ಮುಂಡಗೋಡು: ಮಾತೃಭಾಷೆ ಕನ್ನಡದಲ್ಲಿ ಮಾತನಾಡುವುದು ಗೊಡ್ಡು ಸಂಪ್ರದಾಯ ಎಂದು ಭ್ರಮಿಸಿದರೆ, ನಮ್ಮಷ್ಟು ದಡ್ಡರು, ಅಲ್ಪರು, ಅಜ್ಞಾನಿಗಳು ಮತ್ಯಾರೂ ಇಲ್ಲವೆಂಬುದು ಕಟು ಸತ್ಯವಾಗಿದೆ. ತಾಯ್ನಾಡನ್ನು ಪ್ರೀತಿಸಲಾರದವರು, ಯಾರನ್ನೂ, ಏನನ್ನೂ ಪ್ರೀತಿಸಲಾರರು ಎಂದು ಸಾಹಿತಿ ಡಾ.ಪಿ.ಪಿ.ಛಬ್ಬಿ ಹೇಳಿದರು.

ಎಲ್.ವಿ.ಕೆ ಸಭಾಂಗಣದಲ್ಲಿ ಗುರುವಾರ ನಡೆದ 8ನೇ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಹಾಗೂ ಜನಸಾಮಾನ್ಯರಿಂದ ಮಾತ್ರ ಕನ್ನಡ ಭಾಷೆ ಉಳಿದು, ಬೆಳವಣಿಗೆಯಾಗುತ್ತಿದೆ. ಕನ್ನಡವನ್ನು ಕಲಿತಾಗ ಮಾತ್ರ, ಎಂತಹ ಅಮೋಘ ಭಾಷೆ ಎಂಬುದರ ಅರಿವಾಗುತ್ತದೆ. ಕನ್ನಡವನ್ನು ಪ್ರೀತಿಸುವರು, ಆಂಗ್ಲ ಭಾಷೆಯ ವಿರೋಧಿಗಳಲ್ಲ. ವ್ಯವಹಾರಿಕ ಹಾಗೂ ವೈಜ್ಞಾನಿಕ ವಿಷಯದಲ್ಲಿ ಇಂಗ್ಲೀಷ ಭಾಷೆ ಕಲಿಯಬೇಕು. ಆದರೆ, ಕನಿಷ್ಠ 5ನೇ ತರಗತಿವರೆಗಾದರೂ, ಕಡ್ಡಾಯವಾಗಿ ಕನ್ನಡವನ್ನೇ ಪ್ರಥಮ ಭಾಷೆಯಾಗಿ ಕಲಿಯಬೇಕು ಎಂದು ಹೇಳಿದರು.

ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ, ಇನ್ನೂ ಕೆಲವೇ ವರ್ಷಗಳಲ್ಲಿ ಶೇ90ರಷ್ಟು ಕನ್ನಡ ಶಾಲೆಗಳು ಮುಚ್ಚುವುದರಲ್ಲಿ ಅನುಮಾನವಿಲ್ಲ. ಈಗಾಗಲೇ ಶೇ48ರಷ್ಟು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿ, ಶಾಲೆ ಮುಚ್ಚುವ ಹಂತಕ್ಕೆ ಬಂದಿರುವುದು ಕನ್ನಡಿಗರಿಗೆ ಆಘಾತದ ವಿಷಯವಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ವಾಸರೆ ಮಾತನಾಡಿ, ಸಾಹಿತ್ಯ ಸಮ್ಮೇಳನವನ್ನು ದಾನಿಗಳ ಸಹಾಯದಿಂದ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಮಾಡುತ್ತಿದ್ದೇವೆ. ಕಳೆದ ನಾಲ್ಕು ವರ್ಷಗಳಿಂದ ಸರ್ಕಾರ ಅನುದಾನವನ್ನು ನೀಡಿಲ್ಲ. ಸಾಲ ಮಾಡಿ ಸಮ್ಮೇಳನ ಮಾಡುವ ಅಗತ್ಯವಿದೆಯೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತಿದೆ. ಸಾಹಿತ್ಯ ಪರಿಷತ್ತಿನ ಫಲಕವನ್ನು ಕೇವಲ ಲೆಟರ್ ಹೆಡ್ ಆಗಿ ಬಳಸುವ ಬದಲು, ಕನ್ನಡಾಭಿಮಾನಿಗಳ ಸಹಾಯದಿಂದ ನಿರಂತರವಾಗಿ ಸಾಹಿತ್ಯ ಸಮ್ಮೇಳನವನ್ನು ಮಾಡಬೇಕೆಂಬ ಛಲ ಇಲ್ಲಿಯವರೆಗೆ ತಂದು ನಿಲ್ಲಿಸಿದೆ ಎಂದು ಹೇಳಿದರು.

ಡಾ.ಎಂ.ಸಿ.ವಾಲಿ ಸ್ವಾಮೀಜಿ ಸಭಾಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ವಸಂತ ಕೊಣಸಾಲಿ, ಮಾಜಿ ಶಾಸಕ ವಿ.ಎಸ್.ಪಾಟೀಲ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಎಲ್.ಟಿ.ಪಾಟೀಲ, ರೋಹಿದಾಸ ನಾಯಕ, ಪುಟ್ಟು ಕುಲಕರ್ಣಿ, ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ಶಾರದಾ ರಾಠೋಡ, ತಾಲ್ಲೂಕು ಪಂಚಾಯಿತಿ ಇಒ ಟಿ.ವೈ.ದಾಸನಕೊಪ್ಪ, ಮುಖ್ಯಾಧಿಕಾರಿ ಸಂತೋಷಕುಮಾರ ಎಚ್., ಪ್ರಾಚಾರ್ಯ ಪ್ರಸನ್ನಸಿಂಗ ಹಜೇರಿ, ಬೀರಣ್ಣ ನಾಯಕ ಮೊಗಟಾ, ಎಸ್.ಡಿ.ಮುಡೆಣ್ಣವರ, ವಿನಾಯಕ ಶೇಟ, ರಮೇಶ ಅಂಬಿಗೇರ ಇದ್ದರು.

ಮೆರವಣಿಗೆ: ಸಮ್ಮೇಳನಾಧ್ಯಕ್ಷ ಡಾ.ಪಿ.ಪಿ.ಛಬ್ಬಿ ಅವರನ್ನು ಅಲಂಕೃತ ವಾಹನದಲ್ಲಿ ಸಭಾ ಕಾರ್ಯಕ್ರಮದವರೆಗೆ ಮೆರವಣಿಗೆ ಮಾಡಲಾಯಿತು. ಶಾಸಕ ಶಿವರಾಮ ಹೆಬ್ಬಾರ ಮೆರವಣಿಗೆಗೆ ಚಾಲನೆ ನೀಡಿದರು. ವಿವಿಧ ಕಲಾ ತಂಡಗಳು ಮೆರವಣಿಗೆಗೆ ಸಾಥ್ ನೀಡಿದವು. ನೂರಾರು ಸಾಹಿತ್ಯಾಭಿಮಾನಿಗಳು, ಸ್ಕೌಟ್ಸ್ ಮತ್ತು ರೋವರ್ಸ್ ತಂಡದವರು, ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು, ಅಕ್ಷರ ಜಾತ್ರೆಗೆ ಸಾಕ್ಷಿಯಾದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-20-1807450913

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.