ಮುಳಬಾಗಿಲು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕ ಮತ್ತು ಕೋಲಾರ ಜಾಲಪ್ಪ ಆಸ್ಪತ್ರೆ ಸಹಯೋಗದಲ್ಲಿ ಗುರುವಾರ ಉಚಿತ ರಕ್ತದಾನ ಶಿಬಿರ ನಡೆಯಿತು.

ಶಿಬಿರದಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಸ್ವ ಇಚ್ಛೆಯಿಂದ ಆಗಮಿಸಿ ರಕ್ತವನ್ನು ನೀಡಿದರು. ಬೆಳಗ್ಗೆ 10 ರಿಂದ 3 ಗಂಟೆಯವರೆಗೂ ನಡೆದ ಶಿಬಿರದಲ್ಲಿ ಒಟ್ಟು 34 ಯೂನಿಟ್ ರಕ್ತ ಸಂಗ್ರಹವಾಗಿದೆ ಎಂದು ಪ್ರಾಂಶುಪಾಲ ಡಾ.ಜಿ.ಮುನಿವೆಂಕಟಪ್ಪ ತಿಳಿಸಿದರು.

ಈ ವೇಳೆ ಮಾತನಾಡಿದ ಅವರು, ಮನುಷ್ಯನ ಪ್ರಾಣ ಉಳಿಸುವ ಸಂಜೀವಿನಿಯಂತಿರುವ ರಕ್ತವನ್ನು ಅರ್ಹರು ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಆರೋಗ್ಯ ಹಾಗೂ ಪ್ರಾಣ ಉಳಿಸಲು ಮುಂದಾಗಬೇಕು ಎಂದು ತಿಳಿಸಿದರು.

ದೇಶದ ಆರೋಗ್ಯ ಹಾಗೂ ಅಪಾಯದಲ್ಲಿರುವ ಪ್ರಾಣಗಳನ್ನು ಉಳಿಸುವ ಶಕ್ತಿ ಯುವಕರ ಕೈಯಲ್ಲಿದೆ. ಹಾಗಾಗಿ ರಕ್ತವನ್ನು ನೀಡಲು ಸಶಕ್ತರಿರುವವರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ರಕ್ತದಾನ ಮಾಡಬೇಕು ಎಂದರು.

ಡಾ.ಕೃಷ್ಣಪ್ಪ, ಡಾ.ಟಿ.ಎಸ್.ಶ್ರೀನಿವಾಸ್, ಡಾ.ಎಂ.ಎನ್.ಮೂರ್ತಿ, ಆದಿನಾರಾಯಣ, ಡಾ.ಶ್ರೀಧರ್, ಎಲ್.ಸೀನಪ್ಪ, ಲಾರೆನ್ಸ್ ಪ್ರಸನ್ನ, ಯುವ ರೆಡ್ ಕ್ರಾಸ್ ಸಂಚಾಲಕಿ ಡಾ.ಎ.ಎಸ್.ವಸುಂಧರ, ಉಮಾ, ಶಶಿಕಲಾ, ದಿನೇಶ್, ವೆಂಕಟೇಶ್, ಮೋಹನ ರೆಡ್ಡಿ, ಭಾಗ್ಯಲಕ್ಷ್ಮಿ, ಸೌಮ್ಯಪ್ರಭ, ಪುಷ್ಪಲತಾ ರೆಡ್ಡಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-18-1504716298

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.