ಚೆನ್ನೈ: ‘ದಿ ಮ್ಯೂಸಿಕ್ ಅಕಾಡೆಮಿ ಮದ್ರಾಸ್’ ಸಂಸ್ಥೆಯು 2026ನೇ ಶೈಕ್ಷಣಿಕ ಸಾಲಿನ ಜುಲೈನಿಂದ ಆರಂಭವಾಗುವ ಕರ್ನಾಟಕ ಸಂಗೀತದ ಮೂರು ವರ್ಷಗಳ ಅಡ್ವಾನ್ಸ್ಡ್ ಡಿಪ್ಲೊಮಾ ಕೋರ್ಸ್ಗೆ ಅರ್ಜಿ ಆಹ್ವಾನಿಸಿದೆ.

ಅಕಾಡೆಮಿಯ ‘ಅಡ್ವಾನ್ಸ್ಡ್ ಸ್ಕೂಲ್ ಆಫ್ ಕರ್ನಾಟಕ ಸಂಗೀತ’ ನಡೆಸುವ ಈ ಕೋರ್ಸ್ ಪ್ರತಿ ವರ್ಷ ಎರಡು ಸೆಮಿಸ್ಟರ್ಗಳನ್ನು ಹೊಂದಿರಲಿದೆ. ಸೆಮಿಸ್ಟರ್ ಅವಧಿಯು ಜುಲೈ–ನವೆಂಬರ್ ಮತ್ತು ಜನವರಿ–ಏಪ್ರಿಲ್ವರೆಗೆ ಇರಲಿದೆ. ಪ್ರತಿ ಸೆಮಿಸ್ಟರ್ನ ಕೊನೆಯಲ್ಲಿ ಪರೀಕ್ಷೆಗಳು ನಡೆಯುತ್ತವೆ. ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 8ರಿಂದ ಮಧ್ಯಾಹ್ನ 12.30ರವರೆಗೆ ಚೆನ್ನೈನಲ್ಲಿರುವ ಅಕಾಡೆಮಿ ಆವರಣದಲ್ಲಿ ತರಗತಿಗಳು ನಡೆಯುತ್ತವೆ.

ದ್ವಿತೀಯ ಪಿಯುಸಿ ಅಥವಾ 12ನೇ ತರಗತಿ ಪೂರ್ಣಗೊಳಿಸಿದ 18ರಿಂದ 30 ವರ್ಷದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜೂನ್ 15 ಕೊನೇ ದಿನ. ಆಸಕ್ತ ಅಭ್ಯರ್ಥಿಗಳು ‘ದಿ ಮ್ಯೂಸಿಕ್ ಅಕಾಡೆಮಿ ಮದ್ರಾಸ್’ ವೆಬ್ಸೈಟ್ನಿಂದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ, ತಮ್ಮ ಸಂಗೀತ ತರಬೇತಿಯ ವಿವರಗಳೊಂದಿಗೆ ಇಮೇಲ್ ಮಾಡಬಹುದು.

ಮಾಹಿತಿಗೆ ದೂ.ಸಂ. 044–28112231, 044–28116902, ಅಥವಾ 044–28115162 ಸಂಪರ್ಕಿಸಬಹುದು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-51-242039419

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.