ಮುಧೋಳ: ‘ಶೈಕ್ಷಣಿಕವಾಗಿ ಬೆಳೆದಿರುವ ಮಹಾ ನಗರಗಳಲ್ಲಿನ ಶಾಲಾ- ಕಾಲೇಜುಗಳಲ್ಲಿರುವ ಶಿಕ್ಷಣ ಹಾಗೂ ಸಮಗ್ರ ಶಿಕ್ಷಣಕ್ಕೆ ಪೂರಕವಾಗಿರುವ ಸೌಲಭ್ಯಗಳನ್ನು ನಗರದ ಮುಧೋಳ ರಾಯಲ್ ಸ್ಕೂಲ್ ಎಲ್ಲವನ್ನೂ ಒದಗಿಸಿಕೊಟ್ಟಿದೆ’ ಎಂದು ಹಿನ್ನಲೆ ಗಾಯಕ ರಾಜೇಶ ಕೃಷ್ಣನ್ ಹೇಳಿದರು.

ನಗರದ ಮುಧೋಳ ರಾಯಲ್ ಸ್ಕೂಲ್ನಲ್ಲಿ ರಾಯಲ್ ಶಾಲೆಯ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

‘ಅರಳಿಕಟ್ಟಿ ಫೌಂಡೇಷನ್ನ ಸಂಸ್ಥಾಪಕ ಅಧ್ಯಕ್ಷ ತಿಮ್ಮಣ್ಣ ಅರಳಿಕಟ್ಟಿ ವರು ನಗರದ 21 ವೈದ್ಯರನ್ನು ಆಹ್ವಾನಿಸಿ ಅವರಿಂದ ವಿದ್ಯಾರ್ಥಿಗಳಿಗೆ ಅಭಿನಂದನಾ ಸನ್ಮಾನ ಆಯೋಜಿಸಿರುವುದರಿಂದ ಮಕ್ಕಳ ಮೇಲೆ ವಿಶೇಷ ಪರಿಣಾಮ ಬೀರಲಿದೆ. ಮುಂದೇ ತಾವು ಕೂಡಾ ವೈದ್ಯರಾಗಬೇಕೆಂಬ ಭಾವನೆ ಮೂಡಲು ಸಾಧ್ಯವಾಗುತ್ತದೆ’ ಎಂದರು.

ಡಾ.ವಿ.ಎನ್.ನಾಯಿಕ ಡಾ.ಶಿವಾನಂದ ಕುಬಸದ, ಡಾ.ಮೋಹನ ಬಿರಾದಾರ, ‘ಈ ಪ್ರಥಮ ಬ್ಯಾಚ್ನಲ್ಲಿ ಒಟ್ಟು 36 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 22 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 12 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ಇಬ್ಬರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಸಮರ್ಥ ನಲವಡೆ ಶೇ,99 ಅಂಕ ಪಡೆದು ರಾಜ್ಯಕ್ಕೆ 9ನೇ ರ್ಯಾಂಕ್ ಪಡೆದಿದ್ದಾನೆ’ ಎಂದರು.

ಅರಳಿಕಟ್ಟ ಫೌಂಡೇಷನ್ನ ಸಂಸ್ಥಾಪಕ ಅಧ್ಯಕ್ಷ ತಿಮ್ಮಣ್ಣ ಅರಳಿಕಟ್ಟಿ ಮಾತನಾಡಿ, ‘ವಿದ್ಯಾರ್ಥಿಗಳ ಸಾಧನೆಯಿಂದ ಸಂಸ್ಥೆಯ ಕೀರ್ತಿ ಇಮ್ಮಡಿಗೊಂಡಿತು’ ಎಂದು ತಿಳಿಸಿದರು.

ನಗರದ ಡಾ.ಉದಯ ನಾಯಿಕ, ಡಾ.ವೆಂಕಟೇಶ ಮಲಘಾಣ, ಡಾ.ರಾಜೇಶ ತಲಾಠಿ, ಡಾ.ಬಸರಡ್ಡಿ, ಡಾ.ಘಾರಗೆ, ಡಾ.ಕಮಕೇರಿ, ಡಾ.ತಿರ್ಲಾಪೂರ, ಡಾ.ತಮ್ಮಣ್ಣಗೌಡ್ರ, ಡಾ.ಅಂತಾಪೂರ ಹಾಗೂ ರಾಯಲ್ ಸ್ಕೂಲ್ ಅಧ್ಯಕ್ಷೆ ಸವಿತಾ ತಿಮ್ಮಣ್ಣ ಅರಳಿಕಟ್ಟಿ, ವಿನಾಯಕ ಅರಳಿಕಟ್ಟಿ, ಆಡಳಿತಾಧಿಕಾರಿ ಇಂದಿರಾ ಸಾತನೂರ, ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-19-1018455600

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.