ಮುನವಳ್ಳಿ: ಕಟಕೋಳ ಗ್ರಾಮದ ಪ್ರಿಯದರ್ಶಿನಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ 2026-27ನೇ ಸಾಲಿನ ಶಾಲಾ ಪ್ರಾರಂಭೋತ್ಸವದ ಉದ್ಘಾಟಣೆ, ಬೇಸಿಗೆ ತರಬೇತಿ ಶಿಬಿರದ ಸಮಾರೋಪ, 37ನೇ ವರ್ಷದ ಶಾಲಾ ಪ್ರಾರಂಭೋತ್ಸವದ ಸಮಾರಂಭ ಸೋಮವಾರ ವಿರಭದ್ರೇಶ್ವರ ಜ್ಞಾನಮಂಟಪದಲ್ಲಿ ವೀರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗಿತೇ’ ಎಂಬ ನಾಣ್ನುಡಿಯಂತೆ ಮಕ್ಕಳಿಗೆ ಚಿಕ್ಕವರಿದ್ದಾಗಲೇ ಸಂಸ್ಕಾರ ಹಾಗೂ ಶಿಕ್ಷಣ ನೀಡಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುವುದು ಪಾಲಕರು ಹಾಗೂ ಶಿಕ್ಷಕರ ಕರ್ತವ್ಯವಾಗಿದೆ. ಮಠ, ಮಾನ್ಯಗಳ ಶಾಲೆಗಳಲ್ಲಿ ಕಲಿತ ಮಕ್ಕಳು ಉನ್ನತ ಸ್ಥಾನಕ್ಕೆ ತಲುಪಿದ ವಿದ್ಯಾರ್ಥಿಗಳು ಶಾಲೆಗಳನ್ನು ಹಾಗೂ ಶಿಕ್ಷಕರನ್ನು ಮರೆಯಬಾರದು’ ಎಂದರು.

ರೇಣುಕ ಗಡದೇಶ್ವರ ದೇವರು, ಟಿ.ಪಿ. ಮನ್ನೊಳ್ಳಿ, ಸಂಸ್ಥೆಯ ಉಪಾಧ್ಯಕ್ಷ ಪಿ.ಎನ್. ತೋಲಗಿ, ಪ್ರಧಾನ ಕಾರ್ಯದರ್ಶಿ ಎ.ಸಿ. ಸುರಗ, ನಿರ್ದೇಶಕರಾದ ಜಿ.ಐ. ಮಾಳಪ್ಪನವರ, ಎಸ್.ಎಸ್. ಗುರ್ಲಹೊಸೂರ, ಎಸ್.ಎಂ. ಸುನ್ನಾಳ, ಬಸವರಾಜ ಮಾಢಳ್ಳಿ, ಮಾರೂತಿ ಮಾಢಳ್ಳಿ, ಡಿ.ವೈ.ಮಾಢಳ್ಳಿ, ಐ.ಎನ್ ನಿಂಗನಗೌಡ್ರ ಇದ್ದರು. ಜಿ.ಸಿ.ನಾವಲಗಿ ಸ್ವಾಗತಿಸಿದರು. ವಿ.ಎಸ್.ಜಂಗಣ್ಣವರ ನಿರೂಪಿಸಿದರು. ಎಂ.ಎಸ್.ಹಗೇದಾಳ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-21-939080891

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.