ಮುಂಡರಗಿ: ‘ಪದವಿ ಹಂತದ ಶಿಕ್ಷಣದಲ್ಲಿ ವಿಷಯಗಳ ಆಯ್ಕೆ ತುಂಬಾ ಮುಖ್ಯ. ಮುತುವರ್ಜಿ ವಹಿಸಬೇಕು’ ಎಂದು ವಿಶಾಲಾಕ್ಷಿ ಅಕ್ಕಿ ಸಲಹೆ ನೀಡಿದರು.

ಇಲ್ಲಿನ ಜಗದ್ಗುರು ತೋಂಟದಾರ್ಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಠ್ಯೇತರ ಚಟುವಟಿಕೆಗಳ ಮುಕ್ತಾಯ ಸಮಾರಂಭ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ವಿನಯ, ಸಂಸ್ಕಾರ, ಶಿಸ್ತು, ಸಂಯಮ ಸೇರಿದಂತೆ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಬೇಕು. ಸಂಸ್ಕಾರ, ವಿನಯತೆಯು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತವೆ’ ಎಂದು ತಿಳಿಸಿದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎಂ.ವಿ. ಅರಳಿ ಮಾತನಾಡಿ, ‘ಇದು ಸ್ಪರ್ಧಾತ್ಮಕ ಯುಗ. ಎಲ್ಲದಕ್ಕೂ ಸ್ಪರ್ಧೆ ಎದುರಿಸಬೇಕಿದೆ. ಹೀಗಾಗಿ ವಿದ್ಯಾರ್ಥಿಗಳು ಗುರಿ ತಲುಪುವವರೆಗೂ ಹೋರಾಡಬೇಕು. ಪಠ್ಯದೊಂದಿಗೆ ಎಲ್ಲ ವಿಷಯಗಳ ಜ್ಞಾನ ಪಡೆದುಕೊಳ್ಳುವುದು ಇಂದು ಅನಿವಾರ್ಯವಾಗಿದೆ’ ಎಂದು ಹೇಳಿದರು.

ಪ್ರಾಚಾರ್ಯೆ ಉಮಾ ಕೊಳ್ಳಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಆರ್.ಎಸ್. ಪಾಟೀಲ, ರುದ್ರಗೌಡ ಪಾಟೀಲ, ಅರುಣಕ್ಕ ಪಾಟೀಲ, ಹೇಮಂತಗೌಡ ಪಾಟೀಲ, ರಾಮು ಕಲಾಲ ಮಾತನಾಡಿದರು.

ಉಪನ್ಯಾಸಕರಾದ ಕಾವೇರಿ ಬೋಲಾ, ಜಗದೀಶ ಹುಲ್ಲೂರ, ಯಮುನ ನಾಯಕ, ಪ್ರಕಾಶ ಪೂಜಾರ, ಶ್ವೇತಾ ಇದ್ದರು.

ಉಪನ್ಯಾಸಕ ಎಂ.ಬಿ.ಬದನೆಕಾಯಿ ಸ್ವಾಗತಿಸಿದರು. ಸಂತೋಷ ಕಾಗನೂರ ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-23-1773694868

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.