ಮುಧೋಳ: ‘ಉತ್ತಮ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ. ಸಾಮಾಜಿಕ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಮತ್ತು ಸಾಮಾಜಿಕ ಸಾಮರಸ್ಯವನ್ನು ಎನ್.ಎಸ್.ಎಸ್ ಕಲಿಸಿಕೊಡುತ್ತದೆ’ ಎಂದು ಸೋಮೇಶ್ವರ ಪ್ರೌಢಶಾಲೆಯ ಅಧ್ಯಕ್ಷ ಸದಪ್ಪ ಬಟಕುರ್ಕಿ ಹೇಳಿದರು.

ತಾಲ್ಲೂಕಿನ ಗುಲಗಾಲ ಜಂಬಗಿ ಗ್ರಾಮದಲ್ಲಿ ಈಚೆಗೆ ನಡೆದ ದಾನಮ್ಮದೇವಿ ಮಹಿಳಾ ಕಾಲೇಜಿನ 2025-26ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಹಾಗೂ 2ರ ವಾರ್ಷಿಕ ಸೇವಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಂ.ಎಂ.ಹಿರೇಮಠ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ನಿಸ್ವಾರ್ಥ ಸೇವೆ, ಸೇವಾ ಮನೋಭಾವವನ್ನು ಈ ಶಿಬಿರ ಕಲಿಸುತ್ತದೆ. ಸಮಾಜದಲ್ಲಿ ಶಿಸ್ತು, ಸಂಯಮದಿಂದ ಹೇಗೆ ಬದುಕಲು ಸಾಧ್ಯ ಎಂಬುದನ್ನು ಕಲಿಸಿಕೊಡುತ್ತದೆ. ಅದನ್ನು ತಮ್ಮ ಮುಂದಿನ ಬದುಕಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

ಎನ್.ಎಸ್.ಎಸ್ ಘಟಕ-2 ಶಿಬಿರಾಧಿಕಾರಿ ಪಿ.ವಿ.ಮನಗೂಳಿ ಸ್ವಾಗತಿಸಿದರು. ಪ್ರೊ.ಎಸ್.ಕೆ.ಸಾರವಾಡ ಪ್ರಾಸ್ತಾವಿಕ ಮಾತನಾಡಿದರು. ಎನ್.ಎಸ್.ಎಸ್ ಘಟಕ- 1 ರ ಶಿಬಿರಾಧಿಕಾರಿ ಪ್ರೊ. ಎಸ್.ಬಿ. ಕಬ್ಬಿಣದ ವಂದಿಸಿದರು. ಪ್ರೊ.ಜಿ.ಎ.ಮೇತ್ರಿ ನಿರೂಪಿಸಿದರು. ಅಕ್ಷತಾ ಬಡಿಗೇರ ಹಾಗೂ ಸಂಗಡಿಗರು ಪ್ರಾರ್ಥಿಸಿ, ಎನ್.ಎಸ್.ಎಸ್ ಗೀತೆ ಹೇಳಿದರು.

ಪ್ರಮುಖರಾದ ಸೋಮಪ್ಪ ಮುಳ್ಳೂರ, ಸಂಗಪ್ಪ ಬಟಕುರ್ಕಿ, ಬಸಪ್ಪ ಮುಳ್ಳೂರ, ದುಂಡಪ್ಪ ಲಿಂಗರೆಡ್ಡಿ, ಜಗದೀಶ ಮುಳ್ಳೂರ, ಸಿದ್ಧಲಿಂಗಪ್ಪ ಅಕ್ಕಮರಡಿ, ಗುರುಲಿಂಗಪ್ಪ ರಾಮತೀರ್ಥ, ಗದಿಗೆಪ್ಪ ಕಳ್ಳಿಗುದ್ದಿ, ಅಪ್ಪಾಸಾಬ ಬಾಡಗಿ ಮುಂತಾದವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-19-1039212508

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.