಂಜಿತಾ ಯತ್ನಾಳ, ದೀಪಾ ಹುದ್ದಾರ, ಜ್ಯೋತಿ ತೇಲಿ, ಕೃತಿ ಕೋರಿ, ಲಕ್ಷ್ಮಿ ಸಿಂಗಾಡೆ, ಮೇಘಾ ಬಾರಕೇರ, ಸವೀತಾ ಕೋರೆಡ್ಡಿ ಅನುಭವ ಹಂಚಿಕೊಂಡರು.

ಪ್ರೊ.ಮಲ್ಲಿಕಾರ್ಜುನ್ ಎಂ., ಹಾಗೂ ಪ್ರೊ.ಎ.ಎನ್.ಬಾಗೇವಾಡಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಈಚೆಗೆ ಬೆಳಗಾವಿ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದ ಪ್ರಾಚಾರ್ಯ ಎಂ.ಎಂ.ಹಿರೇಮಠ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದ ಎನ್.ಎನ್. ಬಾರಕೇರ ಅವರನ್ನು ಸತ್ಕರಿಸಲಾಯಿತು. ಕ್ರೀಡೆ, ಸಾಂಸ್ಕೃತಿಕ ರಂಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಎಂ.ಎಂ.ಹಿರೇಮಠ ಮಾತನಾಡಿದರು.

ಸಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಪ್ರೊ.ಎಸ್.ಕೆ.ಸಾರವಾಡ ಸ್ವಾಗತಿಸಿದರು, ಪಿ.ವಿ.ಮನಗೂಳಿ ಅತಿಥಿಗಳನ್ನು ಪರಿಚಯಿಸಿದರು, ಪ್ರೊ.ಎಂ.ಎಸ್.ಲಂಗೋಟಿ ವರದಿ ವಾಚಿಸಿದರು. ಪ್ರೊ.ಎಲ್.ಬಿ.ಹನಮರ ವಂದಿಸಿದರು, ಹಾಗೂ ಪ್ರೊ.ಎ.ಸಿ.ಕೆರೂರ ಮತ್ತು ಪ್ರೊ.ಸೌರಭ ಜಿಗಬಡ್ಡಿ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-19-642984918

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.