ಮೂಲ್ಕಿ: ‘ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಪೋಷಕರು, ಸಮಾಜದ ಪಾತ್ರ ಮಹತ್ವದ್ದು’ ಎಂದು ಕಂಕನಾಡಿ ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ಮನೋವೈದ್ಯಕೀಯ ಆಪ್ತ ಸಮಾಲೋಚಕ ಕೆ.ಎಸ್. ಶ್ರೀಪತಿ ಭಟ್ ಶಿಮಂತೂರು ಹೇಳಿದರು.

ಮೂಲ್ಕಿ ಬಳಿಯ ಪುನರೂರು ವಿಶ್ವನಾಥ ದೇವಸ್ಥಾನದಲ್ಲಿ ಪುನರೂರು ಪ್ರತಿಷ್ಠಾನದ ಆಶ್ರಯದಲ್ಲಿ ಜನವಿಕಾಸ ಸಮಿತಿ ಸಹಕಾರದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ಬೇಸಿಗೆ ಶಿಬಿರ ‘ಬಾಲವಿಕಾಸ 2026’ರ ಸಮಾ ರೋಪದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿದರು.

ಶಿಬಿರಾರ್ಥಿಗಳಿಗೆ ಯೋಗ ತರಬೇತಿ ನೀಡಿದ ಯೋಗ ಗುರು ಜಯಮುದ್ದು ಶೆಟ್ಟಿ ಕೆಂಚನಕೆರೆ, ನಾರಾಯಣ ಕುಬೆವೂರು, ಶ್ಲೋಕ ಕಂಠಪಾಠ ಮಾಡಿಸಿದ ಶಾರದಾ ಸೆಂಟ್ರಲ್ ಸ್ಕೂಲ್ ಪ್ರಾಂಶುಪಾಲ ಜಿತೇಂದ್ರ ವಿ. ರಾವ್ ಹೆಜಮಾಡಿ, ಅಭಿನಯ ತರಬೇತಿ ನೀಡಿದ ರಂಗ ನಟ, ನಿರ್ದೇಶಕ ತಾರನಾಥ್ ಉರ್ವ, ಆವೆ ಮಣ್ಣಿನ ಕಲಾಕೃತಿ, ಕರಕುಶಲ ಕಲೆ ತರಬೇತಿ ನೀಡಿದ ವೆಂಕಿ ಪಲಿಮಾರು, ಭಜನಾ ತರಬೇತಿ ನೀಡಿದ ಸುರೇಶ್ ಆಚಾರ್ಯ ಹಳೆಯಂಗಡಿ ಅವರನ್ನು ಗೌರವಿಸಲಾಯಿತು.

ಪುನರೂರು ವಿಶ್ವನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್, ಮೂಲ್ಕಿ ಎಚ್.ಡಿ.ಎಫ್.ಸಿ. ಬ್ಯಾಂಕ್ ಶಾಖಾ ಪ್ರಬಂಧಕ ಅಖಿಲ್ ಕುಮಾರ್ ಆಳ್ವ, ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷೆ ಎಚ್.ಕೆ. ಉಷಾರಾಣಿ, ಖಜಾಂಚಿ ಚಂದ್ರಿಕಾ ಸುಧೀರ್, ಜನವಿಕಾಸ ಸಮಿತಿ ಮೂಲ್ಕಿ ಅಧ್ಯಕ್ಷ ಸುರೇಶ್ ರಾವ್ ಪಿ.ಎಸ್, ಪದಾಧಿಕಾರಿಗಳಾದ ಗೀತಾ ಶೆಟ್ಟಿ, ಶೋಭಾ ರಾವ್ ಭಾಗವಹಿಸಿದ್ದರು. ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಿಪ್ರಸಾದ್ ಸ್ವಾಗತಿಸಿದರು. ಪ್ರಾಣೇಶ್ ಭಟ್ ದೇಂತಡ್ಕ ವಂದಿಸಿದರು. ಹಿತಾ ಉಮೇಶ್ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-29-703440967

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.