ಮುಂಡರಗಿ: ‘ಸರ್ಕಾರಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳು ಈಗ ಎಲ್ಲ ಅಗತ್ಯ ಸೌಲಭ್ಯಗಳನ್ನು ಒಳಗೊಂಡಿವೆ. ಹಾಗಾಗಿ, ಪಾಲಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಬೇಕು. ಈ ಮೂಲಕ ಕನ್ನಡ ಶಾಲೆಗಳ ಅಭಿವೃದ್ಧಿ ಹಾಗೂ ಕನ್ನಡ ಭಾಷೆ ಉಳಿವಿಗೆ ಕೈಜೋಡಿಸಬೇಕು’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಪಿ. ಶೀರನಹಳ್ಳಿ ಹೇಳಿದರು.

ಇಲ್ಲಿನ ಭೀಮಾಂಬಿಕಾ ನಗರದಲ್ಲಿರುವ ಡಾ.ಬಿ.ಎಸ್. ಮೇಟಿ ಸರ್ಕಾರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಈಚೆಗೆ ಏರ್ಪಡಿಸಿದ್ದ ಶಾಲಾ ದಾಖಲಾತಿ ಆಂದೋಲನದಲ್ಲಿ ಅವರು ಮಾತನಾಡಿದರು.

1–5ನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್, ಕಂಪಾಸ್ ಹಾಗೂ ಶಾಲಾ ಬ್ಯಾಗ್ ನೀಡುವುದಾಗಿ ಭರವಸೆ ನೀಡಿದರು.

ಶಿಕ್ಷಕ ಐ.ಎಸ್.ಮುಲ್ಲಾ ಮಾತನಾಡಿ, ‘ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಈ ಶಾಲೆಯಲ್ಲಿ ಒಂದನೇ ತರಗತಿಗೆ ದಾಖಲಾತಿ ಪಡೆಯುವ ಎಲ್ಲ ಮಕ್ಕಳ ಹೆಸರಿನಲ್ಲಿ ₹1,000 ಠೇವಣಿ ಇಡಲಾಗುವುದು’ ಎಂದು ಭರವಸೆ ನೀಡಿದರು.

ಎಸ್.ಕೆ. ರಾಜು, ದೇವು ಹಡಪದ, ಮೋಹನ ದೇಸಾಯಿ ಮಾತನಾಡಿದರು. ಬಿ.ಎಸ್. ಮೇಟಿ, ರಜನಿಕಾಂತ ದೇಸಾಯಿ, ರೇಖಾ ದೇಸಾಯಿ, ಶಂಭುಲಿಂಗಪ್ಪ ಹಕ್ಕಂಡಿ, ಜಗದೀಶ ಸಂಗಟಿ, ಎಂ.ಎಚ್. ಬಿಚಕತ್ತಿ, ಮೈನುದ್ದೀನ್ ಕವಲೂರ, ಲಕ್ಷ್ಮವ್ವ ದೇಸಾಯಿ, ಲಕ್ಷ್ಮವ್ವ ಸಂಗಟಿ,ಅಕ್ಕಮ್ಮ ಕಾತರಕಿ, ರೇಷ್ಮಾ ಇದ್ದರು.

ಮುಖ್ಯಶಿಕ್ಷಕ ಬಸವರಾಜ ಹೆಬಲಿ ಸ್ವಾಗತಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-23-1571674773

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.