ಮುಧೋಳ: ‘ದಾನಿಗಳ ಮೂಲಕ ₹13 ಕೋಟಿ ವೆಚ್ಚದಲ್ಲಿ ವೇಮನ ಅಕಾಡೆಮಿ ಶಿಕ್ಷಣ ಸಂಸ್ಥೆಯು ಶೈಕ್ಷಣಿಕ ವರ್ಷದಲ್ಲಿಯೇ ಆರಂಭಿಸುತ್ತಿರುವುದು ಮುಧೋಳ ತಾಲ್ಲೂಕಿನ ಜನರನ್ನು ಅಭಿನಂದಿಸುತ್ತೇನೆ’ ಎಂದು ಮಾಜಿ ಸಚಿವ ಎಸ್.ಆರ್. ಪಾಟೀಲ ಹೇಳಿದರು.

ನಗರದ ಭಕ್ತಿ ಶಿರೋಮಣಿ ಕರ್ಮಯೋಗಿ ಹೇಮರಡ್ಡಿ ಮಲ್ಲಮ್ಮ ಶೈಕ್ಷಣಿಕ ಹಾಗೂ ಧಾರ್ಮಿಕ ಸಂಸ್ಥೆಯ ವೇಮನ ಅಕಾಡೆಮಿ ಶಾಲೆಯ ಕಟ್ಟಡ ಉದ್ಘಾಟಿಸಿ ಮಾತನಾಡಿ, ‘ದಾನಿಗಳ ಮೂಲಕ ಸಂಸ್ಥೆ ಆರಂಭಿಸಿರುವುದು ಹೆಮ್ಮೆ ಸಂಗತಿ. ತಾಲ್ಲೂಕಿನ ಜನರು ಸಾಮಾಜಿಕ ಜವಾಬ್ದಾರಿ ಮೆರೆದಿದ್ದಾರೆ’ ಎಂದರು.

ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ‘ಸ್ಪರ್ಧಾತ್ಮಕ ಜಗತ್ತಿನ ಮಧ್ಯೆಯೇ ವೇಮನ ಅಕಾಡಮಿಯೂ ವೃತ್ತಿಪರ ಕೋರ್ಸ್ಗಳನ್ನು ಆರಂಭಿಸುವ ಮೂಲಕ ಎತ್ತರಕ್ಕೆ ಬೆಳೆಯಲಿದೆ ಎಂಬ ವಿಶ್ವಾಸ ನನಗೆ ಇದೆ’ ಎಂದರು.

ಎರೆಹೊಸಳ್ಳಿ ವೇಮನಾಂದ ಶ್ರೀ ಮಾತನಾಡಿ, ‘ಶಿಲಾನ್ಯಾಸ ನೆರವೇರಿಸಿದ ಎರಡೂವರೆ ವರ್ಷದಲ್ಲಿಯೇ ಭವ್ಯ ಕಟ್ಟಡ ಉದ್ಘಾಟನೆ ಮಾಡುವ ಅವಕಾಶ ಸಿಕ್ಕಿದೆ. ಅಲ್ಲದೇ ಶೈಕ್ಷಣಿಕ ವರ್ಷದಿಂದಲೇ ಶಾಲೆಗೆ ಮಕ್ಕಳು ಪ್ರವೇಶ ಪಡೆದಿದ್ದಾರೆ’ ಎಂದರು.

ವೇಮನ ಅಕಾಡೆಮಿ ಅಧ್ಯಕ್ಷ ದಯಾನಂದ ಪಾಟೀಲ, ಶಿಕ್ಷಣ ಪ್ರೇಮಿಗಳು, ತಂತ್ರಜ್ಞಾನ ಆಧಾರಿತ, ಮೌಲ್ಯಯುತ ಶಿಕ್ಷಣವನ್ನು ನೀಡಲಾಗುವುದು ಎಂದರು.

ನಿರ್ದೇಶಕ ಹಣಮಂತಗೌಡ ಬಿರಾದಾರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ಆಡಳಿತ ಮಂಡಳಿ ನಿರ್ದೇಶಕರಾದ ವಿಠ್ಠಲ್ ನಾಗನೂರ, ಮಹಾದೇವ ದಾಸರಡ್ಡಿ, ಕೆ.ಆರ್.ಮಾಚಪ್ಪನ್ನವರ, ಶಿವನಗೌಡ ನಾಡಗೌಡ, ಎಲ್.ಎಸ್.ತಳೇವಾಡ, ತಮ್ಮಣ್ಣ ಅರಳಿಕಟ್ಟಿ, ಎನ್.ವಿ.ತುಳಸಿಗೇರಿ, ಡಾ.ಎ.ಜಿ.ಪಾಟೀಲ, ರಾಮಕೃಷ್ಣ ಬುದ್ನಿ, ಡಾ.ಸತೀಶ ಮಲಘಾಣ, ಉದಯ ಸಾರವಾಡ, ವಿವೇಕ ಕಕರಡ್ಡಿ, ಶ್ರೀಕಾಂತಗೌಡ ಗುಜ್ಜನ್ನವರ, ಶ್ರೀನಿವಾಸ ಪಾಟೀಲ.ಪ್ರಕಾಶ ಯರಗಟ್ಟಿ, ರಾಣಿ ಬರಗಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-19-1060804648

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.