ಮುಧೋಳ: ‘ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ತಮ್ಮ ಇಡೀ ಜೀವನವನ್ನೇ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಮುಡುಪಾಗಿಟ್ಟವರು ಜ್ಯೋತಿಬಾಪುಲೆ ದಂಪತಿ. ಹಾಗೆಯೇ ವಿಧಾನ ಪರಿಷತ್ತಿನಲ್ಲಿ ಒಂದೇ ಕ್ಷೇತ್ರದಿಂದ ಆಯ್ಕೆಯಾಗಿ ಗಿನ್ನಿಸ್ ರೆಕಾರ್ಡ್ ಮಾಡಿದ ಮುಧೋಳ ತಾಲೂಕಿನ ಹೆಮ್ಮೆಯ ಬಸವರಾಜ್ ಹೊರಟ್ಟಿ ದಂಪತಿ ತಮ್ಮ ಹುಟ್ಟೂರು ಯಡಹಳ್ಳಿಯಲ್ಲಿ ಶಾಲೆ ನಿರ್ಮಿಸಿ ಫೂಲೆ ದಂಪತಿ ಆದರ್ಶವನ್ನು ಸಾಕಾರಗೊಳಿಸಿದ್ದಾರೆ ಎಂದು ಎ.ಎಚ್.ಬರಗಿ ಹೇಳಿದರು.

ಅವರು ತಾಲ್ಲೂಕಿನ ಯಡಹಳ್ಳಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜದಲ್ಲಿ 2025–26ನೇ ಸಾಲಿನ ಸಾಂಸ್ಕೃತಿಕ ಕ್ರೀಡಾ, ಎನ್ ಎಸ್ ಎಸ್, ರೆಡ್ ಕ್ರಾಸ್ ಪ್ಲೇಸ್ಮೆಂಟ್ ರೇಂಜರ್ಸ್ ಹಾಗೂ ಇತರೆ ಘಟಕಗಳ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ತಾಲ್ಲೂಕಿನ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ತಿಳಿದು ತಮ್ಮ ಸ್ವಂತ ಊರಿನಲ್ಲಿಯೇ ಕೆಪಿಎಸ್ ಸಂಸ್ಥೆಯನ್ನು ಕಟ್ಟಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸ್ಥಾಪಿಸಿ ಈ ಭಾಗದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ದಾರಿದೀಪವಾಗಿದ್ದಾರೆ ಎಂದರು.

ಸಾನಿಧ್ಯವನ್ನು ವಹಿಸಿದ್ದ ಯಡಹಳ್ಳಿ ಅಡವೇಶ್ವರಮಠದ ಚಂದ್ರಶೇಖರ ಶ್ರೀಗಳು ಮಾತನಾಡಿ, ವಿದ್ಯಾರ್ಥಿನಿಯರು ಶ್ರದ್ದೆಯಿಂದ ಭಕ್ತಿಯಿಂದ ಅಭ್ಯಾಸ ಮಾಡಿದರೆ ನಿಮಗೆ ಉತ್ತಮ ಭವಿಷ್ಯವಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ರವಿ ಕಟ್ಟಿಮನಿ, ಪ್ರಾಥಮಿಕ ವಿಭಾಗದ ಮುಖ್ಯಸ್ಥ ವೀರಣ್ಣ ಕೊಡಣ್ಣವರ್ ಹಾಗೂ ಪ್ರಾಥಮಿಕ ವಿಭಾಗದ ಮುಖ್ಯಸ್ಥ ವೀರಣ್ಣ ಕೊಡಣ್ಣವರ್ ಮಾತನಾಡಿದರು.

ಸವಿತಾ ಹಲಸಗಿ, ಸಾಂಸ್ಕೃತಿಕ ಸಂಯೋಜಕಿ ಜಾನಕಿ ಕೊಳಚಿ, ಪ್ಲೇಸ್ಮೆಂಟ್ ಸೆಲ್ ಸಂಯೋಜಕಿ ಸವಿತಾ ಎಸ್.ಆರ್, ಅತಿಥಿ ಉಪನ್ಯಾಸಕರ ಸಂಯೋಜಕ ರಮೇಶ್, ಐಕ್ಯೂಎಸ್ ಸಂಯೋಜಕ ಪ್ರಶಾಂತ್, ವಿದ್ಯಾರ್ಥಿ ಕಲ್ಯಾಣ ಘಟಕದ ಸಂಯೋಜಕ ಸುರೇಶ್ ಪಟೇಲ್, ರೆಡ್ ಕ್ರಾಸ್ ಸಂಯೋಜಕ ಉದಯ್ ಡಿ.ಎಂ, ಅಧೀಕ್ಷಕಿ ಜಯಶ್ರೀ, ಗ್ರಂಥಪಾಲಕ ಸಂಜು ಕುಂಬಾರ, ಎನ್ಎಸ್ಎಸ್ ಸಂಯೋಜಕಿ ಪವಿತ್ರ ಬಿ.ಸಿ, ರೇಂಜರ್ ಸಂಯೋಜಕಿ ಅಶ್ವಿನಿ ಸಿಂದೆ ಪಾಲ್ಗೊಂಡಿದ್ದರು.

ಸುಶ್ಮಿತಾ ಸ್ವಾಗತಿಸಿದರು. ಪ್ರಶಾಂತ್ ವರದಿ ವಾಚಿಸಿದರು. ಸುಶ್ಮಿತಾ ಜಾಧವ್ ನಿರೂಪಿಸಿದರು. ಲಕ್ಷ್ಮಿ ಅಂಬಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-19-719619365

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.